ದ.ಕ. ವೈನ್ ಮರ್ಚೆಂಟ್ಸ್ ಎಸೋಸಿಯೇಷನ್‍ನಿಂದ ಡಾ. ಎ. ಸದಾನಂದ ಶೆಟ್ಟಿ ಅವರಿಗೆ ಸಮ್ಮಾನ
ದಕ್ಷಿಣ ಕನ್ನಡ ಜಿಲ್ಲಾ ವೈನ್ ಮರ್ಚೆಂಟ್ಸ್ ಎಸೋಸಿಯೇಷನ್ ವತಿಯಿಂದ ಎಸೋಸಿಯೇಷನ್ ಗೌರವಾಧ್ಯಕ್ಷರಾದ, ಕುವೆಂಪು ವಿ.ವಿ. ಯಿಂದ ಗೌರವ ಡಾಕ್ಟರೇಟ್ ಪುರಸ್ಕøತರಾದ ಡಾ. ಎ. ಸದಾನಂದ ಶೆಟ್ಟಿ ಅವರನ್ನು ಮಂಗಳೂರಿನಲ್ಲಿ ಸನ್ಮಾನಿಸಲಾಯಿತು.
ಸಮ್ಮಾನ ಕಾರ್ಯಕ್ಕೆ ಕೃತಜ್ನತೆ ವ್ಯಕ್ತಪಡಿಸಿದ ಸದಾನಂದ ಶೆಟ್ಟಿ ಅವರು ಯಾವುದೇ ಸಂಘ ಸಂಸ್ಥೆಯಿರಲಿ, ಸಹಮತದ ಮೂಲಕ ಪರಸ್ಪರ ಒಗ್ಗಟ್ಟಿನಿಂದ ಇದ್ದಾಗ ಯಾವುದೇ ಸಮಸ್ಯೆ ಬಂದರೂ ಎದುರಿಸಬಹುದಾಗಿದೆ ಎಂದರು.
ಎಸೋಸಿಯೇಷನ್ ಅಧ್ಯಕ್ಷ ಎಂ. ಗಣೇಶ್ ಶೆಟ್ಟಿ ಮಾತನಾಡಿ ನಮ್ಮ ಉದ್ಯಮದ ಕಷ್ಟಕಾಲದಲ್ಲಿ ಸದಾನಂದ ಶೆಟ್ಟಿ ಅವರು ಮುಂದೆ ನಿಂತು ಸಮಸ್ಯೆ ಬಗೆ ಹರಿಸಿದ್ದಾರೆ. ಯಾವುದೇ ಪಕ್ಷಬೇಧವಿಲ್ಲದೆ ಸಮಾಜಮುಖಿ, ಉದ್ಯಮ, ಕ್ರೀಡಾ ಕ್ಷೇತ್ರಕ್ಕೆ, ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ನೀಡಿದ ದೀಮಂತ ವ್ಯಕ್ತಿಯಾಗಿದ್ದಾರೆ ಎಂದರು.
ಸವಣೂರು ಸೀತಾರಾಮ ರೈ ಶುಭ ಹಾರೈಸಿದರು. ವಿವಿಧ ತಾಲೂಕು ಹಾಗೂ ವಲಯಗಳ ಪದಾಧಿಕಾರಿಗಳನ್ನು ಇದೇ ಸಂದರ್ಭದಲ್ಲಿ ಗೌರವಿಸಿದರು.
ಜಿಲ್ಲಾ ಉಪಾಧ್ಯಕ್ಷರಾದ ಜೆ.ಎಲ್ ಪಿಂಟೋ, ನಾರಾಯಣ್ ಪಿ.ಎಂ, ಮಂಗಳೂರು ತಾಲೂಕು ಅಧ್ಯಕ್ಷ ಕೆ.ಟಿ ಸುವರ್ಣ, ಜಿಲ್ಲಾ ಕಾರ್ಯದರ್ಶಿ ಓಂಪ್ರಸಾದ್ ಬಾರ್ದಿಲಾ, ತಾಲೂಕು ವಲಯಗಳ ಅಧ್ಯಕ್ಷರು, ಪದಾದಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಜಿಲ್ಲಾ ಕೋಶಾದಿಕಾರಿ ಚಂದ್ರನಾಥ್ ಅತ್ತಾವರ ಸಮ್ಮಾನ ಪತ್ರ ವಾಚಿಸಿದರು. ದಿನೇಶ್ ಅಂಚನ್ ವಂದಿಸಿದರು. ಭಾಗ್ಯರಾಜ್ ನಿರೂಪಿಸಿದರು.