“ಗೋಸ್ಮರಿ ಫ್ಯಾಮಿಲಿ ” ತುಳು ಚಲನಚಿತ್ರ : ಮೇ 12. ಬಹರೈನ್‍ನಲ್ಲಿ ಪ್ರೀಮಿಯರ್ ಶೋ

ಬಹರೈನ್; ಬಿಡುಗಡೆಗೆ ಮುನ್ನವೇ ತುಳುಚಲನ ಚಿತ್ರ ರಂಗದಲ್ಲಿ ಬಹಳಷ್ಟು ನಿರೀಕ್ಷೆಯನ್ನು ಹುಟ್ಟಿಸಿರುವ “ಗೋಸ್ಮರಿ ಫ್ಯಾಮಿಲಿ ” ತುಳು ಚಲನಚಿತ್ರ ಮೇ ತಿಂಗಳ ಶುಕ್ರವಾರದಂದು ಅಪರಾಹ್ನ ಒಂದೂವರೆ ಘಂಟೆಗೆ ಜುಫೈರ್ ನಲ್ಲಿರುವ ಮುಕ್ತಾ ಸಿನೆಮಾ ಮಂದಿರದಲ್ಲಿ ಗ್ರ್ಯಾಂಡ್ ಪ್ರೀಮಿಯರ್ ಪ್ರದರ್ಶನ ಕಾಣಲಿದೆ.ತುಳು ಚಲನಚಿತ್ರ ರಂಗದ ಜನಪ್ರಿಯ ನಟರುಗಳು ಒಂದಾಗಿ ನಟಿಸಿರುವ ಈ ಚಲನಚಿತ್ರವನ್ನು ಖ್ಯಾತ ನಿರ್ದೇಶಕ ಸಾಯಿ ಕೃಷ್ಣ ಕುಡ್ಲಾ ರವರು ಬರೆದು ನಿರ್ದೇಶಿಸಿದ್ದು ಈ ಚಲನಚಿತ್ರವು ನಾಡಿನಲ್ಲಿ ಬಹರೈನ್ ನಲ್ಲಿ ಗ್ರ್ಯಾಂಡ್ ಪ್ರೀಮಿಯರ್ ಪ್ರದರ್ಶನ ಕಂಡ ಒಂದು ವಾರದ ನಂತರ ಅಂದರೆ ಮೇ 18 ಬಿಡುಗಡೆಯಾಗಲಿದೆ .

ಬಹರೈನ್ ಗ್ರ್ಯಾಂಡ್ ಪ್ರೀಮಿಯರ್ ಪ್ರದರ್ಶನದ ಟಿಕೇಟುಗಳು ಇದಾಗಲೇ ಬಹುತೇಕ ಮುಂಗಡ ಬುಕ್ಕಿಂಗ್ ಆಗಿದ್ದು ಇನ್ನು ಕೆಲವೇ ಟಿಕೇಟುಗಳು ಬಾಕಿ ಇವೆ. “ಗಿರ್ಗಿಟ್ ” ತುಳುಚಿತ್ರದ ಖ್ಯಾತಿಯ ರೋಷನ್ ಶೆಟ್ಟಿ ಯವರು ಈ ಗ್ರ್ಯಾಂಡ್ ಪ್ರೀಮಿಯರ್ ಪ್ರದರ್ಶನವನ್ನು ಬಹರೈನ್ ನಲ್ಲಿ ಆಯೋಜಿಸಿದ್ದಾರೆ . ಬಹರೈನ್ನಲ್ಲಿ ತುಳು ಕಲೆ ,ಭಾಷೆ ,ಸಂಸ್ಕ್ರತಿಯನ್ನು ಉಳಿಸಿ ಬೆಳೆಸುವಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿರುವ ರೋಷನ್ ಶೆಟ್ಟಿ ಯವರು ಇದಾಗಲೇ ಅನೇಕ ತುಳು ಚಲನಚಿತ್ರಗಳನ್ನು ಬಹರೈನ್ ನಲ್ಲಿ ಬಿಡುಗಡೆಗೊಳಿಸಿದ್ದಾರೆ .

ಚಿತ್ರದ ನಿರ್ದೇಶಕ ಸಾಯಿಕೃಷ್ಣ ರವರು ವಿಶೇಷವಾಗಿ ಬಹರೈನ್ ಗೆ ಆಗಮಿಸಿ ಈ ಪ್ರೀಮಿಯರ್ ಪ್ರದರ್ಶನದಲ್ಲಿ ಪಾಲ್ಗೊಳ್ಳಲಿದ್ದಾರೆ ಅಲ್ಲದೆ ಚಿತ್ರ ವೀಕ್ಷಣೆಯ ನಂತರ ವೀಕ್ಷಕರನ್ನು ಭೇಟಿಯಾಗಿ ಚಿತ್ರದ ಬಗೆಗಿನ ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ . ಈ ಚಿತ್ರ ಪ್ರದರ್ಶನದ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ರೋಷನ್ ಶೆಟ್ಟಿ ಯವರನ್ನು ದೂರವಾಣಿ ಸಂಖ್ಯೆ 39788945 ಮೂಲಕ ಸಂಪರ್ಕಿಸಬಹುದು .

Related Posts

Leave a Reply

Your email address will not be published.