ಅಧಿಕಾರ ಚ್ಯುತಿ ಆರೋಪ: ತಹಶೀಲ್ದಾರ್ ಕಚೇರಿಯದುರು ಧರಣಿ ಕೂರಲ್ಲಿರುವ ಶಾಸಕರಾದ ಗುರುರಾಜ್ ಗಂಟಿಹೊಳೆ
ಬೈಂದೂರು: ಶಾಸಕರು ಅಧಿಕಾರಿಗಳ ಸಭೆ ಕರೆಯುವ ಅಧಿಕಾರಕ್ಕೆ ಚ್ಯುತಿ ಬಂದಿರುವ ಹಿನ್ನೆಲೆಯಲ್ಲಿ ದಿಢೀರ್ ಧರಣಿ ಕೂರಲು ಮುಂದಾದ ಶಾಸಕ ಗುರುರಾಜ್ ಗಂಟಿಹೊಳೆ.
ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಕಾರ್ಯಕರ್ತದಲ್ಲಿ ಸೋಮವಾರ ಅಧಿಕಾರಿಗಳ ಸಭೆ ನಿಗದಿಯಾಗಿತ್ತು. ಈ ಸಭೆಗೆ ಅಧಿಕಾರಿಗಳು ಹೋಗದಂತೆ ಮೇಲಾಧಿಕಾರಿಗಳಿಂದ ಸೂಚನೆ ಬಂದಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಬಾರದೆ ಇರುವುದನ್ನು ಖಂಡಿಸಿ ಮತ್ತು ಶಾಸಕರು ಸಭೆ ಕರೆಯುವ ಅಧಿಕಾರವನ್ನು ಮಟಕುಗೊಳಿಸುತ್ತಿರುವ ಹಾಗೂ ಅಧಿಕಾರಕ್ಕೆ ಚ್ಯುತಿ ತೋರುತ್ತಿರುವ ಕೃತ್ಯ ಖಂಡಿಸಿ ಶಾಸಕರು ಬೈಂದೂರು ತಹಶೀಲ್ದಾರ್ ಕಚೇರಿ ಎದುರು ಸಂಜೆ 4.30 ರಿಂದ ಅಹೋರಾತ್ರಿ ಧರಣಿಕೂರಲ್ಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.