ಪಡುಬಿದ್ರಿ ಬಿಜೆಪಿ ಮಹಾಶಕ್ತಿ ಕೇಂದ್ರದ ಚುನಾವಣಾ ಕೇಂದ್ರ : ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಅವರಿಂದ ಉದ್ಘಾಟನೆ

ಭಾರತೀಯ ಜನತಾ ಪಾರ್ಟಿ ಪಡುಬಿದ್ರಿ ಮಹಾಶಕ್ತಿಕೇಂದ್ರದ ಚುನಾವಣಾ ಕಾರ್ಯಾಲಯದ ಉದ್ಘಾಟನೆಯನ್ನು ಕಾಪು ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

gurme suresh shetty

ಬಳಿಕ ಮಾತನಾಡಿದ ಅವರು ಚುನಾವಣೆಗೆ ಸ್ಪರ್ಧಿಸಲು ಆರಂಭದಲ್ಲಿ ಪೈಪೋಟಿ, ಆದರೆ ಪಕ್ಷ ನಿರ್ಣಯಿಸಿ ಟಿಕೇಟ್ ಒರ್ವರಿಗೆ ನೀಡಿತು ಎಂದಾದರೆ, ಮತ್ತೆ ನಮ್ಮ ಅಭ್ಯರ್ಥಿ ಪರ ನಿಷ್ಠೆಯಿಂದ ಕೆಲಸ ನಡೆಸುವುದೇ ನಮ್ಮ ಪಕ್ಷದ ಸಿದ್ಧಾಂತ. ಈ ಹಿಂದೆ ನಾನು ಮಾಡಿದ್ದೇನೆ ಇದೀಗ ಶಾಸಕ ಲಾಲಾಜಿ ಮೆಂಡನ್ ಹಾಗೂ ಅಭ್ಯರ್ಥಿಯಾಗಿ ನಾವು ಒಂದಾಗಿ ಪಕ್ಷದ ಗೆಲುವಿಗಾಗಿ ದುಡಿಯುತ್ತಿದ್ದೇವೆ, ನನ್ನ ಕುಟುಂಬದಲ್ಲಿ ರಾಜಕೀಯ ಹಿನ್ನಲೆಯಿಲ್ಲ, ನಾನು ಗುತ್ತು ಮನೆತನದವನಲ್ಲ, ಸಾಮಾನ್ಯರಲ್ಲಿ ಸಾಮಾನ್ಯನಾದ ನನಗೆ ಪಕ್ಷ ಅವಕಾಶ ನೀಡಿರುವುದು ಸಂತೋಷ ತಂದಿದೆ ಎಂದರು.

ಶಾಸಕ ಲಾಲಾಜಿ ಮೆಂಡನ್ ಮಾತನಾಡಿ, ಪಕ್ಷವನ್ನು ತಳ ಮಟ್ಟದಿಂದ ಈ ಮಟ್ಟಕ್ಕೆ ಬೆಳೆಸಿ ಕಳೆದ ಅವಧಿಯಲ್ಲಿ ಕೋಟಿ ಕೋಟಿ ಹಣವನ್ನು ಕಾಪು ಕ್ಷೇತ್ರದ ಅಭಿವೃದ್ಧಿಗೆ ಬಳಕೆ ಮಾಡುವ ಮೂಲಕ ಜನರ ವಿಶ್ವಾಸ ಗಳಿಸಲಾಗಿದ್ದು, ಈ ಬಾರಿಯ ಗೆಲುವಿಗೆ ಇದು ಪೂರಕವಾಗಲಿದೆ ಎಂದರು.


ಕಾರ್ಯಕ್ರಮದ ವೇದಿಕೆಯಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಪಡುಬಿದ್ರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರವಿ ಶೆಟ್ಟಿ, ಪಡುಬಿದ್ರಿ ಮಹಾ ಶಕ್ತಿ ಕೇಂದ್ರ ಅಧ್ಯಕ್ಷರು ಶಿವಪ್ರಸಾದ್ ಶೆಟ್ಟಿ, ಪಡುಬಿದ್ರಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರು ಶಶಿಕಾಂತ್ ಪಡುಬಿದ್ರಿ ಹಾಗೂ ಪಕ್ಷದ ಪ್ರಮುಖರಾದ ಮಿಥುನ್ ಹೆಗ್ಡೆ, ಹರೀಶ್ ಶೆಟ್ಟಿ ಮುಂಬಯಿ, ನೀತಾ ಗುರುರಾಜ್, ಕೇಶವ ಮೊಯ್ಲಿ, ಗಾಯತ್ರಿ ಪ್ರಭು , ಸೌಮ್ಯಲತಾ ಶೆಟ್ಟಿ, ಜಯಶ್ರೀ ತೆಂಕ , ಯಶೋಧ ಕುಮಾರಿ ಹಾಗೂ ಇನ್ನಿತರ ಪ್ರಮುಖರು, ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು*

Related Posts

Leave a Reply

Your email address will not be published.