Home ಕರಾವಳಿ Archive by category ಮಂಗಳೂರು (Page 117)

ವಿದೇಶಗಳಲ್ಲಿಯೂ ಕಂಬಳ ನಡೆಯುವ ದಿನಗಳು ಬರಲಿದೆ – ಬೊಮ್ಮಯಿ

ಶಾಸಕ ಉಮಾನಾಥ್ ಕೋಟ್ಯಾನ್ ಅವರ ನೇತೃತ್ವದಲ್ಲಿ ಒಂಟಿಕಟ್ಟೆಯ ಕಡಲಕೆರೆ ನಿಸರ್ಗಧಾಮ, ವೀರರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮದಲ್ಲಿ ನಡೆಯುತ್ತಿರುವ 20 ನೇ ವರ್ಷದ ಮೂಡುಬಿದಿರೆಯ ಪ್ರತಿಷ್ಠಿತ ಹೊನಲು ಬೆಳಕಿನ ಕೋಟಿ-ಚೆನ್ನಯ ಕಂಬಳದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಬ್ಬಯಿ ಯವರು ಭಾಗವಹಿಸಿ ಸುಶಾಸನ ದಿನಾಚರಣೆಯ ಅಂಗವಾಗಿ ವಾಜಿಪೇಯಿ ಅವರ ಭಾವಚಿತ್ರವನ್ನು ಅನಾವರಣಗೊಳಿಸಿ

ಜೈನರಪವಿತ್ರ ಸ್ಥಳ ಸಮ್ಮೇದ ಶಿಖರ್ಜಿಯನ್ನು ಪ್ರವಾಸಿ ತಾಣ ಮಾಡದಂತೆ ಪ್ರಧಾನ ಮಂತ್ರಿಯವರಿಗೆ ಅಂತರ್ದೇಶೀಯ ಪತ್ರ ಬರೆಯುವ ಕಾರ್ಯಕ್ರಮ

ಜೈನರಿಗೆ ಅತ್ಯಂತ ಪವಿತ್ರ ಸ್ಥಳವಾದ ಸಮ್ಮೇದ ಶಿಖರ್ಜಿಯನ್ನು ಜಾರ್ಖಂಡ್ ರಾಜ್ಯ ಸರಕಾರ ಪವಾಸಿ ತಾಣ ಮಾಡಲು ಆದೇಶಿಸಿದ್ದು,ಇದು ಜೈನ ಪಾವಿತ್ಯಕ್ಕೆ ಧಕ್ಕೆ ತರುವ ಕೆಲಸ ಮಾಡಿರುವುದನ್ನ ಖಂಡಿಸಿ, ಡಿಸೆಂಬರ್ 28ರಂದು ಮೂಡಬಿದ್ರೆಯಲ್ಲಿ ಹಕ್ಕೋತ್ತಾಯ ಚಳುವಳಿಯನ್ನ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಹಾಗೂ ಜೈನ ಸಮುದಾಯದ ಮುಖಂಡರಾದ ಕೆ.ಅಭಯಚಂದ್ರ ಜೈನ್ ಹೇಳಿದ್ದಾರೆ. ಮಂಗಳೂರಿನ ಪ್ರೆಸ್‍ಕ್ಲಬ್‍ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,

ಜಲೀಲ್ ಹತ್ಯೆ ಪ್ರಕರಣ: ಆರೋಪಿಗಳ ಪತ್ತೆಗಾಗಿ 8ಅಧಿಕಾರಿಗಳ ತಂಡ ರಚನೆ

ಕಾಟಿಪಳ್ಳ ನಿವಾಸಿ ಜಲೀಲ್ ಹತ್ಯೆ ಪ್ರಕರಣದಲ್ಲಿ ಆರೋಪಿಗಳ ಪತ್ತೆಗೆ 8 ಅಧಿಕಾರಿಗಳಿರುವ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತರಾದ ಶಶಿಕುಮಾರ್ ಹೇಳಿದ್ದಾರೆ. ಜಲೀಲ್ ಹತ್ಯೆಗೆ ಸಂಬಂಧಿಸಿ ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತಿದೆ. ಹತ್ಯೆ ಮಾಡಿರುವ ನೈಜ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುತ್ತದೆ. ಸಾರ್ವಜನಿಕರು ಯಾವುದೇ ಊಹಾಪೋಹಗಳಿಗೆ ಕಿವಿಕೊಡಬಾರದು ಎಂದು ಹೇಳಿದರು. ಜಲೀಲ್

ಕರಾವಳಿಯಾದ್ಯಂತ ಕ್ರಿಸ್ಮಸ್ ಹಬ್ಬದ ಸಂಭ್ರಮ, ಸಡಗರ

ಕರಾವಳಿಯಾದ್ಯಂತ ಕ್ರಿಸ್ಮಸ್ ಹಬ್ಬದ ಸಡಗರ ಸಂಭ್ರಮ ಮನೆಮಾಡಿದೆ. ನಗರದ ಪ್ರಮುಖ ಚರ್ಚ್‌ಗಳಲ್ಲಿ ಹಬ್ಬದ ಪ್ರಯುಕ್ತ ಬಲಿಪೂಜೆ ನಡೆಯಿತು.  ದೀಪಾಲಂಕಾರಗೊಂಡ ಚರ್ಚ್‌ಗಳು ಮನೆಮನೆಯಲ್ಲಿ ನಕ್ಷತ್ರಗಳು, ಪ್ರಾರ್ಥನಾ ಮಂದಿರ, ಮನೆ ಮುಂಭಾಗ ಆಕರ್ಷಣೀಯ ಗೋದಲಿಗಳು, ಕ್ರಿಸ್ಮಸ್ ಟ್ರಿ, ಅದರಲ್ಲೂ ಕತ್ತಲಾಗುತ್ತಿದ್ದಂತೆ ಝಗಮಗಿಸುವ ಬೆಳಕಿನ ಮಧ್ಯೆ ಕ್ರಿಸ್ಮಸ್ ವೈಭವವನ್ನು ಕಣ್ತುಂಬಿಕೊಳ್ಳುವುದೇ ಎಲ್ಲಿಲ್ಲದ ಸಂಭ್ರಮ. ಶನಿವಾರ ಸಂಜೆ 7ರಿಂದ ನಗರದ ಮಿಲಾಗ್ರಿಸ್,

ಗ್ರಾಮೀಣ ಭಾಗದಲ್ಲಿ ಚರ್ಚ್ ಫಾದರ್ ನೇತೃತ್ವದಲ್ಲಿ ಗ್ರಾಮದ ಮನೆಗಳಿಗೆ ಭೇಟಿ

ಕ್ರಿಸ್ ಮಸ್ ಏಸುಕ್ರಿಸ್ತನ ಜನ್ಮದಿನ. ಪ್ರಪಂಚದಾದ್ಯಂತ ಕ್ರೈಸ್ತರು ಈ ಹಬ್ಬವನ್ನ ಸಂಭ್ರಮ ಸಡಗರದಿಂದ ಆಚರಿಸ್ತಾರೆ. ಅದ್ರಲ್ಲೂ ಕರಾವಳಿಯಲ್ಲಿ ಕ್ರಿಸ್ ಮಸ್ ಹಬ್ಬ ಅಂದ್ರೆ ಮತ್ತಷ್ಟು ವಿಭಿನ್ನ. ಮಂಗಳೂರಿನ ಗ್ರಾಮೀಣ ಭಾಗಗಳಲ್ಲಿ ಕ್ರಿಸ್ ಮಸ್ ಹಬ್ಬದ ತಯಾರಿ ಸಂದೇಶ ಹೇಗಿರುತ್ತೆ ಅಂತಾ ತಿಳ್ಕೋಬೇಕಾ. ಹಾಗಾದ್ರೆ ಈ ಸ್ಟೋರಿ ನೋಡಿ. ನಕ್ಷತ್ರಗಳಿಂದ ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಶೃಂಗಾರಗೊಂಡ ಮನೆಗಳು. ಎಲ್ಲರ ಮುಖದಲ್ಲೂ ಹಬ್ಬದ ಸಂಭ್ರಮದ ಕಳೆ. ಗ್ರಾಮದ ಚರ್ಚ್

ಪಿಜಿ, ಹಾಸ್ಟೆಲ್, ಹೋಮ್ ಸ್ಟೇಗಳಿಗೆ ಕಟ್ಟುನಿಟ್ಟಿನ ನಿಯಮ

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಪಿಜಿ, ಹಾಸ್ಟೆಲ್, ಹೋಮ್ ಸ್ಟೇ  ಇತ್ಯಾದಿಗೆ ಸಂಬಂಧಿಸಿದ ನಿಯಮಗಳನ್ನು ಕಟ್ಟುನಿಟ್ಟುಗೊಳಿಸಿ ಮಂಗಳೂರು ನಗರದ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಹಾಸ್ಟೆಲ್, ಹೋಂಸ್ಟೇ, ಪೇಯಿಂಗ್ ಗೆಸ್ಟ್, ಸರ್ವಿಸ್ ಅಪಾರ್ಟ್‌ಮೆಂಟ್, ವಾಣಿಜ್ಯ ಉದ್ದೇಶದ ಗೆಸ್ಟ್ ಹೌಸ್, ಶಿಕ್ಷಣ ಸಂಸ್ಥೆಗಳು ನಡೆಸುತ್ತಿರುವ ವಸತಿ ಗೃಹಗಳ ಮಾಲಕರು/ಪಾಲುದಾರರು, ಆಡಳಿತ ಮಂಡಳಿಯ ಮುಖ್ಯಸ್ಥರು ಸಂಬಂಧಿಸಿದ

ಎಕ್ಕಾರಿನಲ್ಲಿ ಸಾಂಪ್ರದಾಯಿಕ ಪೂಕರೆ ಕಂಬಳ

ಬಜಪೆ : ತುಳುನಾಡಿನ ರೈತರು ಅಪಾರ ದೈವ ನಂಬಿಕೆಯನ್ನು ಹೊಂದಿರುವವರು ತಮ್ಮ ದಿನನಿತ್ಯದ ಕೃಷಿ ಚಟುವಟಿಕೆಗಳು ಪ್ರಾರಂಭವಾಗುವುದೇ ದೈವ ದೇವರುಗಳ ಆರಾಧನೆಯಿಂದ. ತಾವು ಬೆಳೆಯುವ ಮೂರು ಬೆಳೆಗಳ ಮಧ್ಯೆ ಕೃಷಿಯ ಆರಾಧನೆಗಳು ನಡೆಯುತ್ತಾ ಇರುತ್ತದೆ.ಇಂತಹ ಆರಾಧನೆಗಳಲ್ಲಿ ಸುಗ್ಗಿ ಬೆಳೆಯ ಪ್ರಾರಂಭದಲ್ಲಿ ಆಚರಿಸುವ ಪೂಕರೆ ಕಂಬಳವು ಒಂದು. ಅತೀ ಪುರಾತನವಾದ ಪೂಕರೆ ಕಂಬಳವನ್ನು ಇಂದಿಗೂ ಆಚರಿಸಿಕೊಂಡು ಬರುತ್ತಿದ್ದಾರೆ. ಎಕ್ಕಾರು ಕೊಡಮಣಿತ್ತಾಯ ಕ್ಷೇತ್ರದ ಆಡಳಿತ ಮೂಕ್ತೇಸರರಾದ

