Home ಕರಾವಳಿ Archive by category ಉಳ್ಳಾಳ (Page 6)

ಉಳ್ಳಾಲ: ಕುಡಿಯುವ ನೀರಿಗೆ ತೊಂದರೆಯಾಗದಂತೆ ಟಾಸ್ಕ್ ಫೋರ್ಸ್ ರಚನೆ: ಯು.ಟಿ ಖಾದರ್

ಉಳ್ಳಾಲ:  ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನೀರಿನ ಅಭಾವ ತಪ್ಪಿಸಲು ಟ್ಯಾಂಕರ್ ಮಾನಿಟರಿಂಗ್ ಆಪ್‌ನ್ನು ಶೀಘ್ರವೇ ಅನುಷ್ಠಾನಗೊಳಿಸಲಾಗುವುದು. ತಾಂತ್ರಿಕ ತೊಂದರೆಗಳಾಗದಂತೆ ಪೂರ್ವಭಾವಿಯಾಗಿ ಅಧಿಕಾರಿಗಳಿಗೆ, ಪಿಡಿಓಗಳಿಗೆ  ಪ್ರಾತ್ಯಕ್ಷಿಕೆ ಹಾಗೂ ತರಬೇತಿಗಳನ್ನು  ನೀಡುವ ಯೋಜನೆ ರೂಪಿಸಲಾಗಿದೆ ಎಂದು ವಿಧಾನಸಭಾ ಅಧ್ಯಕ್ಷ ಯು.ಟಿ ಖಾದರ್ ಹೇಳಿದರು.

ಉಳ್ಳಾಲ: ಸಿಟಿ ಬಸ್ ಚಾಲಕ ಸಮುದ್ರಕ್ಕೆ ಹಾರಿ ಆತ್ಮಹತ್ಯೆ

ಉಳ್ಳಾಲ: ಸಿಟಿ ಬಸ್ ಚಾಲಕ ಸಮುದ್ರಕ್ಕೆ ಹಾರಿ ಆತ್ಮಹತ್ಯೆ ನಡೆಸಿಕೊಂಡಿರುವ ಘಟನೆ ಸೋಮೇಶ್ವರ ಸಮುದ್ರ ತೀರದಲ್ಲಿ ನಡೆದಿದೆ. ಕೊಂಡಾಣ ಬೆಳರಿಂಗೆ ನಿವಾಸಿ ವೆಂಕಪ್ಪ ಶೆಟ್ಟಿ ಎಂಬವರ ಪುತ್ರ ಜಗದೀಶ್ (39) ಮೃತರು. ಸ್ಟೇಟ್ ಬ್ಯಾಂಕ್ ಕಿನ್ಯಾ ನಡುವೆ ಚಲಿಸುವ ಮಹೇಶ್ 43 ನಂಬರಿನ ಸಿಟಿ ಬಸ್‌ನಲ್ಲಿ ಚಾಲಕರಾಗಿದ್ದ ಇವರು,  ಇಂದು ನಸುಕಿನ ಜಾವ ಸೋಮೇಶ್ವರ ರುದ್ರಪಾದೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೃತ್ಯ ಎಸಗುವ ಮುನ್ನ ಸಮುದ್ರ ತೀರದಲ್ಲಿ

ಉಳ್ಳಾಲ : ಚೂರಿ ಇರಿದು ಯುವಕನ ಹತ್ಯೆ

ಉಳ್ಳಾಲ: ಯುವಕನೋರ್ವನನ್ನು ಚೂರಿಯಿಂದ ಇರಿದು ಹತ್ಯೆ ನಡೆಸಿರುವ ಘಟನೆ ಸೋಮೇಶ್ವರ ಪುರಸಭೆ ವ್ಯಾಪ್ತಿಯ ಸಾರಸ್ವತಕಾಲನಿ ಎಂಬಲ್ಲಿ ನಿನ್ನೆ ತಡರಾತ್ರಿ ವೇಳೆ ಸಂಭವಿಸಿದೆ. ಸಾರಸ್ವತಕಾಲನಿ ನಿವಾಸಿ ವರುಣ್ (28) ಹತ್ಯೆಯಾದವರು. ಸ್ಥಳೀಯ ಸೂರಜ್ ಎಂಬಾತ ಕೃತ್ಯ ಎಸಗಿರುವುದಾಗಿ ಪೆÇಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ಕೊಲ್ಯ ಜಾಯ್ಲಾಂಡ್ ಶಾಲೆ ಸಮೀಪ ತಡರಾತ್ರಿ ವೇಳೆ ಸೂರಜ್ ಹಾಗೂ ಇನ್ನಿಬ್ಬರು ಮದ್ಯಪಾನ ನಡೆಸುತ್ತಿರುವುದನ್ನು ವರುಣ್ ಪ್ರಶ್ನಿಸಿದ್ದರು. ಇದರಿಂದ ಐದು

ಉಳ್ಳಾಲ: ತಲಪಾಡಿಯಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಸಾರಾಯಿ ದಂಧೆ: ಮೂವರ ವಶಕ್ಕೆ

ಗಡಿಭಾಗವಾದ ತಲಪಾಡಿಯಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಅಕ್ರಮ ಸಾರಾಯಿ ದಂಧೆ ಜಾಲವೊಂದನ್ನು ಮಂಗಳವಾರ ತಡರಾತ್ರಿ ಪತ್ತೆಹಚ್ಚಿರುವ ಅಬಕಾರಿ ಪೊಲೀಸ್ರು ಮೂವರನ್ನು ವಶಕ್ಕೆ ಪಡೆದಿದ್ದಾರೆ. ದಾಳಿ ಸಂದರ್ಭ ತಲಪಾಡಿ ಮಸೀದಿ ಬಳಿಯ ನಿವಾಸಿ ಸತೀಶ್ ತಲಪಾಡಿ, ಕುಂಜತ್ತೂರು ನಿವಾಸಿಗಳಾದ ನೌಷಾದ್ ಹಾಗೂ ಅನ್ಸೀಫ್ ಎಂಬವರನ್ನು ವಶಕ್ಕೆ ಪಡೆಯಲಾಗಿದೆ. ಓರ್ವ ಪರಾರಿಯಾಗಿದ್ದಾನೆ ಎಂದು ಅಬಕಾರಿ ಪೊಲೀಸ್ರು ತಿಳಿಸಿದ್ದಾರೆ. ದಾಳಿ ವೇಳೆ ಸತೀಶ್ ತಲಪಾಡಿ ಮನೆಯಿಂದ ಲೀಟರ್ ಗಟ್ಟಲೆ

ಉಳ್ಳಾಲ: ಅಸೈಗೋಳಿಯಲ್ಲಿ ಕ್ರಿಸ್ಮಸ್ ಕ್ರೀಡಾಕೂಟ ಉದ್ಘಾಟನೆ

ಅಸೈಗೋಳಿ ಮೆರ್ಸಿ ಫ್ರೆಂಡ್ಸ್ ವತಿಯಿಂದ ‘ಕ್ರಿಸ್ಮಸ್ ಟ್ರೋಫಿ-2023′ ಕ್ರೀಡಾಕೂಟ ಅಸೈಗೋಳಿ ಐಟಿಐ ಕಾಲೇಜು ಮೈದಾನದಲ್ಲಿ ನಡೆಯಿತು. ಕೊಣಾಜೆ ಮಂಗಳ ಗ್ರಾಮೀಣ ಯುವಕ ಸಂಘದ ಮಾಜಿ ಅಧ್ಯಕ್ಷ ಅಬ್ದುಲ್ ನಾಸೀರ್ ಕೆ.ಕೆ. ಕ್ರಿಸ್ಮಸ್ ಟ್ರೋಫಿ-2023’ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಏಸು ಕ್ರಿಸ್ತನ ಜನ್ಮದಿನ ಪ್ರಯುಕ್ತ ಶಾಂತಿ, ಸೌಹಾರ್ದತೆ ಉದ್ದೇಶದಿಂದ ಕ್ರೀಡಾಕೂಟ ಅಯೋಜಿಸಿರುವುದು ಶ್ಲಾಘನೀಯ ಎಂದು ತಿಳಿಸಿದರು.

ಉಳ್ಳಾಲ: ಇರಾ ಶಾಲಾ ವಠಾರದಲ್ಲಿ ಹೊನಲು ಬೆಳಕಿನ ಮುಕ್ತ ವಾಲಿಬಾಲ್ ಪಂದ್ಯಾಟ

ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಸುವರ್ಣ ಮಹೋತ್ಸವ ಸಮಿತಿ ಯುವಕ ಮಂಡಲ ಇರಾ ವತಿಯಿಂದ ಹೊನಲು ಬೆಳಕಿನ ಮುಕ್ತ ವಾಲಿಬಾಲ್ ಪಂದ್ಯಾವು ಇರಾ ಶಾಲಾ ವಠಾರದಲ್ಲಿ ನಡೆಯಿತು. ಯುವಕ ಮಂಡಲ ಇರಾ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದೆ. ಸಾಮಾಜಿಕ ಕಾರ್ಯಕ್ರಮಗಳ ಜೊತೆಗೆ ಕ್ರೀಡೆಗೂ ಹೆಚ್ಚಿನ ಒತ್ತನ್ನೂ ನೀಡುತ್ತಿದ್ದು, ಹೊನಲು ಬೆಳಕಿನ ಮುಕ್ತ ವಾಲಿಬಾಲ್ ಪಂದ್ಯಾವನ್ನು ಆಯೋಜಿಸಿದ್ದರು. ಕಾರ್ಯಕ್ರಮವನ್ನು ಗಣ್ಯರು ದೀಪ ಬೆಳಗಿಸಿ ಉದ್ಘಾಟಿಸಿರು.

ಉಳ್ಳಾಲ: ಕುಡಿಯುವ ನೀರಿಗಾಗಿ ಶಾಶ್ವತ ಪರಿಹಾರ: ಸ್ಪೀಕರ್ ಖಾದರ್

ಉಳ್ಳಾಲ ನಗರಸಭೆ, ಸೋಮೇಶ್ವರ ಪುರಸಭೆ, ಕೋಟೆಕಾರು ಪಟ್ಣಣ ಪಂಚಾಯತ್ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಯೋಜನೆಗೆ 150 ಕೋಟಿ ರೂ, ಉಳ್ಳಾಲ ತಾಲೂಕು ಗ್ರಾಮೀಣ ಭಾಗದ ಕುಡಿಯುವ ನೀರಿಗೆ ಎರಡನೇ ಹಂತದ ಯೋಜನೆ 210 ಕೋಟಿ ರೂ ಸಲ್ಲಿಕೆಯಾಗಿದ್ದು, ಹಣಕಾಸು ಇಲಾಖೆಯಿಂದ ಅನುಮತಿ ಪಡೆದು ಸಚಿವ ಸಂಪುಟದ ಸಭೆಯಲ್ಲಿ ಅಂಗೀಕಾರವಾಗಲಿದ್ದು, ಮುಂದಿನ ಎರಡು ವರ್ಷದೊಳಗಡೆ ಮಂಗಳೂರು ವಿಧಾನಸಭಾ ಕ್ಷೇತ್ರದ್ಯಾಂತ ಕುಡಿಯುವ ನೀರಿಗೆ ಶಾಶ್ವತ ಪರಿಹಾರ ದೊರಕಲಿದೆ ಎಂದು ವಿಧಾನಸಭಾ ಸ್ಪೀಕರ್

ಉಳ್ಳಾಲ: ನಕಲಿ ಚಿನ್ನ ಧರಿಸಿ ಅಂಗಡಿ ಮಾಲೀಕರಿಗೆ ಮೋಸ, ಆರೋಪಿ ಗುರುತು ಪತ್ತೆ

ಉಳ್ಳಾಲ: ತೊಕ್ಕೊಟ್ಟು ಭಾಗದ ಎರಡು ಹಾಗೂ ಕುತ್ತಾರಿನಲ್ಲಿ ಒಂದು ಅಂಗಡಿಗೆ ವಂಚಿಸಿದ ಆರೋಪಿಯ ಗುರುತು ಹಿಡಿದಿರುವ ಅಂಗಡಿ ಮಾಲೀಕರು, ಉಳ್ಳಾಲ ಪೆÇಲೀಸ್ ಠಾಣೆಯಲ್ಲಿ ಕಸಬಾ ಬೆಂಗ್ರೆ ನಿವಾಸಿ, ಹಲವು ವಂಚನೆ ಪ್ರಕರಣಗಳ ಆರೋಪಿ ಗೂಡ್ಸ್ ಮುನೀರ್ ಎಂಬಾತನ ವಿರುದ್ಧ ದೂರು ದಾಖಲಿಸಿದ್ದು, ಪೆÇಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಕಳೆದ ಅಕ್ಟೋಬರ್ ತಿಂಗಳಲ್ಲಿ ತೊಕ್ಕೊಟ್ಟು ಓವರ್ ಬ್ರಿಡ್ಜ್‍ನ ಅಯ್ಯಂಗಾರ್ ಬೇಕರಿ ಮತ್ತು ಸಮೀಪದ ಪೂರ್ಣಿಮ ಎಂಬವರ ದಿನಸಿ

ಉಳ್ಳಾಲ ; ಅಕ್ರಮ ಎಂಡಿಎಂಎ ಮಾರಾಟ: ಇಬ್ಬರು ಸಿಸಿಬಿ ವಶಕ್ಕೆ

ಅಕ್ರಮವಾಗಿ ಎಂಡಿಎಂಎ ಮಾದಕ ವಸ್ತುವನ್ನು ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿರುವ ಘಟನೆ ಉಳ್ಳಾಲ ತಾಲೂಕಿನ ಮುಡಿಪು ಮೂಳೂರು ಎಂಬಲ್ಲಿ ನಡೆದಿದೆ. ಬಂಟ್ವಾಳ ತಾಲೂಕಿನ ಕೊಲ್ನಾಡು ನಿವಾಸಿಯಾಗಿರುವ ಅಬ್ದುಲ್ ರಹಿಮಾನ್(42) ಮತ್ತು ಬೆಳ್ತಂಗಡಿ ತಾಲೂಕಿನ ಇಳಂತಿಲಾ ಗ್ರಾಮದ ಮೊಹಮ್ಮದ್ ಜಿಯಾದ್ (22) ಬಂಧಿತ ಆರೋಪಿಗಳಾಗಿದ್ದು, ಬಂಧಿತರಿಂದ 1 ಲಕ್ಷ 75 ಸಾವಿರ ರೂ ಮೌಲ್ಯದ 35 ಗ್ರಾಂ

ಮುಡಿಪು: ನೇಣುಬಿಗಿದು ಯುವಕ ಆತ್ಮಹತ್ಯೆ

ಉಳ್ಳಾಲ: ಯುವಕನೋರ್ವ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುಡಿಪು ಸಮೀಪದ ಕಾರಿನ ಗ್ಯಾರೇಜ್ ನಲ್ಲಿ ನಡೆದಿದೆ.ಕಂಕನಾಡಿಯ ಕಾಂಚನ ಷೋರೂಮಿನಲ್ಲಿ ಮೆಕ್ಯಾನಿಕ್ ಆಗಿ ಕೆಲಸ ನಿರ್ವಹಿಸುತ್ತಿರುವ ಮುಡಿಪು ಗರಡಿಪಳ್ಳ ನಿವಾಸಿ ಕಿಶೋರ್ (25) ಆತ್ಮಹತ್ಯೆ ಮಾಡಿಕೊಂಡವರು. ಜಯ ಎಂಬವರಿಗೆ ಸೇರಿದ ಮುಡಿಪುವಿನ ಕಾರಿನ ಗ್ಯಾರೇಜ್ ಒಳಗಡೆ ಕಬ್ಬಿಣದ ರಾಡಿಗೆ ನೇಣು ಹಾಕಿಕೊಂಡು ಕೃತ್ಯವೆಸಗಿದ್ದಾರೆ. ನ.20 ರಂದು ಕೆಲಸಕ್ಕೆ ಹೋದವರು ತಡರಾತ್ರಿಯಾದರೂ ಮನೆಗೆ ವಾಪಸ್ಸಾಗದೇ