HomeFresh Newsಪಂಜಾಬಿನ ಜಲಂದರ್‌ನಲ್ಲಿ ಮಹಿಳಾ ವೈದ್ಯೆ ಮೀನಾಕ್ಷಿ ಸಾವು

ಪಂಜಾಬಿನ ಜಲಂದರ್‌ನಲ್ಲಿ ಮಹಿಳಾ ವೈದ್ಯೆ ಮೀನಾಕ್ಷಿ ಸಾವು

ಪಂಜಾಬಿನ ಜಲಂದರ್‌ನಲ್ಲಿ ಮಹಿಳಾ ವೈದ್ಯೆ ಶವವಾಗಿದ್ದಾರೆ. ಗಂಡ ವೈದ್ಯನಿಗೆ ಬೇರೊಂದು ಲವ್ವಿದ್ದು. ಕುಟುಂಬ ಹಿಂಸೆಯಿಂದ ಈ ಹೆಣ್ಣುಮಗಳು ಹೆಣವಾದುದಾಗಿ ಹೇಳಲಾಗಿದೆ.
ಜಲಂದರ್‌ನಲ್ಲಿ ಒಂಟಿ ಕೋಣೆಯಲ್ಲಿ ಡಾ. ಮೀನಾಕ್ಷಿಯವರು ಜೀವ ಕಳೆದುಕೊಂಡಿದ್ದಾರೆ. ಸಮಯಕ್ಕೆ ಬಾರದ್ದರಿಂದ ದೂರು ಹೋಗಿ. ಪೋಲೀಸರು ಬಂದು ನೋಡಿದಾಗ ಬಾಗಿಲು, ಕಿಟಕಿ ಒಳಗಿನಿಂದ ಲಾಕ್ ಆಗಿತ್ತು. ಒಡೆದಾಗ ಒಳಗೆ ನೇಣಿನಲ್ಲಿ ಕೊರಳು ಅಡ್ಡ ಹಾಕಿದ್ದರು. ಗಂಡ ಜಲಂದರಿನ ನ್ಯಾಶನಲ್ ಕಣ್ಣಿನ ಆಸ್ಪತ್ರೆಯ ಡಾ. ಪೀಯೂಶ್ ಇನ್ನೊಬ್ಬರೊಡನೆ ಸಂಗ ಇಟ್ಟುಕೊಂಡಿದ್ದನೆಂದೂ, ಹೆಂಡತಿಯ ಮೇಲೆ ದೈಹಿಕ ಹಲ್ಲೆ ನಡೆಸಿದ್ದನೆಂದೂ, ಆ ಕಾರಣಕ್ಕೆ ವೈದ್ಯೆ ಪತ್ನಿ ಪ್ರತ್ಯೇಕ ವಾಸಿಸುತ್ತಿದ್ದಳು ಎನ್ನಲಾಗಿದೆ.
2018ರ ಅಕ್ಟೋಬರಿನಲ್ಲಿ ಮೀನಾಕ್ಷಿ, ಪೀಯೂಶ್ ಮದುವೆಯಾಗಿತ್ತು. ಆಕೆಯ ಸಂಬಳದಲ್ಲಿ ಅರ್ಧ ಆತನ ಸಾಲಕ್ಕೆ ಕಂತು ಹೋಗುತ್ತಿದ್ದುದು ತಿಳಿದು ಬಂದಿದೆ. ಬ್ಯಾಂಕನ್ನು ಸಂಪರ್ಕಿಸಿದಾಗ ಗಂಡನ ಆಸ್ಪತ್ರೆಯ 2.5 ಕೋಟಿ ಸಾಲ ಹೆಂಡತಿಯ ಹೆಸರಿನಲ್ಲಿದ್ದುದು ಕಂಡು ಬಂದಿದೆ. ಮನೆ ಕೊಳ್ಳಲು ಬಯಸಿದ್ದ ವೈದ್ಯ ಬದುಕು ಕೊನೆಗೊಳಿಸಿಕೊಂಡಿದ್ದಾರೆ. ನರ್ಸ್ ಜೊತೆಗೆ ಸಂಬಂಧ ಹಾಗೂ ಹಿಂಸೆಗೆ ಇಳಿದ ಕಾರಣ ಆಕೆ 2025ರ ಜುಲಾಯಿಯಿಂದ ಪ್ರತ್ಯೇಕ ವಾಸಿಸುತ್ತಿದ್ದಳು. ಈಗ ಆತ್ಮಹತ್ಯೆಯೇ, ತಂತ್ರದಿಂದ ನಡೆದಿರುವ ಕೊಲೆಯ ಅನುಮಾನಾಸ್ಪದ ಸಾವೇ ಎಂಬ ಪ್ರಶ್ನೆ ಎದ್ದಿದೆ. ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments