ಮೂಡುಬಿದಿರೆ: ಖಾಸಗಿ ಬಸ್ಸಿನಿಂದ ಬಿದ್ದು ಮಹಿಳೆ ಸಾವು
ಮೂಡುಬಿದಿರೆ: ಖಾಸಗಿ ಬಸ್‍ನಿಂದ ಮಧ್ಯ ವಯಸ್ಸಿನ ಮಹಿಳೆಯೊಬ್ಬರು ಬಿದ್ದು ತೀವೃ ತರಹದ ಗಾಯದಿಂದಾಗಿ ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ಮೃತಪಟ್ಟ ಘಟನೆ ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯ ಮಾರೂರಿನಲ್ಲಿ ನಡೆದಿದೆ.
ಮಾರೂರು ಕುಂಟೋಡಿ ನಿವಾಸಿ ನೀಲಮ್ಮ (66ವ ) ದುರ್ಘಟನೆಯಲ್ಲಿ ಸಾವನ್ನಪ್ಪಿದವರು. ನೀಲಮ್ಮ ಅವರು ಬಿಪಿ, ಶುಗರ್ ತಪಾಸಣೆ ಮಾಡಲೆಂದು ತನ್ನ ಮೊಮ್ಮಗನ ಜತೆ ಮೂಡುಬಿದಿರೆ ಆಸ್ಪತ್ರೆಗೆಂದು ಸಾಯಿ ಟ್ರಾವೆಲ್ಸ್ ಎಂಬ ಹೆಸರಿನ ಖಾಸಗಿ ಬಸ್ಸಿಗೆ ಹತ್ತಿದರು. ಇದೇ ವೇಳೆ ಬಸ್ ಸಂಚರಿಸಿದ್ದರ ಪರಿಣಾಮ ನೀಲಮ್ಮ ಅವರು ಆಯತಪ್ಪಿ ಬಸ್ಸಿನ ಕೆಳಗೆ ಬಿದ್ದಿದ್ದಾರೆ. ತಲೆಯ ಹಿಂಭಾಗಕ್ಕೆ ಗಂಭೀರ ಗಾಯಗೊಂಡಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸುತ್ತಿರುವ ಸಂದರ್ಭ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ.
ಮೂಡುಬಿದಿರೆ ಪೆÇಲೀಸ್ ನಿರೀಕ್ಷಕ ಸಂದೇಶ್ ಅವರು ಬಸ್ಸಿನ ನಿರ್ವಾಹಕ ಅಶೋಕ್ ಮತ್ತು ಚಾಲಕ ಪ್ರಸನ್ನ ಎಂಬವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಂತರ ಜಾಮೀನಿನ ಮೇಲೆ ಇಬ್ಬರನ್ನೂ ಬಿಡುಗಡೆಗೊಳಿಸಲಾಗಿದೆ.