HomeFresh Newsಹೆದ್ದಾರಿಯಲ್ಲಿ ಪಂಜಾಬಿಯ ಸಿಸಿಟೀವಿ | ಭಾರತೀಯ ಮಿಲಿಟರಿ ಮೇಲೆ ಕಣ್ಣು | ಪಾಕಿಸ್ತಾನದ ನೆಲೆಗೆ ಮಾಹಿತಿ...

ಹೆದ್ದಾರಿಯಲ್ಲಿ ಪಂಜಾಬಿಯ ಸಿಸಿಟೀವಿ | ಭಾರತೀಯ ಮಿಲಿಟರಿ ಮೇಲೆ ಕಣ್ಣು | ಪಾಕಿಸ್ತಾನದ ನೆಲೆಗೆ ಮಾಹಿತಿ ರವಾನೆ

ದೇಶೀಯ ಹೆದ್ದಾರಿ ೪೪ರಲ್ಲಿ ಬಲ್ಜಿತ್ ಸಿಂಗ್ ಎಂಬ ವ್ಯಕ್ತಿ ಹಾಕಿದ್ದ ಸಿಸಿಟೀವಿಯು ಭಾರತೀಯ ಮಿಲಿಟರಿ ಚಲನವಲನವನ್ನು ಪಾಕಿಸ್ತಾನಕ್ಕೆ ರವಾನಿಸುತ್ತಿತ್ತು ಎಂಬ ದಿಗಿಲು ಮಾಹಿತಿಯು ಹೊರಬಿದ್ದಿದೆ.


ಬಲ್ಜಿತ್ ಸಿಂಗ್ ಅಲಿಯಾಸ್ ಬಿಟ್ಟು ಪಠಾಣ್‌ಕೋಟೆಯ ಚಕ್ ದರಿವಾಲ್ ಗ್ರಾಮದವನು. ಈತನು ತನ್ನ ಅಂಗಡಿಗೆ ಹತ್ತಿರದಲ್ಲಿ ಪಠಾಣ್‌ಕೋಟ್- ಜಮ್ಮು ಹೆದ್ದಾರಿಯ ಸೇತುವೆಯ ಬಳಿ ಒಂದು ಸಿಸಿಟೀವಿ ಅಳವಡಿಸಿದ್ದ.

ಆ ಸಿಸಿಟೀವಿ ಮೂಲಕ ಪಾಕಿಸ್ತಾನದ ಗೂಢಚರ್ಯೆ ನಡೆದಿತ್ತು ಎಂಬುದನ್ನು ಪಠಾಣ್‌ಕೋಟ್ ಪೋಲೀಸರು ಈಗ ಬಹಿರಂಗ ಪಡಿಸಿದ್ದಾರೆ. ಆ ಸಿಸಿಟೀವಿಯು ಪಠಾಣ್‌ಕೋಟ್ ಪ್ಯಾರಾ ಮಿಲಿಟರಿ ಮತ್ತು ಸೇನಾ ಠಾಣೆಯ ಚಲನವಲನವನ್ನು ಹಿಡಿದಿಡುತ್ತಿತ್ತು.

ಹಾಗೆಯೇ ಅದನ್ನು ಪಾಕಿಸ್ತಾನಕ್ಕೆ ಕಳುಹಿಸಿಕೊಡುತ್ತಿತ್ತು ಎಂಬುದು ತನಿಖೆಯಿಂದ ತಿಳಿದು ಬಂದಿದೆ.ಈ ವಿಚಕ್ಷಣೆಯು ಡಿಜಿಟಲ್ ಕೋಡ್ ಮೂಲಕ ವಿದೇಶಕ್ಕೆ, ಪಾಕಿಸ್ತಾನದ ವಿದ್ಯುನ್ಮಾನ ಕೇಂದ್ರಕ್ಕೆ ಸಾಗುತ್ತಿತ್ತು ಎಂದು ಹಿರಿಯ ಪೋಲೀಸು ಅಧಿಕಾರಿ ದಲ್ಜಿಂದರ್ ಸಿಂಗ್ ಧಿಲ್ಲೋನ್ ತಿಳಿಸಿದ್ದಾರೆ.

ವಿಚಾರಣೆಯಲ್ಲಿ ಆರೋಪಿಯು ಹೈವೇಯ ಸುಜನ್‌ಪುರ್ ಬಳಿ ಇಂಟರ್‍ನೆಟ್ ಆಧಾರಿತ ಸಿಸಿಟೀವಿ ಕ್ಯಾಮೆರಾ ಅಳವಡಿಸಿದ್ದುದನ್ನು ಒಪ್ಪಿಕೊಂಡಿದ್ದಾನೆ. ದುಬಾಯಿಯ ಒಬ್ಬ ವ್ಯಕ್ತಿ ಇದಕ್ಕೆ ತನಗೆ 40,000 ರೂಪಾಯಿ ನೀಡಿದ್ದಾಗಿಯೂ, ಆ ವ್ಯಕ್ತಿಯೇ ಅದನ್ನು ಅಲ್ಲಿ ಗಮನಿಸುತ್ತಿರುವುದಾಗಿಯೂ ಬಲ್ಜಿತ್ ಸಿಂಗ್ ಹೇಳಿದ್ದಾನೆ.

ಆ ಸಿಸಿಟೀವಿಯು ವೈಪೈ ರೌಟರ್ ಒಳಗೊಂಡಿತ್ತು. ಬಲ್ಜಿತ್ ಜೊತೆಗೆ ಅಡ್ನಾಡಿ ಕಸುಬಿನಲ್ಲಿ ಸಹಕರಿಸಿದ್ದರು ಎಂದು ವಿಕ್ರಮ್‌ಜಿತ್ ಸಿಂಗ್ ಅಲಿಯಾಸ್ ವಿಕ್ಕಾ, ಬಲ್ವಿಂದರ್ ಸಿಂಗ್ ಅಲಿಯಾಸ್ ವಿಕಿ, ತರಣ್‌ಪ್ರೀತ್ ಸಿಂಗ್ ಅಲಿಯಾಸ್ ತನ್ನು ಎನ್ನುವವರ ಮೇಲೂ ಪೋಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments