ಕಟಪಾಡಿ:ಪರಮಪೂಜ್ಯ ಜಗದ್ಗುರು ಅನಂತಶ್ರೀವಿಭೂಷಿತ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ (2026-2027) ಜನ್ಮವರ್ಧಂತಿಯ ಸುವರ್ಣ ಮಹೋತ್ಸವ ವರ್ಷಾಚರಣೆಯು ಮಹಾಸನ್ನಿಧಾನಂಗಳವರ ಪಾವನ ಸಾನ್ನಿಧ್ಯದಲ್ಲಿ ವಿಶ್ವಬ್ರಾಹ್ಮಣ ಪ್ರತಿಷ್ಠಾನ ಹುಬ್ಬಳ್ಳಿ ಇವರ ವತಿಯಿಂದ ಶ್ರೀ ಪುರುಷೋತ್ತಮ ಯಾಗ ಹಾಗೂ
ಶ್ರೀ ಲಕ್ಷ್ಮೀನಾರಾಯಣ ಹೃದಯ ಹೋಮವು ಮೇ 31, ಭಾನುವಾರದಂದು ಶ್ರೀ ಸರಸ್ವತೀ ಯಾಗ ಶಾಲೆಯಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು
ನಡೆಯಿತು.
ಶ್ರೀ ಕಾಳಹಸ್ತೇಂದ್ರ ಮಹಾಸ್ವಾಮೀಜಿ ಆಶೀರ್ವಚನ ನೀಡಿ, ಹಸಿದವನು ಉಣ್ಣುವುದು ಸಹಜ ಪ್ರಕೃತಿ, ಇನ್ನೊಬ್ಬರ ಪಾಲಿನ ಅನ್ನವವನ್ನು ಕಿತ್ತು ತಿನ್ನುವುದು ವಿಕೃತಿ. ತಾನು ಹಸಿದಿದ್ದರೂ ಹಸಿದವನಿಗೆ ಅನ್ನ ನೀಡುವುದು ಸಂಸ್ಕೃತಿ ಯಾಗಿದೆ. ಸತ್ಕಾರ್ಯಗಳನ್ನು ಮಾಡು
ವುದರಿಂದ ಮನುಷ್ಯನು ಪುರುಷೋತ್ತಮನಾಗ ಬಹುದು ಎಂದರು.

ವೆ.ಬ್ರ.ಶಂಕರಾಚಾರ್ಯ ಗುರುನಾಥ ಆಚಾರ್ಯ ಪಂಡಿತ್ ಕಡ್ಲಾಸ್ಕರ್ ಹುಬ್ಬಳ್ಳಿ ಅವರು ಅಧಿ ಕಮಾಸ ಹಾಗೂ ಶ್ರೀ ಪುರುಷೋತ್ತಮ ಯಾಗದ ಮಹತ್ವದ ಬಗ್ಗೆ ಧಾರ್ಮಿಕ ಪ್ರವಚನ ನೀಡಿ, ಮನಸ್ಸಿನ ಕೊಳೆ ಮತ್ತು ದೋಷಗಳನ್ನು ಹೊರಹಾಕುವ ಮಾಸವೇ ಮಲಮಾಸ. ಈ ಮಾಸಕ್ಕೆ ಶ್ರೀ ಪುರುಷೋತ್ತಮನೇ ಅಧಿಪತಿ. ಶ್ರೀ ಲಕ್ಷ್ಮೀ ಸಹಿತ ವಿಷ್ಣುವಿನ ಪೂಜೆಯನ್ನು ಮಾಡುವುದರಿಂದ ಅಧಿಕ ಮಾಸದಲ್ಲಿ ಅಧಿಕ ಫಲ ಪ್ರಾಪ್ತಿಯಾಗುತ್ತದೆ ಎಂದರು.
ಈ ಸಂದರ್ಭದಲ್ಲಿವೇದಬ್ರಹ್ಮ ಶ್ರೀಶಂಕರಾಚಾರ್ಯ ಕಡ್ಲಾಸ್ಕರ್, ಹುಬ್ಬಳ್ಳಿ ವಿಶ್ವ ಬ್ರಾಹ್ಮಣ ಪ್ರತಿಷ್ಠಾನದ ಅಧ್ಯಕ್ಷ ಅಶೋಕ್ ಜತ್ತಿ, ಪದಾಧಿಕಾರಿಗಳಾದ ಶಂಕರ್ ನಿಡಗುಂದಿ, ಸುಹಾಸ್ ಸವಣೂರು,ನರಗುಂದ ಮೋಹನ್, ಆರ್ ಎಂ. ಪತ್ತಾರ್, ಗುರುನಾಥ ಆಚಾರ್ಯ ಹುಬ್ಬಳ್ಳಿ, ಬಾಗಲಕೋಟೆಯ ಗುರುರಾಜ ಅಗಳದಕಟ್ಟಿ, ಐ ಕೆ ಪತ್ತಾರ್, ಆನೆಗುಂದಿ ಪ್ರತಿಷ್ಠಾನದ ಅಧ್ಯಕ್ಷ ವಿ ಶ್ರೀಧರ ಆಚಾರ್ಯ ಒಡೆಯರ ಹೋಬಳಿ, ಅಸೆಟ್ ಅಧ್ಯಕ್ಷ ಸೂರ್ಯಕುಮಾರ ಹಳೆಯಂಗಡಿ, ಗೋ ಟ್ರಸ್ಟ್ ಅಧ್ಯಕ್ಷ ಸುಂದರ ಆಚಾರ್ಯ ಬೆಳುವಾಯಿ, ಗುರು ಸೇವಾ ಪರಿಷತ್ ಅಧ್ಯಕ್ಷ ಗಣೇಶ್ ಆಚಾರ್ಯ ಕೆಮಣ್ಣು, ಮಾತೃ ಮಂಡಳಿ ಅಧ್ಯಕ್ಷೆ ಸಂಧ್ಯಾ ಲಕ್ಷ್ಮಣ ಆಚಾರ್ಯ, ಪೂರ್ವ ಚಾತ್ರ ಅಧ್ಯಕ್ಷ ಕೇಶವ ಶರ್ಮ, ಕೋಶಾಧಿಕಾರಿ ಅರವಿಂದ ವೈ ಆಚಾರ್ಯ ಬೆಳುವಾಯಿ,ಕೆ.ಎಂ ಗಂಗಾಧರ ಆಚಾರ್ಯ ಕೊಂಡೆ ಯೂರು, ಗುರುರಾಜ್ ಕೆ ಜೆ ಆಚಾರ್ಯ, ಲೋಲಾಕ್ಷ ಶರ್ಮ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸದಸ್ಯರು ವಿವಿಧ ದೇವಸ್ಥಾನಗಳ ಆಡಳಿತ ಮೊಕ್ತೇಸರರು ಭಾಗವಹಿಸಿದ್ದರು.
ವೈದಿಕ ಕಾರ್ಯಕ್ರಮದ ನೇತೃತ್ವವನ್ನು ಶ್ರೀಧರ ಪುರೋಹಿತ್ ಕಟಪಾಡಿ, ಅಕ್ಷಯ ಶರ್ಮ ಕಟಪಾಡಿ, ಪೂರ್ವ ಚಾತ್ರ ಸಂಘದ ಮನೋಜ್ ಶರ್ಮಾ,ವಿಕಾಸ ಶರ್ಮ,ವಿಜಯ ಶರ್ಮ ವಹಿಸಿದ್ದರು. ನಾಗದರ್ಮೇಂದ್ರ ಸಂಸ್ಕೃತ ವೇದ ಸಂಜೀವಿನಿ ಪಾಠಶಾಲೆಯ ವಿದ್ಯಾರ್ಥಿಗಳು ಸಹಕರಿಸಿದ್ದರು.
ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ ಬಿ ಆಚಾರ್ ಕಾರ್ಯಕ್ರಮ ನಿರ್ವಹಿಸಿದರು.
