Homekundapuraಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ತು ಉಪ್ಪುಂದ ವಲಯದ ವತಿಯಿಂದ 31ನೇ ವಾರ್ಷಿಕ ಅಧಿವೇಶನ

ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ತು ಉಪ್ಪುಂದ ವಲಯದ ವತಿಯಿಂದ 31ನೇ ವಾರ್ಷಿಕ ಅಧಿವೇಶನ

ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ತು ಉಪ್ಪುಂದ ವಲಯದ ವತಿಯಿಂದ 31ನೇ ವಾರ್ಷಿಕ ಅಧಿವೇಶನ,ಪ್ರತಿಭಾ ಪುರಸ್ಕಾರ,ಸನ್ಮಾನ ಹಾಗೂ ಅಭಿನಂದನಾ ಕಾರ್ಯಕ್ರಮ ಕಿರಿಮಂಜೇಶ್ವರ ಗುರುನರಸಿಂಹ ಸಭಾಭವನದಲ್ಲಿ ನಡೆಯಿತು.


ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ ಅಧ್ಯಕ್ಷರಾದ ಕೃಷ್ಣಾನಂದ ಚಾತ್ರ ಅವರು ವಾರ್ಷಿಕ ಅಧಿವೇಶನವನ್ನು ಉದ್ಘಾಟಿಸಿ ಮಾತನಾಡಿ, ಆಧುನಿಕ ಯುಗದಲ್ಲಿ ಯುವ ಸಮುದಾಯ ಸಂಘಟನಾತ್ಮಕ ಚಟುವಟಿಕೆಗಳಲ್ಲಿ ಹೆಚ್ಚು ಹೆಚ್ಚು ತೊಡಗಿಕೊಂಡು ಮುಂದಿನ ಪೀಳಿಗೆಗೆ ಆಚಾರ ವಿಚಾರಗಳನ್ನು ವರ್ಗಾವಣೆ ಮಾಡುವಂತಹ ಜವಾಬ್ದಾರಿ ಹೊರಬೇಕು, ವಿಪ್ರ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳನ್ನು ಚರ್ಚಿಸಲು ಇಂತಹ ಅಧಿವೇಶನಗಳು ಬಹಳಷ್ಟು ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಶಿಸ್ತು ಸಂಯಮ, ಶಿಷ್ಟಾಚಾರ, ಸಂಸ್ಕಾರ ಎನ್ನುವ ಅಂಶಗಳನ್ನು ಇಂದಿನ ಯುವ ಸಮುದಾಯ ಅಳವಡಿಸಿಕೊಂಡು ಬದುಕಬೇಕೆಂದು ಕಿವಿ ಮಾತನ್ನು ಹೇಳಿದರು.


ವಾರ್ಷಿಕ ಅಧಿವೇಶನದ ಅಂಗವಾಗಿ ರಾಜ್ಯಮಟ್ಟದ ಸಾಧಕ ವಿದ್ಯಾರ್ಥಿಗಳಾದ ಸಾನಿಧ್ಯ ಮಯ್ಯ, ಆರ್ದ್ರಿತ ಉಡುಪ, ಭೂಮಿಕ ಕಾರಂತ್ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಚಿರಂತನ್ ಭಟ್,ಗಗನ್ ಭಟ್, ಆಶಿಶ್ ಮಧ್ಯಸ್ಥ, ಕುಮಾರಿ ಕವಿತಾ ಇವರಿಗೆ ಪ್ರತಿಭಾ ಪುರಸ್ಕಾರ ವಿತರಣೆ ಮಾಡಲಾಯಿತು. ಹಾಗೂ ಸಾಧಕರಾದ ಬಿ ಸಿ ಗಣೇಶ್ ಮಯ್ಯ, ನಾಗೇಶ್ ಶ್ಯಾನಭೋಗ್ ಅರೆಹೊಳೆ ಅವರನ್ನು ಸನ್ಮಾನಿಸಲಾಯಿತು.

ಭಾರತೀಯ ಸೇನೆಗೆ ಸೇರ್ಪಡೆಯಾದ ಸನ್ನಿಧಿ ಶ್ರೀನಾಥ್ ಮೇರ್ಟ ಅವರನ್ನು ಗೌರವಿಸಲಾಯಿತು. ವಲಯದ ವಿಪ್ರರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.ದ್ರಾವಿಡ ಬ್ರಾಹ್ಮಣ ಪರಿಷತ್ತು ಉಪ್ಪುಂದ ವಲಯ ವಾರ್ಷಿಕ ಮಹಾಸಭೆಯು ಪರಿಷತ್ತಿನ ಅಧ್ಯಕ್ಷ ಯು ಸಂದೇಶ್ ಭಟ್ ನೇತೃತ್ವದಲ್ಲಿ ಜರುಗಿತು.


ಈ ಸಂದರ್ಭದಲ್ಲಿ ಉಪನ್ಯಾಸಕರಾದ ವಿಶ್ವೇಶ್ವರ ಅಡಿಗ, ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ತಿನ ಉಪಾಧ್ಯಕ್ಷರಾದ ಬಿ ಗಣೇಶ್ ಮಯ್ಯ, ಗೌರವ ಅಧ್ಯಕ್ಷರಾದ ಅರುಣ್ ಶ್ಯಾನುಭೋಗ್, ಮಹಿಳಾ ವೇದಿಕೆ ಅಧ್ಯಕ್ಷೆ ಶ್ರೀಮತಿ ವೀಣಾ ಹೆಬ್ಬಾರ್, ಕಾರ್ಯದರ್ಶಿಗಳಾದ ಶ್ರೀ ಪ್ರಶಾಂತ ಮಯ್ಯ ಉಪಸ್ಥಿತರಿದ್ದರು.


ಚೈತ್ರಾ ವೈದ್ಯ ಕಾರ್ಯಕ್ರಮ ನಿರೂಪಿಸಿದರು. ದೀಟಿ ಸೀತಾರಾಮ ಮಯ್ಯ ಸ್ವಾಗತಿಸಿದರು. ಕಾರ್ಯದರ್ಶಿ ಪ್ರಶಾಂತ್ ಮೈಯ್ಯ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments