HomeFresh Newsಫಿಫಾ ವಿಶ್ವ ಕಪ್ ಸಾವಿರದಲ್ಲಿ ಜಪಾನ್ ಮಿಂಚು | ಫಿಫಾ ವಿಶ್ವ ಕಪ್ ಪಂದ್ಯಾವಳಿಯಲ್ಲಿ ವೇಗದ...

ಫಿಫಾ ವಿಶ್ವ ಕಪ್ ಸಾವಿರದಲ್ಲಿ ಜಪಾನ್ ಮಿಂಚು | ಫಿಫಾ ವಿಶ್ವ ಕಪ್ ಪಂದ್ಯಾವಳಿಯಲ್ಲಿ ವೇಗದ ನೂರು | ಉಂಡಾವ್‌ನಿಂದ ಉಳಿದ ಜರ್ಮನಿ ನಾಕೌಟ್ ಪ್ರವೇಶ

2026ರ ಫಿಫಾ ವಿಶ್ವ ಕಪ್ ಪಂದ್ಯಾವಳಿಯಲ್ಲಿ ಅತೀ ಕಡಿಮೆ ಎಂದರೆ ೩೩ ಪಂದ್ಯಗಳಲ್ಲಿ ನೂರು ಗೋಲುಗಳ ದಾಖಲೆಯೊಂದು ಮೂಡಿ ಬಂತು. ಈ ಬಾರಿಯ ಫುಟ್ಬಾಲ್ ವಿಶ್ವ ಕಪ್‌ನಲ್ಲಿ ಈಗಾಗಲೇ ನೂರು ಗೋಲುಗಳು ಬಂದಿದ್ದು ಅದು ದಾಖಲೆಯೂ ಆಗಿದೆ. ಇದು ಫಿಫಾ ಪಂದ್ಯಾವಳಿಯಲ್ಲಿ ವಿಶ್ವ ದಾಖಲೆ ಅಲ್ಲವಾದರೂ 68 ವರುಷಗಳ ಬಳಿಕ ಹೀಗೊಂದು ವೇಗದ ನೂರು ಗೋಲು ಬಂದಿದೆ. 1954ರ ಫಿಫಾ ವಿಶ್ವ ಕಪ್‌ನಲ್ಲಿ 20 ಪಂದ್ಯಗಳಲ್ಲೇ 100 ಗೋಲು ಬಂದದ್ದು ವಿಸ್ವ ದಾಖಲೆ. ಉಳಿದಂತೆ ಈ ಬಾರಿ 33 ಪಂದ್ಯಗಳಲ್ಲಿ ನೂರು ಗೋಲು ಆಗಿರುವುದು ಎರಡನೆಯ ಸ್ಥಾನದಲ್ಲಿ ನಿಂತ ಅಪರೂಪದ ದಾಖಲೆಯಾಗಿದೆ. ನೆದರ್‌ಲ್ಯಾಂಡಿನ ಕೋಡೀ ಗ್ಯಾಕ್ಟೋ ಈ ನೂರನೆಯ ಗೋಲು ಹೊಡೆದರು.


ಎಫ್ ಗುಂಪಿನಲ್ಲಿ ಜಪಾನ್ ಟ್ಯುನೀಶಿಯಾ ನಡುವೆ ನಡೆದುದು ಫಿಫಾ ವಿಶ್ವ ಕಪ್ ಪಂದ್ಯಾವಳಿಯ ಒಂದು ಸಾವಿರನೇ ಪಂದ್ಯವಾಗಿದೆ. ಇದನ್ನು 4-0 ಗೋಲಿನಿಂದ ಗೆದ್ದ ಜಪಾನ್ ತಂಡವು ಟ್ಯುನೀಶಿಯಾವನ್ನು ಪುಸ್ಕ ಮಾಡಿದರು. ಸ್ಟರೈಕರ್ ಅಯಾಸೆ ಉಯೇಡಾ ಅವಳಿ ಗೋಲು ಹೊಡೆದರು. ಅತ್ತ ಉಯೇಡಾ ಮಿಂಚಿದರೆ ಇತ್ತ ಜರ್ಮನಿ ತಂಡವನ್ನು ಉಂಡಾವ್ ಬಚಾವು ಮಾಡಿದರು.

ಜರ್ಮನಿ ಐವರಿ ಕೋಸ್ಟ್ ನಡುವಣ ಪಂದ್ಯವು 1-1 ಗೋಲುಗಳಿಂದ ಸಮ ಸಮದಲ್ಲಿ ಇತ್ತು. ಆಟ ಕೂಡ ಹಾಗೇ ಸಾಗಿತ್ತು. ಆಗ ಬದಲಿ ಆಟಗಾರರಾಗಿ ಭಮದರು ಡೆನಿಜ್ ಉಂಡಾವ್. ಸ್ಟ್ರೈಕರ್ ಉಂಡಾವ್ ಅವರು ಒಂದು ಕ್ಷಿಪ್ರ ಗೋಲು ಹೋಡೆದು ಜರ್ಮನಿಯನ್ನು ಡ್ರಾದಿಂದ ಗೆಲುವಿನ ದಡ ಸೇರಿಸಿದರು. ಇದರ ನಡುವೆ ಈಕ್ವೆಡಾರ್ ಹಾಗೂ ಕ್ಯುರಸಾವೊ ದೇಶಗಳ ನಡುವಣ ಪಂದ್ಯವು ಗೋಲಿಲ್ಲದೆ ಡ್ರಾ ಆಯಿತು. ಮೊದಲ ಬಾರಿ ಫಿಫಾ ವಿಶ್ವ ಕಪ್‌ಗೆ ಅರ್ಹತೆ ಪಡೆದಿದ್ದ ಕ್ಯುರಸಾವೊ ಮೊದಲ ಅಂಕ ಪಡೆದ ಧನ್ಯತೆ ಹೊಂದಿತು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments