ಮಂಗಳೂರು : ಕುರ್ಬಾನಿ ಹೆಸರಿನಲ್ಲಿ ಅಕ್ರಮ ಗೋಸಾಗಾಟ

ಕುರ್ಬಾನಿ ಹೆಸರಿನಲ್ಲಿ ಅಕ್ರಮ ಗೋಸಾಗಾಟ ಮತ್ತು ಗೋವಂಶ ಹತ್ಯೆ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಬಜರಂಗದಳದ ಪ್ರಾಂತ ಸಂಯೋಜಕ ಸುನೀಲ್ ಕೆ.ಆರ್. ಆಗ್ರಹಿಸಿದ್ದಾರೆ. ಅವರು ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು.

ಗೋವು ಹಿಂದುಗಳ ಶ್ರದ್ಧಾ ಬಿಂದುವಾಗಿದ್ದು, ಆ ಗೋವಿಗೋಸ್ಕರ ನೂರಾರು ವರ್ಷಗಳ ಕಾಲ ಹಿಂದೂ ಸಮಾಜ ಹೋರಾಟ ಮಾಡಿದೆ. ಜೂನ್ 29ರಂದು ಬಕ್ರೀದ್ ನಡೆಯಲಿದ್ದು, ಕುರ್ಬಾನಿ ಹೆಸರಿನಲ್ಲಿ ಗೋವುಗಳ ವಧೆ ನಡೆಯುವ ಸಾಧ್ಯತೆ ಇದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಯಾವುದೇ ಕಾರಣಕ್ಕೂ ಅನುಮತಿ ಕೊಡಬಾರದು. ಗೋವುಗಳ ಬಲಿಯನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕು. ಇಂದಿನಿಂದ ಜೂನ್ 30ರ ವರೆಗೆ ಗೋಸಾಗಾಟ ತಡೆಯಲು ಚೆಕ್ ಪೋಸ್ಟ್, ನಾಕಾ ಬಂಧಿ ಹಾಕಿ ವಿಶೇಷ ಪೊಲೀಸ್ ತಂಡ ರಚನೆ ಮಾಡಬೇಕು ಎಂದು ಆಗ್ರಹಿಸಿದರು.

ಸೌಜನ್ಯ ಹತ್ಯೆಯ ಬಗ್ಗೆ ಮಾತನಾಡಿದ ಅವರು, ಸೌಜನ್ಯ ಹತ್ಯಾ ಪ್ರಕರಣ ಇಡೀ ಕರಾವಳಿ ಭಾಗಕ್ಕೆ ಒಂದು ಕಪ್ಪು ಚುಕ್ಕೆ. ಅವಳ ಕುಟುಂಬಕ್ಕೆ ನ್ಯಾಯ ಸಿಗಲೇಬೇಕು ಎಂದ ಅವರು ಸೌಜನ್ಯ ಪರವಾಗಿ ನಡೆದ ಹೋರಾಟದಲ್ಲಿ ಹಿಂದೆಯೂ ವಿಶ್ವಹಿಂದು ಪರಿಷತ್ ಮತ್ತು ಬಜರಂಗದಳ ಜತೆಗೂಡಿದೆ. ಮುಂದೆಯೂ ನ್ಯಾಯಕ್ಕಾಗಿ ನಡೆಯುವ ಹೋರಾಟದಲ್ಲಿ ಕೈಜೋಡಿಸಲಿದೆ ಎಂದರು. ಈ ಸಂದರ್ಭ ಸುದ್ದಿಗೋಷ್ಟಿಯಲ್ಲಿ ಬಜರಂಗದಳ ವಿಭಾಗದ ಸಂಯೋಜಕರಾದ ಭುಜಂಗ ಕುಲಾಲ್, ಪುನೀತ್ ಅತ್ತಾವರ ಉಪಸ್ಥಿತರಿದ್ದರು.

Related Posts

Leave a Reply

Your email address will not be published.