Home Posts tagged #gururaj gantihole

ಬೈಂದೂರು : ಅಕ್ರಮ-ಸಕ್ರಮ ಅರ್ಜಿ ಅಧಿಕಾರಿಗಳ ಹಂತದಲ್ಲಿ ತಿರಸ್ಕಾರ ಮಾಡಕೂಡದು – ಶಾಸಕ ಗುರುರಾಜ್ ಗಂಟಿಹೊಳೆ

ಬೈಂದೂರು : ಅಕ್ರಮ- ಸಕ್ರಮ ( ಬಗರ್ ಹುಕುಂ ) ಸಮಿತಿಯ ಅವಗಾಹನೆಗೆ ತರದೇ ಕಂದಾಯ ಇಲಾಖೆ ಅಧಿಕಾರಿಗಳು ಯಾವುದೇ ಅರ್ಜಿ ತಿರಸ್ಕರಿಸುವುದು ಅಥವಾ ವಿಲೇವಾರಿ ಮಾಡುವಂತಿಲ್ಲ. ಸಮಿತಿಯ ಮುಂದೆ ತಂದು ಅಕ್ರಮ-ಸಕ್ರಮಕ್ಕೆ ಸಮಿತಿಯ ಸೂಚನೆಯಂತೆ ನಿರ್ಧರಿಸಬೇಕು.‌ಅಧಿಕಾರಿಗಳು ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಲ್ಲಿ ಬಹುದೊಡ್ಡ ಹೋರಾಟ ರೂಪಿಸಬೇಕಾಗುತ್ತದೆ ಎಂದು ಶಾಸಕರಾದ

ಬೈಂದೂರು ಉತ್ಸವ ಪೂರ್ವ ಭಾವಿ ಸಭೆ

ಸಮೃದ್ಧ ಬೈಂದೂರು ಪರಿಕಲ್ಪನೆಯಡಿ ಸ್ಥಳೀಯ ಸಂಸ್ಕೃತಿ, ಆಚಾರ, ವಿಚಾರಳನ್ನು ಬಿಂಬಿಸುವ ಹಾಗೂ ಇಡೀ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸುವ ಮತ್ತು ಜಾಗತಿ ಮಟ್ಟದಲ್ಲಿ ಗುರತಿಸುವ ಮೂಲಕ ಜಾಗತಿಕ ಹೂಡಿಕೆದಾರರನ್ನು ಸೆಳೆದು ಹೆಚ್ಚೆಚ್ಚು ಉದ್ಯೋಗ ಸೃಷ್ಟಿಗೆ ಪೂರಕವಾಗುವಂತೆ ಜನರಿಗೆ ಬೈಂದೂರು ಕ್ಷೇತ್ರದ ಬಗ್ಗೆ ಹೊಸ ಚಿಂತನೆಯನ್ನು ಸೃಷ್ಟಿಸುವ ಸಲುವಾಗಿ ಬೈಂದೂರು ಉತ್ಸವ ಆಚರಿಸಲು ಚಿಂತಿಸಲಾಗಿದೆ ಎಂದು ಶಾಸಕ ಗುರುರಾಜ್ ಗಟಿಹೊಳೆ ಹೇಳಿದರು. ಅವರು ಉಪ್ಪುಂದ

ಅಧಿಕಾರ ಚ್ಯುತಿ ಆರೋಪ: ತಹಶೀಲ್ದಾರ್ ಕಚೇರಿಯದುರು ಧರಣಿ ಕೂರಲ್ಲಿರುವ ಶಾಸಕರಾದ ಗುರುರಾಜ್ ಗಂಟಿಹೊಳೆ

