ಗುರುಪುರ : ಬಸ್ ಢಿಕ್ಕಿಯಾಗಿ ಯುವಕ ಸಾವು- ಕೈಕಂಬ ಜಂಕ್ಷನ್‍ನಲ್ಲಿ ಪ್ರತಿಭಟನೆ
ಮಂಗಳೂರು: ಗುರುಪುರ ಜಂಕ್ಷನ್ ಬಳಿ ಜೂನ್ 22ರಂದು ಬಸ್ ಢಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟ ಘಟನೆಯನ್ನು ಖಂಡಿಸಿ ಶುಕ್ರವಾರ ಸ್ಥಳೀಯರು ಕೈಕಂಬ ಜಂಕ್ಷನ್‍ನಲ್ಲಿ ಬಸ್‍ಗಳನ್ನು ತಡೆದು ಪ್ರತಿಭಟನೆ ನಡೆಸಿದರು. ಬಸ್ ಢಿಕ್ಕಿಯಾಗಿ ಬೈಕ್ ಸವಾರ ಪೊಳಲಿ ಕರಿಯಂಗಳ ನಿವಾಸಿ ಸಂತೋಷ್ ಕುಮಾರ್ ಅವರು ಮೃತಪಟ್ಟಿದ್ದು ಈ ಘಟನೆಯನ್ನು ಖಂಡಿಸಿ ನೂರಾರು ಮಂದಿ ಪ್ರತಿಭಟನೆ ಸೇರಿ ವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಿಂದಾಗಿ ಕೈಕಂಬ ಜಂಕ್ಷನ್ ಸಂಪೂರ್ಣ ಬ್ಲಾಕ್ ಆಗಿದ್ದು, ಬಸ್‍ಗಳನ್ನು ಸ್ಥಳದಿಂದ ತೆರಳಲು ಬಿಡದ ಹಿನ್ನೆಲೆಯಲ್ಲಿ ಮೂಡುಬಿದಿರೆ, ಮಂಗಳೂರು, ಬಜಪೆ, ಪೆÇಳಲಿ ಬಿಸಿರೋಡ್ ಮೊದಲಾದೆಡೆಗೆ ತೆರಳುವ ಪಯಾಣಿಕರು ಬಸ್‍ನಲ್ಲೇ ಬಾಕಿಯಾಗಿದ್ದಾರೆ. ಬಜಪೆ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ.