Home Archive by category ಕರಾವಳಿ (Page 364)

ಕೊಲ್ಯ ಭೀಕರ ಕಾರು ಅಪಘಾತ : ಒರ್ವ ಸಾವು ಮೂವರಿಗೆ ಗಾಯ

ಮಂಜೇಶ್ವರ : ಗಡಿ ಪ್ರದೇಶಕ್ಕೆ ಸಮೀಪದ ಕೊಲ್ಯ ಎಂಬಲ್ಲಿ ಭಾನುವಾರದಂದು ರಾತ್ರಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಒಬ್ಬ ಸ್ಥಳದಲ್ಲೇ ಸಾವನ್ನಪ್ಪಿ ಇತರ ಮೂವರು ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗಾಯಗೊಂಡವರ ಪೈಕಿ ಒಬ್ಬನ ಸ್ಥಿತಿ ಚಿಂತಾಜನಕವಾಗಿರುವುದಾಗಿ ಮಾಹಿತಿ ಲಭಿಸಿದೆ. ರಾಷ್ಟ್ರೀಯ ಹೆದ್ದಾರಿ 66 ಕೊಲ್ಯದ ವಿಭಜಗಕ್ಕೆ ಕಾರು ಢಿಕ್ಕಿ ಹೊಡೆದು ಈ

ಕಲ್ಲಾಪು : ನೇತ್ರಾವತಿ ನದಿಯ ತಂತ್ರಿ ರಸ್ತೆ ಬಳಿ ಅಪರಿಚಿತ ಮೃತದೇಹ ಪತ್ತೆ

ಕಲ್ಲಾಪು ಸನಿಹ ನೇತ್ರಾವತಿ ನದಿಯ ತಂತ್ರಿ ರಸ್ತೆ ಬಳಿ ಅಪರಿಚಿತ ಮೃತದೇಹ ಪತ್ತೆಯಾದ ಘಟನೆ ಜ.30ರ ಸೋಮವಾರ ಬೆಳಗ್ಗೆ ನಡೆದಿದೆ.ಮೂರು ದಿನಗಳ ಹಿಂದೆ ನದಿಗೆ ಬಿದ್ದು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದ್ದು, ಲುಂಗಿ, ಟೀಶರ್ಟ್ ಧರಿಸಿದ್ದು ಕೈಯಲ್ಲಿ ವಾಚ್, ಕೂಡ ಪತ್ತೆಯಾಗಿದೆ.ಮೃತದೇಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದ್ದು,ಉಳ್ಳಾಲ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ.ಬಜಾಲ್ ಅಥವಾ ಬಂಟ್ವಾಳ ಭಾಗದಲ್ಲಿ ನದಿಗೆ ಬಿದ್ದಿರುವ ಶಂಕೆ

ಮಾತಾ ಅಮೃತಾನಂದಮಯಿ ಮಠದಲ್ಲಿ ಜ್ಯೋತಿಷ್ಯ ತರಬೇತಿ: ಭಾರತೀಯ ಜ್ಯೋತಿಷ್ಯ ಶಾಸ್ತ್ರ ಸರ್ವ ಶ್ರೇಷ್ಠ – ಡಾ.ಶಿಕಾರಿಪುರ ಕೃಷ್ಣಮೂರ್ತಿ

ಮಂಗಳೂರು: ನಗರದ ಮಾತಾ ಅಮೃತಾನಂದಮಯಿ ಮಠದಲ್ಲಿ ಭಾರತೀಯ ಜ್ಯೋತಿಷ್ಯ ಶಾಸ್ತ್ರದ ತರಬೇತಿ ಕಾರ್ಯಕ್ರಮಕ್ಕೆ ಶ್ರೀ ಬ್ರಹ್ಮಸ್ಥಾನ ಕ್ಷೇತ್ರದಲ್ಲಿ ಚಾಲನೆ ನೀಡಲಾಯಿತು.ಮಠಾಧಿಪತಿ ಸಂಪೂಜ್ಯ ಸ್ವಾಮಿನಿ ಮಂಗಳಾಮೃತ ಪ್ರಾಣರವರು ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು.ಅವರು ಆಶೀರ್ವಚನವಿತ್ತು ಜ್ಯೋತಿಷ್ಯ ಶಾಸ್ತ್ರದ ಜ್ಞಾನ ಪಡೆದುಕೊಳ್ಳಲು ಕರೆ ನೀಡಿದರು. ಭಾರತೀಯ ಜ್ಯೋತಿಷ್ಯ ಶಾಸ್ತ್ರವು ಖಗೊಳ ಲೆಕ್ಕಾಚಾರದಲ್ಲಿ ಅತ್ಯಂತ ನಿಖರವಾಗಿದ್ದು, ಅವುಗಳನ್ನು ಅರಿತು ಮುಂದೆ ಬರಬಹುದಾದ

ಕರಾವಳಿ ಲೇಖಕಿಯರ ವಾಚಕಿಯರ ಸಂಘ ರಿ.ಇದರ ವತಿಯಿಂದ ನಡೆದ ಸಾರಾ ದತ್ತಿ ಪ್ರಶಸ್ತಿ ಹಾಗೂ ಚಂದ್ರ ಭಾಗಿ ರೈ ದತ್ತಿಬಹುಮಾನ ಕಾರ್ಯಕ್ರಮ

ನಾಡೋಜ ಸಾರಾ ಪ್ರಶಸ್ತಿಯನ್ನು ಶ್ರೀ ಮುದ್ರಾಡಿ ಹಾಗೂ ಚಂದ್ರಭಾಗಿ ರೈ ದತ್ತಿ ಬಹುಮಾನವನ್ನು ಅಕ್ಷತಾರಾಜ್ ಪೆರ್ಲ ಇವರಿಗೆ ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಸಾಹಿತ್ಯ ಸದನದಲ್ಲಿ ಪ್ರದಾನ ಮಾಡಲಾಯಿತು. ದಿನಾಂಕ 28-1-2023 ರಂದು ಅಪರಾಹ್ನ 2:30 ಕ್ಕೆ ಉರ್ವಸ್ಟೋರ್ ನ ಸಾಹಿತ್ಯ ಸದನದಲ್ಲಿ ಕರಾವಳಿ ಲೇಖಕಿಯರ ಸಂಘದ ಹಿರಿಯ ಸಾಹಿತಿಗಳಾದ ಸಾರಾ ಅಬೂಬಕ್ಕರ್ ದತ್ತಿ ಪ್ರಶಸ್ತಿ ಮತ್ತು ಚಂದ್ರಭಾಗಿ ರೈ ದತ್ತಿ ಬಹುಮಾನ ಕಾರ್ಯಕ್ರಮವು ಡಾ.ಜ್ಯೋತಿ ಚೆಳೈರು ಅವರ

ಕಾಪಿಕಾಡ್‍ : ಪತ್ನಿಯನ್ನು ಕೊಲೆಗೈದು ಪತಿ ಆತ್ಮಹತ್ಯೆ

ನಗರದ ಬಿಜೈ ಸಮೀಪದ ಕಾಪಿಕಾಡ್ ನಾಲ್ಕನೇ ಕ್ರಾಸ್‍ನ ಅಪಾರ್ಟ್‍ಮೆಂಟ್‍ವೊಂದರಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕೊಂದು ಬಳಿಕ ತಾನು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಶೈಲಜಾ ರಾವ್ (64) ಎಂಬವರನ್ನು ಅವರ ಪತಿ ದಿನೇಶ್ ರಾವ್ (65) ಎಂಬವರು ಉಸಿರುಗಟ್ಟಿಸಿ, ಕೊಲೆಗೈದು ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡನೆಂದು ಪೆÇಲೀಸ್ ಮೂಲಗಳು ತಿಳಿಸಿವೆ. ದಿನೇಶ್ ರಾವ್ ನಿವೃತ್ತ ಕೆನರಾ ಬ್ಯಾಂಕ್ ಉದ್ಯೋಗಿಯಾಗಿದ್ದರು ಎಂದು

ದೇರೆಬೈಲ್‍ನ ಕೇಬಲ್ ಆಪರೇಟರ್ ಕ್ಲೌಡ್ ಮೆನೇಜಸ್ ನಿಧನ

ಮಂಗಳೂರಿನ ದೇರೆಬೈಲ್‍ನ ನಿವಾಸಿಯಾಗಿರುವ ಕ್ಲೌಡ್ ಮೆನೇಜಸ್ ಅವರು ಅನಾರೋಗ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ. ಅವರಿಗೆ 53 ವರ್ಷ ಪ್ರಾಯವಾಗಿತ್ತು. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಕ್ಲೌಡ್ ಮೇನೇಜಸ್ ಅವರು ನಗರದ ಯೆಯ್ಯಾಡಿಯಲ್ಲಿರುವ ವಿ4 ಡಿಜಿಟಲ್ ಇನ್ಫೋಟೆಕ್ ಪ್ರೈವೆಟ್ ಲಿಮಿಟೆಡ್‍ನ ಪಾರ್ಟನರ್ ಆಗಿದ್ದು, ದೇರೆಬೈಲ್‍ನ

ಬಡಕುಟುಂಬದ ಹೆಣ್ಣು ಮಗಳಿಗೆ ಮದುವೆ ಮಾಡಿಸುವ ಮೂಲಕ ಮಾದರಿಯಾದ ತಿರುವೈಲು ಕಾರ್ಪೋರೇಟರ್ ಹೇಮಲತಾ ರಘು ಸಾಲ್ಯಾನ್

