ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಹಳೆಯಂಗಡಿ ಇದರ ವಾರ್ಷಿಕ ಮಹಾಸಬೆಯಲ್ಲಿ ಘೋಷಿಸಿದಂತೆ, ಸಹಕಾರಿ ದಿಗ್ಗಜ ದಿವಂಗತ ಎಚ್ ನಾರಾಯಣ ಸನಿಲ್ ಮರಣೋತ್ತರ ