ಮಂಗಳೂರು: ಸಿಎಎಸ್‌ಕೆ ಇದರ 109ನೇ ವಾರ್ಷಿಕ ಸಾಮಾನ್ಯ ಸಭೆ
ಕೆಥೋಲಿಕ್ ಅಸೋಸಿಯೇಶನ್ ಆಫ್ ಸೌತ್ ಕೆನರಾ ಇದ್ರ 109ನೇ ವಾರ್ಷಿಕ ಸಾಮಾನ್ಯ ಸಭೆಯನ್ನ ಮಂಗಳೂರಿನ ಸೈಂಟ್ ಆಗ್ನೇಸ್ ಕಾಲೇಜಿನ ಅವಿಲಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಇದೇ ವೇಳೆ ಪ್ರಸ್ತಕ ಸಾಲಿನ ನೂತನ ಅಧ್ಯಕ್ಷರು, ಉಪಾಧ್ಯಕ್ಷರು , ಸದಸ್ಯರು ಆಯ್ಕೆಗೊಂಡಿದ್ರು.
ವಾ.ಓ೦೧: ಮಂಗಳೂರಿನ ಸೈಂಟ್ ಆಗ್ನೇಸ್ ಕಾಲೇಜಿನ ಅವಿಲಾ ಸಭಾಂಗಣದಲ್ಲಿ ಕೆಥೋಲಿಕ್ ಅಸೋಸಿಯೇಶನ್ ಆಫ್ ಸೌತ್ ಕೆನರಾ ಇದ್ರ 109ನೇ ವಾರ್ಷಿಕ ಸಾಮಾನ್ಯ ಸಭೆಯನ್ನ ಆಯೋಜಿಸಲಾಗಿತ್ತು. 2021-22ನೇ ಸಾಲಿನ ವಾರ್ಷಿಕ ವರದಿಯನ್ನ ಕೆಥೋಲಿಕ್ ಅಸೋಸಿಯೇಶನ್ ಆಫ್ ಸೌತ್ ಕೆನರಾ ಇದ್ರ ಅಧ್ಯಕ್ಷರಾದ ಕ್ಯಾ.ವಿನ್ಸೆಟ್ ಸಿ.ಪೈ ಅವರು ವಾಚಿಸಿದರು.
ತದ ಬಳಿಕ ಡಾ. ಡೆರಿಕ್ ಲೋಬೋ ಅವರು ಕೆಥೋಲಿಕ್ ಅಸೋಸಿಯೇಶನ್ ಆಫ್ ಸೌತ್ ಕೆನರಾ ಇದ್ರ ಶತಮಾನೋತ್ಸವ ಟ್ರಸ್ಟ್‌ನ ವರದಿಯನ್ನು ಮಂಡಿಸಿದರು.
ಈ ವೇಳೆ 2022-24 ಅವಧಿಗೆ ಪದಾಧಿಕಾರಿಗಳು ಮತ್ತು ಹತ್ತು ಆಡಳಿತ ಮಂಡಳಿಯ ಸದಸ್ಯರು ಆಯ್ಕೆಗೊಂಡರು.ಸಿಎಎಸ್ಕೆ 2022-2024ನೇ ಸಾಲಿನ ನೂತನ ಅಧ್ಯಕ್ಷರಾಗಿ ಕ್ಯಾ. ವಿನ್ಸೆಟ್ ಪಾಯಸ್, ಉಪಾಧ್ಯಕ್ಷರಾದ ಡಾ| ರೋಹನ್ ಎಸ್. ಮೊನೀಸ್, ಆರ್ಚಿಬಾಲ್ಡ್ ಮೆನೆಜಸ್, ಕಾರ್ಯದರ್ಶಿಯಾಗಿ ಅನಂದ್ ಪಿರೇರಾ, ಜೊತೆ ಕಾರ್ಯದರ್ಶಿಯಾಗಿ ಗೂಲೋಬಿ ಡಿಸೋಜಾ, ಟ್ರಸ್ಟಿ ಆಗಿ ನೋಬರ್ಟ್ ಶೆಣೈ ಆಯ್ಕೆಗೊಂಡರು. ಸದಸ್ಯರಾಗಿ ಜಾನ್ ಲೋಬೋ, ರತ್ನ್ ಪಿಂಟೋ , ಚಾರ್ಲೆಟ್ ಪಿಂಟೋ, ಡಾ. ಲಿಬರ್ಟ್ ಅನಿಲ್ ಗೋಮಸ್, ವಿನ್ಸೆಂಟ್ ಡಿಸೋಜಾ, ಡಾ. ಕ್ಯಾರೆನ್ ಡಿಸೋಜಾ, ಎರಿಕ್ ಲೋಬೊ, ಒಲಿವಿಯ ಪಿರೇರಾ, ತ್ರಿಷಾ ಡಿಸೋಜಾ, ಡೇನ್ ಆಯ್ಕೆಗೊಂಡಿದ್ದಾರೆ.ಚುನಾವಣೆಯನ್ನ ರಿಚಾರ್ಡ್ ರೋಡಿಗ್ರಸ್ ನಡೆಸಿಕೊಟ್ಟರು. ಈ ವೇಳೆ ಕಾರ್ಯದರ್ಶಿಯಾಗಿ ಅನಂದ್ ಪಿರೇರಾ, ಜೊತೆ ಕಾರ್ಯದರ್ಶಿಯಾಗಿ ಗೂಲೋಬಿ ಡಿಸೋಜಾ, ಟ್ರಸ್ಟಿ ಆಗಿ ನೋಬರ್ಟ್ ಶೆಣೈ ಉಪಸ್ಥಿತರಿದ್ರು.