ಜನಪ್ರತಿನಿಧಿಗಳು ತಮ್ಮ ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸುವುದು ಸಾಮಾನ್ಯ. ಆದರೆ ಅವರ ಮಿತಿಯನ್ನು ಮೀರಿಯೂ ಜನ ಸೇವೆ ಮಾಡುವುದು ವಿರಳ. ಅಂತಹ ವಿರಳ ಜನಪ್ರತಿನಿಧಿಯೊನಬ್ಬರು ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿದ್ದಾರೆ. ಅವರ ಮಾನವೀಯತೆಯ ಸೇವೆಗೆ ಊರವರು ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಇವರು ಮಂಗಳೂರು ಮಹಾನಗರ ಪಾಲಿಕೆಯ ತಿರುವೈಲ್ ವಾರ್ಡ್‍ನ ಕಾಪೆರ್Çಲರೇಟರ್ ಹೇಮಲತಾ ರಘು ಸಾಲ್ಯಾನ್. ಪತಿ ರಘು ಸಾಲ್ಯಾನ್ ಜೊತೆ ಸೇರಿ ಸಮಾಜ ಸೇವೆಯಲ್ಲೇ

ಕಾರ್ಕಳದ ಉಮಿಕಲ್ ಬೆಟ್ಟದ ಮೇಲೆ ಪರಶುರಾಮ ಥೀಮ್ ಪಾರ್ಕ್

ಕಾರ್ಕಳ: ಪರಶುರಾಮ ಸೃಷ್ಟಿಯ ಮೂಲಕ ಸಾರ್ಥಕತೆ ಇದೆ. ಇಲ್ಲಿ ಭಾಗವಹಿಸಿದ ನಾವು ಭಾಗ್ಯವಂತರು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು. ಅವರು ಕಾರ್ಕಳ ತಾಲೂಕಿನ ಬೈಲೂರಿನಲ್ಲಿ ಉಮಿಕಲ್ ಬೆಟ್ಟದ ಮೇಲೆ 33 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಅನಾವರಣ ಗೊಳಿಸಿಮಾತನಾಡಿದರು.ಪರಶುರಾಮನ ಪುತ್ಥಳಿ ನಿರ್ಮಾಣ ಮೂಲಕ ಪುರಾಣಕ್ಕೆ ಹೊಸದೊಂದು ಕುರುಹು ಸಿಕ್ಕಿದೆ ಅಮೂಲಕ ಐತಿಹಾಸಿಕ ದಿನವಾಗಿ ಮೂಡಿಬಂದಿದೆ ಎಂದು ಸಿ ಎಂ ಬೊಮ್ಮಾಯಿ ಬಣ್ಣಿಸಿದರು . ಸಿಕ್ಕ ಅವಕಾಶವನ್ನು

ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ

ಸುಬ್ರಹ್ಮಣ್ಯ : ಮಾಜಿ ಐಪಿಎಸ್ ಅಧಿಕಾರಿ ಹಾಗೂ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಇಂದು ಇತಿಹಾಸ ಪ್ರಸಿದ್ದ ಕುಕ್ಕೆ ಸುಬ್ರಹ್ಮಣ್ಯ ದೇವಳಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಶಾಸಕ ರಾಜೇಶ್ ನಾಯಕ್ ಅವರ ನೇತೃತ್ವ ದಲ್ಲಿ ನಡೆಯಲಿರುವ ಗ್ರಾಮ ವಿಕಾಸಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಜಿಲ್ಲೆಗೆ ಆಗಿಮಿಸಿರುವ ಅಣ್ಣಾಮಲೈ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೂ ಭೇಟಿ ನೀಡಿದರು. ದೇವಳದ ಆಡಳಿತಮಂಡಳಿ

ಉಳ್ಳಾಲ ; ಕುಮ್ಕಿ ಜಮೀನಿನಿಂದ ಮರಗಳ ಕಡಿದುಅಕ್ರಮ ಸಾಗಾಟ

ಉಳ್ಳಾಲ: ಕೋಟೆಕಾರು ಪಟ್ಟಣ ಪಂಚಾಯಿತಿಗೆ ಒಳಪಟ್ಟ ಕುಮ್ಕಿ ಜಮೀನಿನಲ್ಲಿ ಮರಗಳನ್ನು ಕಡಿದು ಅಕ್ರಮವಾಗಿ ಸಾಗಿಸುತ್ತಿರುವ ಕುರಿತು ದ.ಕ ಜಿಲ್ಲಾಧಿಕಾರಿಗಳಿಗೆ ಸ್ಥಳೀಯರು ದೂರು ನೀಡಲಾಗಿದೆ. ಬಗಂಬಿಲದ ಸರ್ವೇ ನಂ. 301/3 ರಲ್ಲಿರುವ ಕುಮ್ಕಿ ಜಮೀನಿಗೆ ಹಕ್ಕುದಾರರಾಗಿರುವ ವ್ಯಕ್ತಿ ಸೇರಿದಂತೆ ಮೂವರು ದೂರು ಸಲ್ಲಿಸಿದ್ದಾರೆ. ಸ್ಥಳೀಯಾಡಳಿತ ಕುಮ್ಕಿ ಜಮೀನನ್ನು ಉಳ್ಳಾಲ ಪುರಸಭೆಗೆ ನೀಡುವ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಆಕ್ಷೇಪಣೆಯನ್ನು ವಕೀಲರ ಮೂಲಕ