ಕಾಮಿಡಿ ಪ್ರೀಮಿಯರ್ ಲೀಗ್ ಸೀಸನ್-4ರ ಆಮಂತ್ರಣ ಪತ್ರಿಕೆ ಬಿಡುಗಡೆ

ಬಂಟ್ವಾಳ: ಜಿಲ್ಲೆಯ ಪ್ರತಿಷ್ಠಿತ ಸುದ್ದಿವಾಹಿನಿ ವಿ4 ನ್ಯೂಸ್ ಹಾಗೂ ತುಳುಕೂಟ ಬಂಟ್ವಾಳ ಇದರ ಜಂಟಿ ಆಶ್ರಯದಲ್ಲಿ ಎ.16ರಂದು ಭಾನುವಾರ ಬಿ.ಸಿ.ರೋಡಿನ ಜೋಡುಮಾರ್ಗ ಉದ್ಯಾನದ ಬಳಿಯ ಸ್ಪರ್ಶಾ ಕಲಾ ಮಂದಿರರದಲ್ಲಿ ನಡೆಯಲಿರುವ ನಾಲ್ಕನೆ ಸೀಸನ್‍ನ ಕಾಮಿಡಿ ಪ್ರೀಮಿಯರ್ ಲೀಗ್‍ನ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಗುರುವಾರ ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ನಡೆಯಿತು.


ಬಂಟ್ವಾಳ ತುಳುಕೂಟದ ಅಧ್ಯಕ್ಷ ಸುದರ್ಶನ್ ಜೈನ್ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ ಹಾಸ್ಯದ ಹೊನಲನ್ನು ಹರಿಸಿ ಜನಮಾನಸದಲ್ಲಿ ಮನೆಮಾತಾಗಿರುವ ವಿ4 ನ್ಯೂಸ್‍ನ ಕಾಮಿಡಿ ಪ್ರಿಮಿಯರ್ ಲೀಗ್ ಬಂಟ್ವಾಳ ಪರಿಸರದ ಜನರಿಗೆ ಮನರಂಜನೆ ನೀಡಲು ಇಲ್ಲಿ ಆಯೋಜನೆಗೊಳ್ಳುತ್ತಿರುವುದು ಸಂತಸದ ಸಂಗತಿ. ಅನೇಕ ಕಲಾವಿದರಿಗೆ ಪೋತ್ಸಾಹ ನೀಡುವುದರ ಜೊತೆಗೆ ಜನರಿಗೆ ಮನರಂಜನೆಯ ನೀಡುವ ಈ ಕಾರ್ಯಕ್ರಮ ಯಶಸ್ಸನ್ನು ಕಾಣಲಿ ಎಂದು ಶುಭ ಹಾರೈಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬಂಟ್ವಾಳದ ಸ್ವರ್ಣೋಧ್ಯಮಿ ನಾಗೇಂದ್ರ ವಿ. ಬಾಳಿಗ ಮಾತನಾಡಿ ವಿ4 ನ್ಯೂಸ್ ಮೂಲಕ ನಡೆಯುತ್ತಿರುವ ಸಿಪಿಲ್ ಸ್ಪರ್ಧೆಗಳಿಗೆ ಈ ಹಿಂದೆಯೂ ಸಹಕಾರ ನೀಡಿದ್ದೇನೆ. ಈ ಬಾರಿ ಸೀಸನ್ 4 ನಡೆಯುತ್ತಿದ್ದು ತನ್ನ ಸಂಪೂರ್ಣ ಸಹಕಾರ ನೀಡುವುದಾಗಿ ಘೋಷಿಸಿದರು. ಪ್ರತೀ ತಂಡಗಳ ಪ್ರಹಸನ ಪ್ರದರ್ಶನದ ವೇಳೆ ಪ್ರೇಕ್ಷಕರಿಗಾಗಿ ಅದೃಷ್ಟ ಪ್ರೇಕ್ಷಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವಂತೆ ಸಂಘಟಕರಿಗೆ ಸಲಹೆ ನೀಡಿದ ಅವರು ಅದರ ಬಹುಮಾನಗಳನ್ನು ವಿಎನ್‍ಆರ್ ಗೋಲ್ಡ್ ಸಂಸ್ಥೆಯಿಂದ ನೀಡುವುದಾಗಿ ತಿಳಿಸಿದರು.

comedy premier league season 4
comedy premier league season 4


ಈ ಸಂದರ್ಭ ದ.ಕ. ಜಿಲ್ಲಾ ಗ್ಯಾರೇಜ್ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕ ಸುಧಾಕರ ಸಾಲ್ಯಾನ್, ರೋಟರಿ ಕ್ಲಬ್ ಬಿ.ಸಿ.ರೋಡು ಸಿಟಿಯ ಗಣೇಶ್ ಶೆಟ್ಟಿ ಗೋಳ್ತಮಜಲು, ಸೀತಾರಾಮ ಶೆಟ್ಟಿ, ನ್ಯಾಯವಾದಿ ರವೀಂದ್ರ ಕುಕ್ಕಾಜೆ, ಸುಕುಮಾರ್ ಬಂಟ್ವಾಳ ಮತ್ತಿತರರು ಉಪಸ್ಥಿತರಿದ್ದರು.ಸ್ಪರ್ಶಾ ಕಲಾಮಂದಿರದ ಮಾಲಕ ಸುಭಾಶ್ಚಂದ್ರ ಜೈನ್ ಸ್ವಾಗತಿಸಿ, ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಕಾರ್ಯದರ್ಶಿ ಎಚ್ಕೆ ನಯನಾಡು ವಂದಿಸಿದರು.

Related Posts

Leave a Reply

Your email address will not be published.