ಬೈಂದೂರು: ಶಾಸಕರು ಅಧಿಕಾರಿಗಳ ಸಭೆ ಕರೆಯುವ ಅಧಿಕಾರಕ್ಕೆ ಚ್ಯುತಿ ಬಂದಿರುವ ಹಿನ್ನೆಲೆಯಲ್ಲಿ ದಿಢೀರ್ ಧರಣಿ ಕೂರಲು ಮುಂದಾದ ಶಾಸಕ ಗುರುರಾಜ್ ಗಂಟಿಹೊಳೆ. ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಕಾರ್ಯಕರ್ತದಲ್ಲಿ ಸೋಮವಾರ ಅಧಿಕಾರಿಗಳ ಸಭೆ ನಿಗದಿಯಾಗಿತ್ತು. ಈ ಸಭೆಗೆ ಅಧಿಕಾರಿಗಳು ಹೋಗದಂತೆ ಮೇಲಾಧಿಕಾರಿಗಳಿಂದ ಸೂಚನೆ ಬಂದಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಬಾರದೆ ಇರುವುದನ್ನು ಖಂಡಿಸಿ ಮತ್ತು ಶಾಸಕರು ಸಭೆ ಕರೆಯುವ ಅಧಿಕಾರವನ್ನು ಮಟಕುಗೊಳಿಸುತ್ತಿರುವ ಹಾಗೂ

ತಕ್ಷಣವೇ ಬೈಂದೂರು ಕ್ಷೇತ್ರಕ್ಕೆ ಪಶುವೈದ್ಯರನ್ನು ನೇಮಿಸಿ – ಹೋರಾಟದ ಎಚ್ಚರಿಕೆ ನೀಡಿದ ಶಾಸಕ ಗುರುರಾಜ್ ಗಂಟಿಹೊಳೆ

ಬೈಂದೂರು: ರಾಜ್ಯ ಸರ್ಕಾರ ವಿವಿಧ ಜಿಲ್ಲೆಗಳಿಗೆ ಪಶು ವೈದ್ಯರನ್ನು ನೇಮಕ ಮಾಡುತ್ತಿದ್ದು, ಬೈಂದೂರು ತಾಲೂಕಿಗೆ ಇನ್ನೂ ಪಶುವೈದ್ಯರ ನೇಮಕ ಮಾಡದೆ ಇರುವ ರಾಜ್ಯ ಸರ್ಕಾರದ ಕ್ರಮವನ್ನು ಶಾಸಕರಾದ ಗುರುರಾಜ್ ಗಂಟಿಹೊಳೆಯವರು ತೀವ್ರವಾಗಿ ಖಂಡಿಸಿದ್ದಾರೆ.ಬೈಂದೂರು ಕ್ಷೇತ್ರ ವ್ಯಾಪ್ತಿಯಲ್ಲಿ ಪಶುವೈದ್ಯರ ಕೊರತೆಯಿಂದ ಆಗುತ್ತಿರುವ ಸಮಸ್ಯೆಯ ಬಗ್ಗೆ ಈಗಾಗಲೇ ವಿಧಾನ ಮಂಡಲ ಅಧಿವೇಶನದಲ್ಲಿ ಸಂಬಂಧಪಟ್ಟ ಸಚಿವರ ಗಮನಕ್ಕೂ ತರಲಾಗಿತ್ತು. ನೇಮಿಸುವ ಭರವಸೆಯನ್ನು ನೀಡಿದ್ದರು.

ಬೈಂದೂರು : ರಕ್ಷಕ್ ನೆಟವರ್ಕ್ & ಸೆಕ್ಯೂರಿಟಿ ಸಲ್ಯೂಷನ್ ಶುಭಾರಂಭ

ಬೈಂದೂರು ಕಿರಿಮಂಜೇಶ್ವರದಲ್ಲಿರುವ ಜಿ.ಎನ್ ಖಾರ್ವಿ ಕಾಂಪ್ಲೆಕ್ಸ್‌ನಲ್ಲಿ ನೂತನ “ರಕ್ಷಕ್ ನೆಟವರ್ಕ್ & ಸೆಕ್ಯೂರಿಟಿ ಸಲ್ಯೂಷನ್’ ಶುಭಾರಂಭಗೊಂಡಿತು. ಬೈಂದೂರು ಶಾಸಕ ಗುರುರಾಜ್ ಗಂಟೆಹೊಳೆ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,ನಮ್ಮ ಜಿಲ್ಲೆಯನ್ನು ಸೇಫ್ ಆಗಿಸುವ ನಿಟ್ಟಿನಲ್ಲಿ “ರಕ್ಷಕ್ ನೆಟವರ್ಕ್ & ಸೆಕ್ಯೂರಿಟಿ ಸಲ್ಯೂಷನ್’ ಸಂಸ್ಥೆಯು ಪೋಲೀಸ್ ಇಲಾಖೆಯ ಸಹಕಾರದೊಂದಿಗೆ ನಿಯಂತ್ರಣ ಕೊಠಡಿ ಮಾದರಿಯಲ್ಲಿ

ಮಳೆಹಾನಿಗೆ ತುರ್ತು ಪರಿಹಾರ ಒದಗಿಸಲು ಶಾಸಕರಾದ ಗುರುರಾಜ್ ಗಂಟಿಹೊಳೆ ನಿರ್ದೇಶನ

ಬೈಂದೂರು: ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಗಾಳಿಮಳೆ, ಕಡಲ್ಕೊರೆತ ಮತ್ತು ನೆರೆಯಿಂದ ಆಗಿರುವ ಹಾನಿಗಳಿಗೆ ಶೀಘ್ರವೇ ಪರಿಹಾರ ಒದಗಿಸಬೇಕು ಮತ್ತು ಅಗತ್ಯ ಮೂಲಸೌಕರ್ಯಗಳನ್ನು ಪೂರೈಸಬೇಕು ಎಂದು ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ವಿವಿಧ ಇಲಾಖೆಯ ಅಧಿಕಾರಿಗಳ ತುರ್ತು ಸಭೆ ನಡೆಸಿದ ಅವರು ನಿರಂತರ ಮಳೆಯಿಂದ ನೆರೆ, ಪ್ರವಾಹದಿಂದ ಅನೇಕರ ಮನೆಗಳಿಗೆ ನೀರು ನುಗ್ಗಿ ಅಪಾರ ಹಾನಿಯಾಗಿವೆ. ಕೆಲವು ಕಡೆಗಳಲ್ಲಿ ರಸ್ತೆ

ಆಸ್ಪತ್ರೆ ಕಟ್ಟಡ, ಮೂಲಸೌಕರ್ಯ, ಜಾಗದ ಕೊರತೆ ನೀಗಿಸಲು ಶಾಸಕ ಗುರುರಾಜ್ ಗಂಟಿಹೊಳೆ ಅಧಿಕಾರಿಗಳಿಗೆ ಸೂಚನೆ

ಬೈಂದೂರು: ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಳು ಹೆಚ್ಚಾಗಿ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಹೀಗಾಗಿ ಎಲ್ಲೆಡೆ ಅಗತ್ಯ ಎಚ್ಚರಿಕ ಕ್ರಮಗಳನ್ನು ತೆಗೆದುಕೊಳ್ಳುವ ಜತೆಗೆ ಸಾರ್ವಜನಿಕವಾಗಿ ಈ ಬಗ್ಗೆ ಅರಿವು ಮೂಡಿಸಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಶಾಸಕರದ ಗುರುರಾಜ್ ಗಂಟಿಹೊಳೆ ನಿರ್ದೇಶನ ನೀಡಿದರು. ಉಪ್ಪುಂದದ ಕಾರ್ಯಕರ್ತದಲ್ಲಿ ಆರೋಗ್ಯ & ಆಯುಷ್ ಇಲಾಖೆ ವೈದ್ಯಾಧಿಕಾರಿಗಳು, ಕಂದಾಯ & ಸರ್ವೇ ಇಲಾಖೆ ಹಾಗೂ ಬಿಎಸ್ಎನ್ಎಲ್ ಮತ್ತು ಕೆಪಿಸಿಎಲ್

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ ರಾಘವೇಂದ್ರ ನಾಮಪತ್ರ ಸಲ್ಲಿಕೆ

ಬೈಂದೂರು: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ ರಾಘವೇಂದ್ರ ಗುರುವಾರ ನಾಮಪತ್ರ ಸಲ್ಲಿಸಿದರು.ಬಳಿಕ ಶಿವಮೊಗ್ಗ ಮುಂತಾದ ಕಡೆಗಳಲ್ಲಿ ಬ್ರಹತ್‌ ಮೆರವಣಿಗೆ ನಡೆಯಿತು.ನೂರಾರು ಬಿಜೆಪಿ ಕಾರ್ಯಕರ್ತರು ಹಾಜರಿದ್ದರು. ಈ ಸಂದರ್ಭದಲ್ಲಿ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ,ತೀರ್ಥಹಳ್ಳಿ ಶಾಸಕ ಅರಗ ಜ್ಞಾನೇಂದ್ರ,ವಿಧಾನಪರಿಷತ್‌ ಸದಸ್ಯ ಎಸ್.ರುದ್ರೇಗೌಡ ಹಾಗೂ ಬಿಜೆಪಿ ಮುಖಂಡರು ಹಾಜರಿದ್ದರು.

ಉಪ್ಪುಂದ ಕರ್ಕಿಕಳಿ ದೋಣಿ ದುರಂತ ಪ್ರಕರಣ : ಘಟನಾ ಸ್ಥಳಕ್ಕೆ ಮೀನುಗಾರಿಕ ಸಚಿವರು, ಶಾಸಕರು ಭೇಟಿ

ಬೈಂದೂರು: ತಾಲೂಕಿನ ಉಪ್ಪುಂದ ಕರ್ಕಿಕಳಿ ಎಂಬಲ್ಲಿ ನಡೆದ ದೋಣಿ ದುರಂತ ಪ್ರದೇಶ ಹಾಗೂ ಮೃತ ಮೀನುಗಾರರ ಮನೆಗಳಿಗೆ ಸಚಿವ ಮಾಂಕಾಳ ವೈದ್ಯ ಮತ್ತು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಭೇಟಿ ನೀಡಿ ಸಾಂತ್ವಾನ ಹೇಳಿದರು. ಸಚಿವ ಮಾಂಕಾಳ ವೈದ್ಯ ಮಾತನಾಡಿ ದೋಣಿ ದುರಂತದ ಬಗ್ಗೆ ನೋವಿದೆ. ಮೀನುಗಾರ ಕುಟುಂಬಕ್ಕೆ 24 ಗಂಟೆಯೊಳಗೆ ಸಂಕಷ್ಟ ಪರಿಹಾರ ನಿಧಿ ದೊರಕಿಸಿಕೊಡಬೇಕೆಂಬುದು ಶ್ರಮವಹಿಸಿದ್ದು, ಮೃತ ಮೀನುಗಾರರ ಕುಟುಂಬಕ್ಕೆ ತಲಾ ಲಕ್ಷ 6 ಹಸ್ತಾಂತರಿಸಲಾಗುತ್ತಿದೆ.

ಅಂಕಪಟ್ಟಿ ಪರಿಶೀಲನೆಗೆ ದುಬಾರಿ ಶುಲ್ಕ ಇಳಿಕೆ : ಶಾಸಕ ಗುರುರಾಜ್ ಮನವಿಗೆ ಸ್ಪಂದಿಸಿದ ಮಂಗಳೂರು ವಿವಿ

ಉಪ್ಪುಂದ: ಪದವೀಧರರು ಉದ್ಯೋಗಕ್ಕೆ ಸೇರುವ ಸಂದರ್ಭ ಸಲ್ಲಿಸುವ ಅಂಕಪಟ್ಟಿಯ ಪರಿಶೀಲನೆ (ವೆರಿಫಿಕೇಶನ್) ಕಡ್ಡಾಯ. ಆದರೆ ಅಂಕಪಟ್ಟಿ ಪರಿಶೀಲನೆಗೆ ಮಂಗಳೂರು ವಿ.ವಿ.ಯ ವಿದ್ಯಾರ್ಥಿಗಳು ದುಬಾರಿ ಶುಲ್ಕ ತೆರಬೇಕಾಗಿದ್ದು, ಇದನ್ನು ಇಳಿಸಲು ಕ್ರಮ ಕೈಗೊಳ್ಳಬೇಕು ಎಂದು ವಿ.ವಿ.ಯ ಉಪಕುಲಪತಿಗಳಿಗೆ ನೂತನ ಶಾಸಕ ಬೈಂದೂರಿನ ಗುರುರಾಜ್ ಗಂಟೆಹೊಳೆ ಟ್ವಿಟ್ ಮೂಲಕ ಮನವಿ ಮಾಡಿದ್ದು ಮನವಿಗೆ ಮಂಗಳೂರು ವಿ.ವಿ. ಸ್ಪಂದಿಸಿದೆ. ಪದವೀಧರ ತನ್ನ ೬ ಸೆಮಿಸ್ಟರ್‌ಗಳ ಅಂಕಪಟ್ಟಿಗಳನ್ನು