ಕಾಂಗ್ರೆಸ್ ಪ್ರಚಾರ ಪುಸ್ತಕದಲ್ಲಿ ಬಿಜೆಪಿ ನಾಯಕನ ಪೋಟೋ!?

ವಿಧಾನ ಪರಿಷತ್ ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಕಾಂಗ್ರೆಸ್ ಪ್ರಚಾರ ಪತ್ರದಲ್ಲಿ ಕಾಂಗ್ರೆಸ್ ಮುಖಂಡರೊಬ್ಬರ ಭಾವಚಿತ್ರದ ಬದಲು ಬಿಜೆಪಿ ಮುಖಂಡನ ಭಾವಚಿತ್ರ ಮುದ್ರಿಸಲ್ಪಟ್ಟಿದೆ!

ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾಕ್ಟರ್ ಕೆ.ಕೆ.ಮಂಜುನಾಥ್ ಕುಮಾರ್ ಅವರ ಚುನಾವಣಾ ಪ್ರಚಾರ ಪತ್ರದಲ್ಲಿ ಈ ಎಡವಟ್ಟು ಕಂಡು ಬಂದಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಈ ಪ್ರಚಾರ ಪತ್ರದಲ್ಲಿ ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ ಕುಮಾರ್ ಶೆಟ್ಟಿಯ ಬದಲು ಬಿಜೆಪಿ ಮಂಗಳೂರು ಪ್ರಭಾರಿ ಉದಯಕುಮಾರ್ ಶೆಟ್ಟಿಯವರ ಭಾವಚಿತ್ರ ಕಂಡುಬಂದಿದೆ

bjp uday kumar

ಆರು ಪುಟಗಳ ಪ್ರಚಾರ ಪತ್ರದ ಐದನೇ ಪುಟದಲ್ಲಿ ಕಾಂಗ್ರೆಸ್ ಪಕ್ಷದ ಹಲವು ನಾಯಕರ ಫೋಟೋಗಳನ್ನು ಮುದ್ರಿಸಲಾಗಿದ್ದು, ಇದರಲ್ಲಿ ಬಿಜೆಪಿ ಮುಖಂಡ ಉದಯಕುಮಾರ್ ಶೆಟ್ಟಿಯವರ ಫೋಟೋ ಕೂಡ ರಾರಾಜಿಸುತ್ತಿದೆ.

bharath bank

Related Posts

Leave a Reply

Your email address will not be published.