ಸುಲಿಗೆ ಪ್ರಕರಣಕ್ಕೆ ಸಂಬಂದಿಸಿದಂತೆ 23 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿಯ ಬಂಧನ

ದಿನಾಂಕ 17.12.2000 ರಂದು ರಾತ್ರಿ ಸಮಯ 8:45 ಗಂಟೆಗೆ ಮಹಿಳೆಯನ್ನು ಅಡ್ಡಗಟ್ಟಿ ಆರೋಪಿಗಳು ಚೂರಿ ತೋರಿಸಿ ಕುತ್ತಿಗೆಯಲ್ಲಿದ್ದ ಕರಿಮಣಿ ಸರವನ್ನು ಕಸಿದು ಸುಲಿಗೆ ಮಾಡಿ ಪರಾರಿಯಗಿದ್ದ ಪ್ರಕರಣಕ್ಕೆ ಸಂಬಂದಿಸಿದಂತೆ , ಉರ್ವಾ ಪೊಲೀಸ್ ಠಾಣೆಯಲ್ಲಿ ಠಾಣೆಯಲ್ಲಿ ಅಕ್ರ 130/2000 ಕಲಂ: 392 ಐಪಿಸಿ ರೀತ್ಯಾ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದಲ್ಲಿ ಹುಸೇನ್ @ ಮೊಹಮ್ಮದ್ ಹುಸೇನ್ ಬಶೀರ್ ಮತ್ತು ಮೊಯ್ದೀನ್ ಕುದ್ರೋಳಿ ಎಂಬವರುಗಳಿದ್ದು ಹುಸೇನ್ @ ಮೊಹಮ್ಮದ್ ಹುಸೇನ್ ಮತ್ತು ಮೊಯ್ದೀನ್ ಕುದ್ರೋಳಿ ಎಂಬವರನ್ನು ದಸ್ತಗಿರಿ ಮಾಡಲಾಗಿತ್ತು ಆರೋಪಿ ಬಶೀರ್ (27/2001) ( ಪ್ರಸ್ತುತ 51 ವರ್ಷ) ಎಂಬಾತನು ತಲೆ ಮರೆಸಿಕೊಂಡಿದ್ದು ಈತನ ವಿರುದ್ದ ನ್ಯಾಯಾಲಯವು ಉದ್ಘೋಷಣೆಯನ್ನು ಹೊರಡಿಸಿತ್ತು. ಆದರೆ ಆರೋಪಿಯು ನ್ಯಾಯಾಲಯಕ್ಕೂ ಹಾಜರಾಗದೇ ತಲೆಮರೆಸಿಕೊಂಡಿದ್ದು ಈ ದಿನ ತಾರೀಕು 26.07.2023 ರಂದು ಆರೋಪಿಯನ್ನು ಮೇಲಾಧಿಕಾರಿಗಳ ಸೂಕ್ತ ಮಾರ್ಗದರ್ಶನದಲ್ಲಿ ದಸ್ತಗಿರಿ ಮಾಡಲಾಗಿದ್ದು, ಘನ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

Related Posts

Leave a Reply

Your email address will not be published.