ಕದ್ರಿ ಪಾರ್ಕ್ ಸಮೀಪದಲ್ಲಿ ಡ್ರೈನೇಜ್ ಸಮಸ್ಯೆ :ಮೂಗು ಮುಚ್ಚಿಕೊಂಡು ಸಂಚರಿಸುತ್ತಿರುವ ಸವಾರರು

ಮಂಗಳೂರಿನ ಕದ್ರಿ ಪಾರ್ಕ್ ಸಮೀಪದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿದ್ದು, ಡ್ರೈನೇಜ್ ನೀರು ರಸ್ತೆಯಲ್ಲಿ ಹರಿಯುತ್ತಿದೆ. ಕಳೆದ ಕೆಲವು ದಿನಗಳಿಂದ ಹರಿಯುತ್ತಿದ್ದು, ರಸ್ತೆಯಲ್ಲಿ ಸಂಚರಿಸುವ ಪಾದಚಾರಿಗಳು ಸೇರಿದಂತೆ ವಾಹನ ಸವಾರರು ಮೂಗು ಮುಚ್ಚಿಕೊಂಡು ನಡೆದಾಡಬೇಕಾದ ಪರಿಸ್ಥಿತಿ ಬಂದೋದಗಿದೆ. ಕೂಡಲೇ ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು ಎಚ್ಚೆತ್ತುಕೊಂಡು ಡ್ರೈನೇಜ್ ಸಮಸ್ಯೆಯನ್ನು ಸರಿಪಡಿಸಬೇಕಾಗಿದೆ.

ರಂಗಸ್ಥಳದಲ್ಲೇ ಹೃದಯಾಘಾತವಾಗಿ ಕಟೀಲು ಮೇಳದ ಕಲಾವಿದ ನಿಧನ – Guruvappa Bayar

ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ನಾಲ್ಕನೇ‌ ಮೇಳದ ಗುರುವಪ್ಪ ಬಾಯಾರು  ಯಕ್ಷಗಾನ(Yakshagana) ನಡೆಯುತ್ತಿದ್ದಾಗ ರಂಗಸ್ಥಳದಲ್ಲೇ ಹೃದಯಾಘಾತವಾಗಿ ನಿಧನರಾಗಿದ್ದಾರೆ. ಕಟೀಲಿನ ಕ್ಷೇತ್ರದ ಸರಸ್ವತೀ ಸದನದಲ್ಲಿ ಗುರುವಾರ ತ್ರಿಜನ್ಮ ಮೋಕ್ಷ ಯಕ್ಷಗಾನ ನಡೆಯುತ್ತಿತ್ತು. ಈ ಸಂದರ್ಭ ಶಿಶುಪಾಲನ ಪಾತ್ರಧಾರಿಯಾಗಿದ್ದ ಗುರುವಪ್ಪ ಬಾಯರು(Guruvappa Bayaru) ರಂಗಸ್ಥಳದಲ್ಲೇ ಇದ್ದರು. ಇನ್ನೊಂದು ಪಾತ್ರಧಾರಿ 

ಡಿ.24 -25 ರಂದು ಗಟ್ಟಿ ಸಮಾಜ ಸೇವಾ ಸಂಘದ ಅಮೃತ ಮಹೋತ್ಸವ

ಮಂಗಳೂರು: ಪೆÇಲದವರ ಯಾನೆ ಗಟ್ಟಿಯವರ ಸಮಾಜ ಸೇವಾ ಸಂಘ (ರಿ.) ಇದರ ಅಮೃತ ಮಹೋತ್ಸವ ಸಮಾರಂಭ ಡಿಸೆಂಬರ್ 24 ಮತ್ತು 25ರಂದು ನಡೆಯಲಿದ್ದು, ರಾಷ್ಟ್ರೀಯ ಹೆದ್ದಾರಿ 66ರ ಉಳ್ಳಾಲದ ತೊಕ್ಕೊಟ್ಟು ಅಂಬಿಕಾರೋಡ್ ಜಂಕ್ಷನ್‍ನಲ್ಲಿರುವ ಗಟ್ಟಿ ಸಮಾಜ ಭವನದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮಗಳು ಮಾತೃಸಂಘ, ಅಮೃತ ಮಹೋತ್ಸವ ಸಮಿತಿ, ಒಂಭತ್ತು ಮಾಗಣೆ ಸೀಮೆ ಗುರಿಕಾರರುಗಳ ಸೋಮನಾಥ ಸೇವಾ ಸಮಿತಿ, ಗಟ್ಟಿ ಸಮಾಜದ ಗುರು ಸಮಾನರಾದ ನಾಯ್ಗರ, ಮತ್ತು