HomeFresh Newsಮಾಂಡೋವಿ ನೆಕ್ಸಾ ಮೋಟಾರ್ಸ್‌ನ ವಾರ್ಷಿಕೋತ್ಸವದ ಅಂಗವಾಗಿ "ಮಾಂಡೋವಿ ಹಬ್ಬ"

ಮಾಂಡೋವಿ ನೆಕ್ಸಾ ಮೋಟಾರ್ಸ್‌ನ ವಾರ್ಷಿಕೋತ್ಸವದ ಅಂಗವಾಗಿ “ಮಾಂಡೋವಿ ಹಬ್ಬ”

ಮಂಗಳೂರು: ಮೇರಿಹಿಲ್‌ನಲ್ಲಿರುವ ಮಾಂಡೋವಿ ನೆಕ್ಸಾ ಮೋಟಾರ್ಸ್‌ನ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಲಾಗಿರುವ “ಮಾಂಡೋವಿ ಹಬ್ಬ” ಆಟೋಮೋಟಿವ್ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ನಗರದ ಟೌನ್ ಹಾಲ್‌ನಲ್ಲಿ ಆರಂಭಗೊಂಡ ಈ ವಿಶೇಷ ಕಾರ್ಯಕ್ರಮ ಇದೀಗ ಅತ್ತಾವರ ಪ್ರದೇಶದಲ್ಲಿ ಮುಂದುವರಿದಿದ್ದು, ವಾಹನ ಪ್ರಿಯರಿಗಾಗಿ ವಿಶೇಷ ಸ್ಟಾಲ್‌ಗಳನ್ನು ತೆರೆಯಲಾಗಿದೆ. ಗ್ರಾಹಕರಿಗೆ ಗ್ರ್ಯಾಂಡ್ ವಿಟಾರಾ, ಬಲೆನೊ, ಜಿಮ್ನಿ ಹಾಗೂ XL6 ಸೇರಿದಂತೆ ಜನಪ್ರಿಯ ನೆಕ್ಸಾ ವಾಹನಗಳ ಪ್ರದರ್ಶನ, ಟೆಸ್ಟ್ ಡ್ರೈವ್ ಹಾಗೂ ವಿಶೇಷ ಆಫರ್‌ಗಳ ಸೌಲಭ್ಯ ಕಲ್ಪಿಸಲಾಗಿದೆ.
ಹೊಸ ವಾಹನ ಖರೀದಿಸಲು ಆಸಕ್ತಿ ಹೊಂದಿರುವ ಗ್ರಾಹಕರು ವಿವಿಧ ಮಾದರಿಯ ಕಾರುಗಳನ್ನು ವೀಕ್ಷಿಸುವುದರ ಜೊತೆಗೆ ಅವುಗಳ ವೈಶಿಷ್ಟ್ಯಗಳ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ. ಅಲ್ಲದೆ, ವಿನಿಮಯ ಸೌಲಭ್ಯ, ಹಣಕಾಸು ಯೋಜನೆಗಳು ಹಾಗೂ ಹಬ್ಬದ ವಿಶೇಷ ರಿಯಾಯಿತಿಗಳ ಮಾಹಿತಿಯೂ ಲಭ್ಯವಿದೆ.

ಅತ್ತಾವರದಲ್ಲಿ ಸ್ಥಾಪಿಸಲಾಗಿರುವ ಈ ಸ್ಟಾಲ್‌ಗೆ ಸಾರ್ವಜನಿಕರು ಭೇಟಿ ನೀಡಿ ಆಫರ್‌ಗಳ ಪ್ರಯೋಜನ ಪಡೆಯುವಂತೆ ಮಾಂಡೋವಿ ನೆಕ್ಸಾ ಮೋಟಾರ್ಸ್ ವತಿಯಿಂದ ಮನವಿ ಮಾಡಲಾಗಿದೆ.
ಹೆಚ್ಚಿನ ಮಾಹಿತಿಗಾಗಿ 7899924145, 7022357707 ಹಾಗೂ 77603 51999 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments