HomeFresh Newsಸ್ವೈನ್, ಪಿಗ್, ಹಾಗ್ ಎಂದೆಲ್ಲ ಹೆಸರು ಇರುವ ಹಂದಿ | ಹಂದಿಯ ಮಾಂಸಕ್ಕೆ ಪೋರ್ಕ್ ಎಂದು...

ಸ್ವೈನ್, ಪಿಗ್, ಹಾಗ್ ಎಂದೆಲ್ಲ ಹೆಸರು ಇರುವ ಹಂದಿ | ಹಂದಿಯ ಮಾಂಸಕ್ಕೆ ಪೋರ್ಕ್ ಎಂದು ಹೆಸರು | ಸಾಕು ಹಂದಿ ಯುಎಸ್‌ಎಯ ಮುದ್ದಿನ ಪ್ರಾಣಿಯೂ ಆಗಿದೆ

ಇಲ್ಲಿ ಹಂದಿ ಎಂದರೆ ಮನುಷ್ಯನು ಮಂಸ ಮತ್ತು ತೊಗಲಿಗಾಗಿ ಸಾಕಿಕೊಂಡಿರುವ ಸಾಕು ಹಂದಿಯಾಗಿದೆ. ಬೋರ್, ವಾರ್ಟ್‌ರಾಗ್ ಮೊದಲಾದವು ಕಾಡು ಹಂದಿಗಳು. ಮನುಷ್ಯನು ಎಂಟು ಸಾವಿರ ವರುಷಗಳ ಹಿಂದೆ ಟೈಗ್ರಿಸ್ ನದಿಯ ವಲಯದಲ್ಲಿ ಯೂರೇಶಿಯಾ ಮೂಲದ ಕಾಡು ಹಂದಿಯನ್ನು ಪಳಗಿಸಿ ಸಾಕಲಾರಂಭಿಸಿದ್ದಾನೆ. ಹಳೆಯ ಕಲ್ಗಾಲದಲ್ಲಿ ಚೀನಾದವರು ಅಲ್ಲಿನ ಕಾಡು ಹಂದಿಯನ್ನು ಪ್ರತ್ಯೇಕವಾಗಿ ಪಳಗಿಸಿಕೊಂಡಿದ್ದಾರೆ. ಸಾಕು ಹಂದಿಯನ್ನು ಸ್ವೈನ್, ಪಿಗ್, ಹಾಗ್ ಎಂದೆಲ್ಲ ಕರೆಯುತ್ತಾರೆ.

ಎಂಟು ಹತ್ತರ ಗುಂಪಿನಲ್ಲಿ ಇವು ವಾಸಿಸುತ್ತವೆ. ಇವು ಬೆವರು ಗ್ರಂಥಿ ಹೊಂದಿಲ್ಲ. ಬಿಸಿ ಏರಿದಾಗ ಕೆಸರಲ್ಲಿ ಬಿದ್ದುಕೊಂಡು ತಂಪಾಗುತ್ತವೆ. ಇದು ಬುದ್ಧಿವಂತ ಪ್ರಾಣಿಯಾಗಿದೆ. ಯುಎಸ್‌ಎಯಲ್ಲಿ ಸಾಕಷ್ಟು ಜನರು ಇದನ್ನು ಮನೆಯೊಳಗೆ ಮುದ್ದು ಪ್ರಾಣಿಯಾಗಿಯೂ ಸಾಕಿಕೊಂಡಿದ್ದಾರೆ. 600 ಜಾತಿಯ ಸಾಕು ಹಂದಿ ತಳಿಗಳು ಇವೆ. ಅತಿ ಚಿಕ್ಕದು ಗ್ಯಾಟಿಂಜಿನ್, ಇದು 26 ಕಿಲೋ ಮಾತ್ರ ತೂಗುತ್ತದೆ. ಹಂದಿಯು ರಾಜಚಿಹ್ನೆ, ಕೆತ್ತನೆ, ಪುರಾಣ ಎಂದು ಜಗತ್ತಿನ ಎಲ್ಲ ಕಡೆ ಸಂಸ್ಕೃತಿಯ ಭಾಗವಾಗಿ ಬೆರೆತಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments