Home Archive by category Fresh News (Page 509)

ಬೈಂದೂರು ತಾಲೂಕು ಬಿಲ್ಲವರ ಸಂಘ : ಬ್ರಹ್ಮಶ್ರೀ ನಾರಾಯಣ ಗುರುಗಳ 168ನೇ ಜನ್ಮ ದಿನಾಚರಣೆ

ಬೈಂದೂರು ತಾಲೂಕು ಬಿಲ್ಲವರ ಸಂಘಇವರ ನೇತ್ರತ್ವದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 168ನೇ ಜನ್ಮ ದಿನದಪ್ರಯುಕ್ತ ಬೃಹತ್ ಗುರು ಸಂದೇಶ ವಾಹನ ಜಾಥಾ ಇಂದು ಬೈಂದೂರು ಹೊಸ ಬಸ್ ನಿಲ್ದಾಣ ದಿಂದ ಹೊರಟು ಮರವಂತೆ ಮೈದಾನದಲ್ಲಿ ಮುಕ್ತಾಯಗೊಂಡಿತು.ಬೈಂದೂರು ತಾಲೂಕು ಬಿಲ್ಲವ ಸಂಘದ ಗೌರವಾಧ್ಯಕ್ಷರಾದ ಶ್ರೀ ಕೆ ಗೋಪಾಲ ಪೂಜಾರಿಯವರುಕಾರ್ಯಕ್ರಮವನ್ನು ಉದ್ಘಾಟಿಸಿದರು

ಪಡುಮಾರ್ನಾಡು ಮಹಿಳೆಗೆ ಹಲ್ಲೆ : ಇಬ್ಬರ ಬಂಧನ

ಮೂಡುಬಿದಿರೆ: ಪಡುಮಾರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಬನ್ನಡ ಕಲ್ಲೊಟ್ಟುವಿನಲ್ಲಿ ಕುಮ್ಮಿ ಜಾಗದ ವಿಚಾರದಲ್ಲಿ ವಿವಾದ ಉಂಟಾಗಿ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಇಬ್ಬರನ್ನು ಮೂಡುಬಿದಿರೆ ಪೊಲೀಸರು ಶನಿವಾರ ಬಂದಿ ಸಿದ್ದಾರೆ. ಪಡುಮಾರ್ನಾಡು ಗ್ರಾ.ಪಂ. ಉಪಾಧ್ಯಕ್ಷ ಅಭಿನಂದನ್ ಬಲ್ಲಾಳ್ ಮತ್ತು ಅವರ ಸ್ನೇಹಿತ ಹರೀಶ್ ಹೆಗ್ಡೆ ಬಂಧಿತರು. ಪಡುಮಾರ್ನಾಡಿನಲ್ಲಿ ಕುಮ್ಮಿ ಹಕ್ಕಿಗೆ ಸಂಬಂಧಿಸಿದಂತೆ ಹರೀಶ್ ಮತ್ತು ಶಕುಂತಳ ಮಧ್ಯೆ ವ್ಯಾಜ್ಯ

ಐಎಎಸ್ ಅಧಿಕಾರಿಯಾಗಿ ಭಡ್ತಿಪಡೆದ ಸದಾಶಿವ ಪ್ರಭು : ಬಂಟಕಲ್ಲು ದೇವಳದ ಆಡಳಿತ ಮಂಡಳಿ ವತಿಯಿಂದ ಸನ್ಮಾನ

ಐಎಎಸ್ ಅಧಿಕಾರಿಯಾಗಿ ಭಡ್ತಿ ಪಡೆದ ಸದಾಶಿವ ಪ್ರಭುರವರಿಗೆ ಶ್ರೀಕ್ಷೇತ್ರ ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ದೇವಳದ ವತಿಯಿಂದ ಅಭಿನಂದಿಸಲಾಯಿತು. ಉಡುಪಿ ಜಿಲ್ಲಾ ಅಪರ ಜಿಲ್ಲಾಧಿಕಾರಿಯಾಗಿದ್ದ ಸದಾಶಿವ ಪ್ರಭುರವರು ಭಾರತ ಸರಕಾರದಿಂದ ಐಎಎಸ್ ಅಧಿಕಾರಿಯಾಗಿ ಭಡ್ತಿ ಪಡೆದು, ಬೆಂಗಳೂರು ಮೇಲ್ಮನವಿ ನ್ಯಾಯ ಮಂಡಳಿ ಸದಸ್ಯರಾಗಿ ಪ್ರಥಮ ಬಾರಿಗೆ ಶ್ರೀಕ್ಷೇತ್ರ ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ದೇವಳಕ್ಕೆ ಶನಿವಾರ ಭೇಟಿ ನೀಡಿದ ಸಂದರ್ಭ ಶ್ರೀ ಕ್ಷೇತ್ರದ ವತಿಯಿಂದ

ಪ್ರವೀಣ್ ಹತ್ಯೆ ಪ್ರಕರಣ ಆರೋಪಿ ಶಫೀಕ್ ನಿಂದ, ಹಿಂದೂ ಕಾರ್ಯಕರ್ತನಿಗೆ ಅವಾಚ್ಯ ಶಬ್ಧಗಳಿಂದ ನಿಂದನೆ

ಪ್ರವೀಣ್ ನೆಟ್ಟಾರ್ ಹತ್ಯೆಯ ಬಳಿಕ ಸಹಜ ಸ್ಥಿತಿಯತ್ತ ಮರಳುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಮತ್ತೆ ಉದ್ವಿಗ್ನ ಸ್ಥಿತಿ ತಲೆದೊರುವಮತಹ ಘಟನೆಯೊಂದು ಜರುಗಿದೆ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಶಫೀಕ್ ಎಂಬಾತನ ಸಹೋದರ ಸ್ಥಳೀಯ ಹಿಂದೂ ಸಂಘಟನೆಯ ಕಾರ್ಯಕರ್ತನಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿರುವುದಾಗಿ ಆರೋಪ ಕೇಳಿ ಬಂದಿದ್ದು, ಈ ಹಿನ್ನಲೆಯಲ್ಲಿ ಬೆಳ್ಳಾರೆ ಠಾಣೆ ಮುಂದೆ ಹಿಂದೂ ಸಂಘಟನೆಯ

ನಾರಾವಿ : ವೆಸ್ಟ್‍ಕೋಸ್ಟ್ ನ ನೂತನ ಶಾಖೆ ಉದ್ಘಾಟನೆ

ವಿವಿಧ ಬಗೆಯ ವಿನ್ಯಾಸದೊಂದಿಗೆ ಮಾರುಕಟ್ಟೆ ಗೆ ದ್ವಿಚಕ್ರ ವಾಹನವನ್ನ ಪರಿಚಯಿಸುತ್ತಿರುವ ವೆಸ್ಟ್ ಕೋಸ್ಟ್ ಮೋಟಾರ್ಸ್ ಇದೀಗ ಸುವೇಗ ಮೋಟರ್ಸ್ ಸಹಬಾಗಿತ್ವದಲ್ಲಿ ಬೆಳ್ತಂಗಡಿಯ ನಾರಾವಿಯಲ್ಲಿ ಆರಂಭಿಸಿದ ಶ್ರೀ ಗುರು ಮೋಟಾರ್ಸ್ ಶೋರೂಂನ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಗ್ರಾಹಕರು ದಸರಾ ಹಬ್ಬದ ಪ್ರಯುಕ್ತ ಹತ್ತಿರದ ಷೋರೂಮ್ ನಲ್ಲಿಯೇ ದ್ವಿಚಕ್ರ ವಾಹನ ಖರೀದಿ ಮಾಡಬೇಕು ಎನ್ನುವ ಉದ್ದೇಶದಿಂದ ನೂತನ ಶಾಖೆಯನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಬೆಳ್ತಂಗಡಿ ತಾಲೂಕಿನ

ಬಿಲ್ಲವಾಸ್ ಕತಾರ್ ನ ನೇತೃತ್ವದಲ್ಲಿ ಅಷ್ಟಮಿ-ಚೌತಿ ಸಂಭ್ರಮ

ಬಿಲ್ಲವಾಸ್ ಕತಾರ್ ನ ಅಧ್ಯಕ್ಷ ಶ್ರೀ ರಘುನಾಥ್ ಅಂಚನ್ ರವರ ಮುಂದಾಳತ್ವದಲ್ಲಿ “ಅಷ್ಟಮಿ-ಚೌತಿ” ಆಚರಣೆ ಕಾರ್ಯಕ್ರಮ “ಗ್ರಾಂಡ್ ಕತಾರ್ ಪ್ಯಾಲೇಸ್ “ನ ಸಭಾಂಗಣದಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯಿತು.ಕಾರ್ಯಕ್ರಮದ ಸ್ವಾಗತ ಭಾಷಣ ಮಾಡಿದ ಅಂಚನ್ ರವರು ಸಂಘದ ಸಾಧನೆ, ಒಗ್ಗಟ್ಟು ಮತ್ತು ಕಾರ್ಯಕ್ಷಮತೆಯನ್ನು ಶ್ಲಾಘಿಸಿದರು. ಕೃಷ್ಣ – ರಾಧೆ ಛದ್ಮವೇಷ ಸ್ಪರ್ಧೆಗೆ ಅತ್ಯಂತ ಉಲ್ಲಾಸದಿಂದ ರಂಗು ರಂಗಿನ ಬಟ್ಟೆ ತೊಟ್ಟ ಪುಟಾಣಿಗಳು

ದ.ಕ. ಜಿಲ್ಲಾ ಕಾಂಗ್ರೆಸ್‍ : ನಮ್ಮ ನಡೆ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವದೆಡೆಗೆ

ದ.ಕ. ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಘಟಕದ ವತಿಯಿಂದ ನಮ್ಮ ನಡೆ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವದೆಡೆಗೆ’ ಎಂಬ ಘೋಷ ವಾಕ್ಯದೊಂದಿಗೆ ಹಮ್ಮಿಕೊಳ್ಳಲಾಗಿರುವ ಗುರು ಸಂದೇಶ ಯಾತ್ರೆಗೆ ಮಂಗಳೂರಲ್ಲಿ ಚಾಲನೆ ಸಿಕ್ಕಿತು.ವಿಧಾನ ಪರಿಷತ್ ವಿಪಕ್ಷನಾಯಕ ಬಿ.ಕೆ. ಹರಿಪ್ರಸಾದ್ ಚಾಲನೆ ನೀಡಿದರು. ಬ್ರಹ್ಮಶ್ರೀ ನಾರಾಯಣ ಗುರುಗಳ 168ನೆ ಜನ್ಮ ಜಯಂತಿ ಆಚರಣೆಯ ನಿಮಿತ್ತ ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣದಿಂದ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದವರೆಗಿನ

ರಿಯಾಜ್ ಫರಂಗಿಪೇಟೆ ಮೇಲೆ ಬಿಜೆಪಿ ಪ್ರೇರಿತ NIA ದಾಳಿ ಖಂಡಿಸಿ ಜಿಲ್ಲೆಯ ವಿವಿಧೆಡೆ ಪ್ರತಿಭಟನೆ

ಮಂಗಳೂರು : ರಾಜಕೀಯ ಹಗೆತನ ಮುಂದಿಟ್ಟುಕೊಂಡು ಎಸ್ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಜ್ ಫರಂಗಿಪೇಟೆ ಅವರ ನಿವಾಸದ ಮೇಲೆ ಬಿಜೆಪಿ ಸರ್ಕಾರದ ಸೂಚನೆಯಂತೆ ರಾಷ್ಟ್ರೀಯ ತನಿಖಾ ದಳ ( NIA ) ದಾಳಿ ನಡೆಸಿರುವುದನ್ನು ಖಂಡಿಸಿ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಎಸ್ಡಿಪಿಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮಂಗಳೂರು ವಿಧಾನಸಭಾ ಕ್ಷೇತ್ರ ಸಮಿತಿಯ ನೇತೃತ್ವದಲ್ಲಿ ದೇರಳಕಟ್ಟೆಯಲ್ಲಿ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ರಾಜ್ಯ ಕಾರ್ಯದರ್ಶಿ ಅಶ್ರಫ್ ಮಾಚಾರ್

ಮಂಜೆಶ್ವರ : ರಸ್ತೆ ಬದಿ ಕೂಲಿ ಕಾರ್ಮಿಕನ ಮೃತದೇಹ ಪತ್ತೆ

ಮಂಜೇಶ್ವರ: ಕರ್ನಾಟಕ ನಿವಾಸಿಯಾದ ಕೂಲಿ ಕಾರ್ಮಿಕನೊಬ್ಬನನ್ನು ರಸ್ತೆ ಬದಿಯಲ್ಲಿ ಗಾಯಗಳೊಂದಿಗೆ ರಕ್ತಸಿಕ್ತವಾದ ಸ್ಥಿತಿಯಲ್ಲಿ ಪತ್ತೆ ಹಚ್ಚಲಾಗಿದೆ. ಕರ್ನಾಟಕ ಬೆಳ್ಗಾಂ ನಿವಾಸಿ ಬಸಪ್ಪ ರಾಜು ಸಾವನ್ನಪ್ಪಿದ ದುರ್ದೈವಿ. ಮಂಜೇಶ್ವರ ಪಾವೂರು ಸೂಪಿ ನಗರ ರಸ್ತೆ ಬದಿಯಲ್ಲಿ ದಾರಿಹೋಕನೊಬ್ಬ ಈ ದೃಶ್ಯವನ್ನು ಕಂಡು ಮಾಹಿತಿ ನೀಡಿದ್ದಾನೆ.ಎರಡು ದಿವಸಕ್ಕೆ ಮೊದಲು ಸೂಪಿ ನಗರ ನಿವಾಸಿಯೊಬ್ಬರು ಮಂಗಳೂರಿನಿಂದ ತೋಟದ ಕೆಲಸಕ್ಕಾಗಿ ಬಸಪ್ಪ ರಾಜುನನ್ನು ಕರೆ ತಂದಿದ್ದರು. ತೋಟದ

ಮುದುರಂಗಡಿ ಗ್ರಾಮ ಪಂಚಾಯತ್ : ಅಧ್ಯಕ್ಷ-ಉಪಾಧ್ಯಕ್ಷರ ಮೇಲೆ ಕ್ರಿಮಿನಲ್ ಕೇಸ್ ಹಿನ್ನಲೆ, ಸಭೆ ಕರೆದು ಏಕಾಏಕಿ ರದ್ದುಗೊಳಿಸಿದ ಆರೋಪ

54ನೇ ಮುದರಂಗಡಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ವಿರುದ್ಧ ಕ್ರಿಮಿನಲ್ ಪ್ರಕರಣ ಇದ್ದರೂ, ಮಾಸಿಕ ಸಭೆಯನ್ನು ಕರೆದು ಏಕಾಏಕಿ ರದ್ದುಗೊಳಿಸಿದ ಬಗ್ಗೆ ಕೆಲ ಸದಸ್ಯರು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. ಶುಕ್ರವಾರ ಬೆಳಿಗ್ಗೆ ಗ್ರಾಮ ಪಂಚಾಯತಿಗೆ ಬಂದ ಕೆಲ ಸದಸ್ಯರು ಈ ಬಗ್ಗೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಮುತ್ತು ಅವರಲ್ಲಿ ಸಭೆ ರದ್ದು ಗೊಳಿಸಿದ ಬಗ್ಗೆ ಸೃಷ್ಟಿಕರಣ ಕೇಳಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿದ ಅವರು, ಅಧ್ಯಕ್ಷ ಹಾಗೂ ಉಪಾಧ್ಯಕ್ಷರ