ಕೆದಂಬಾಡಿ ಗ್ರಾಪಂ ಉಪ ಚುನಾವಣೆ – ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮೆಲ್ವಿನ್ ಮೊಂತೆರೋ ನಾಮಪತ್ರ ಸಲ್ಲಿಕೆ

ಪುತ್ತೂರು: ಕೆದಂಬಾಡಿ ಗ್ರಾಮ ಪಂಚಾಯತ್‌ನ ೪ನೇ ವಾರ್ಡ್‌ನ ತೆರವಾದ ಸದಸ್ಯ ಸ್ಥಾನಕ್ಕೆ ಉಪ ಚುನಾವಣೆಯು ನ.23 ರಂದು ನಡೆಯಲಿದ್ದು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಮೆಲ್ವಿನ್ ಮೊಂತೆರೋರವರು ನ.11 ರಂದು ಬೆಳಿಗ್ಗೆ ಸಹಾಯಕ ಚುನಾವಣಾ ಅಧಿಕಾರಿ ಕೃಷ್ಣಪ್ರಸಾದ್‌ರವರಿಗೆ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಗ್ರಾಪಂ ಅಭಿವೃದ್ದಿ ಅಧಿಕಾರಿ ಅಜಿತ್ ಜಿ.ಕೆ ಉಪಸ್ಥಿತರಿದ್ದರು.


ತಿಂಗಳಾಡಿ ನಿವಾಸಿಯಾಗಿರುವ ಮೆಲ್ವಿನ್ ಮೊಂತೆರೋರವರು ಕುಂಬ್ರದಲ್ಲಿ ಮೊಂತೆರೋ ಸ್ವೀಟ್ಸ್ ಉದ್ಯಮ ನಡೆಸುತ್ತಿದ್ದಾರೆ. ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಸೇವೆ ಮಾಡುತ್ತಿರುವ ಇವರು ಕುಂಬ್ರ ವರ್ತಕರ ಸಂಘದ ಮಾಜಿ ಅಧ್ಯಕ್ಷರಾಗಿ, ಕುಂಬ್ರ ಆಶಾದೀಪ ಸಹಾಯಹಸ್ತ ಸೇವಾ ಟ್ರಸ್ಟ್‌ನ ಕಾರ್ಯದರ್ಶಿಯಾಗಿ, ಜಗಲಿಕಟ್ಟೆ ನವೋದಯ ಸ್ವಸಹಾಯ ಸಂಘದ ಕಾರ್ಯದರ್ಶಿಯಾಗಿ, ಬ್ಲಾಕ್ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕದ ತಾಲೂಕು ಅಧ್ಯಕ್ಷರಾಗಿ ಸೇರಿದಂತೆ ಹಲವು ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಮೆಲ್ವಿನ್ ಮೊಂತೆರೋರವರು ನಾಮಪತ್ರ ಸಲ್ಲಿಕೆ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಕೆಪಿಸಿಸಿ ವಕ್ತಾರ ಅಮಲ ರಾಮಚಂದ್ರ ಭಟ್, ಕೆಯ್ಯೂರು ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಎ.ಕೆ ಜಯರಾಮ ರೈ, ಕೆದಂಬಾಡಿ ಕಾಂಗ್ರೆಸ್ ವಲಯ ಅಧ್ಯಕ್ಷ ಪುರಂದರ ರೈ ಕೋರಿಕ್ಕಾರು, ಪ್ರಧಾನ ಕಾರ್ಯದರ್ಶಿ ಸೋಮಯ್ಯ ತಿಂಗಳಾಡಿ, ಹಿರಿಯ ಕಾಂಗ್ರೆಸ್ ಮುಖಂಡ ಬೋಳೋಡಿ ಚಂದ್ರಹಾಸ ರೈ, ಅರಿಯಡ್ಕ ವಲಯ ಕಾಂಗ್ರೆಸ್ ಅಧ್ಯಕ್ಷ ಇಕ್ಬಾಲ್ ಹುಸೈನ್ ಕೌಡಿಚ್ಚಾರು, ಒಳಮೊಗ್ರು ವಲಯ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಪೂಜಾರಿ ಬೊಳ್ಳಾಡಿ,ಕೆದಂಬಾಡಿ ಕೆದಂಬಾಡಿ ವಲಯ ಕಾಂಗ್ರೆಸ್ ಉಪಾಧ್ಯಕ್ಷೆ ರೇಷ್ಮಾ ಮೆಲ್ವಿನ್ ಮೊಂತೆರೋ, ಕೆದಂಬಾಡಿ ಗ್ರಾಪಂ ಸದಸ್ಯರುಗಳಾದ ಸುಜಾತ ರೈ ಮತ್ತು ಅಸ್ಮಾ ಗಟ್ಟಮನೆ, ಕಾಂಗ್ರೆಸ್ ಮುಖಂಡರುಗಳಾದ ಅಶೋಕ್ ರೈ ದೇರ್ಲ, ಸಿದ್ಧಿಕ್ ಸುಲ್ತಾನ್, ವಲಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಶ್ರಫ್ ಸಾರೆಪುಣಿ, ಬ್ಲಾಕ್ ಉಪಾಧ್ಯಕ್ಷ ಮನೋಹರ ರೈ ಎಂಡೆಸಾಗು, ಬೂತ್ ಅಧ್ಯಕ್ಷರುಗಳಾದ ಹಬೀಬುಲ್ಲಾ ಕಣ್ಣೂರು, ಸೀತಾರಾಮ ರೈ ಚಾವಡಿ, ಅಬ್ದುಲ್ಲಾ ಹಾಜಿ, ಭಾಸ್ಕರ ನಾಯ್ಕ, ಹಿರಿಯ ಮುಖಂಡ ಇಸ್ಮಾಯಿಲ್ ಗಟ್ಟಮನೆ, ಹೈದರ್ ಗಟ್ಟಮನೆ, ಅಬ್ಬಾಸ್ ತೋಟ, ಹಾರೀಸ್ ಬೋಳೋಡಿ ಮತ್ತಿತರರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.