ಗುರುವಾಯಿನಕೆರೆ: ವಿದ್ವತ್ ಪಿಯು ಕಾಲೇಜು – ಸ್ಫೂರ್ತಿಯಿಂದ ಸ್ಫೂರ್ತಿಯೆಡೆಗೆ – ಸಾಧಕರೊಂದಿಗೆ ಸಂವಾದ
ಗುರುವಾಯನಕೆರೆಯ ವಿದ್ವತ್ ಪದವಿ ಪೂರ್ವ ಕಾಲೇಜಿನಲ್ಲಿ“ ಸ್ಫೂರ್ತಿಯಿಂದ ಸ್ಫೂರ್ತಿಯೆಡೆಗೆ- ಸಾಧಕರೊಂದಿಗೆ ಸಂವಾದ “ಕಾರ್ಯಕ್ರಮ ನಡೆಯಿತು.
ಪಿಯು ವಿದ್ಯಾರ್ಥಿಗಳನ್ನು ಸಾಧಕ ಆಕಾಂಕ್ಷಿಗಳನ್ನಾಗಿ ಪ್ರೇರೆಪಿಸಿ, ಪರಿವರ್ತಿಸಲೆಂದೇ ಆಯೋಜಿಸಲಾಗಿದ್ದ ಈ ವಿಶೇಷ ಪ್ರಯತ್ನಕ್ಕೆ ಮಂಜುನಾಥ್ ಎಸ್. ಅವರು ಅತಿಥಿಯಾಗಿ ಆಗಮಿಸಿದ್ದರು. ಬಳಿಕ ಮಾತನಾಡಿದ ಅವರು, “ಪ್ರಯತ್ನಶೀಲತೆ ಹಾಗೂ ಪರಿಣಾಮಕಾರಿ” ಅಭ್ಯಾಸ ನಿರಂತರವಾಗಿರಬೇಕೆಂದು ಹೇಳಿ, ವೈಜ್ಞಾನಿಕ ಸ್ಟಡಿ ಮಾದರಿ, ಫಲೋಅಪ್, ಆಪ್ತಸಮಾಲೋಚನೆ, ಹೆಚ್ಚಿನ ಸಮಯದ ಅಭ್ಯಾಸ ತರಗತಿಗಳು ಹಾಗೂ ವಿಷಯ ತಜ್ಞರ ತರಬೇತಿ ಮಾದರಿಯನ್ನು ಈಗಾಗಲೇ ವಿದ್ವತ್ ಪಿಯು ಕಾಲೇಜಿನಲ್ಲಿ ಅಳವಡಿಸಿಕೊಂಡಿರುವುದರಿಂದ ಅದರ ಧನಾತ್ಮಕ ಪರಿಣಾಮದ ಬಗ್ಗೆ ಹಾಗೂ ಕಾಲೇಜಿನಲ್ಲಿರುವ ಕೌನ್ಸಲಿಂಗ್ ವ್ಯವಸ್ಥೆಯನ್ನು ಕೊಂಡಾಡಿದರು.
ಸಂಸ್ಥೆಯ ಅಧ್ಯಕ್ಷರಾದ ಸುಭಾಶ್ಷಂದ್ರ ಶೆಟ್ಟಿ, ಸಂಸ್ಥೆಯ ಕೋಶಾಧಿಕಾರಿಯಾದ ಎಂ.ಕೆ ಕಾಶಿನಾಥ್ ಹಾಗೂ ಪ್ರಾಂಶುಪಾಲರಾದ ಅರುಣ್ ಕ್ಯಾಸ್ತಲಿನೊ ಉಪಸ್ಥಿತರಿದ್ದರು.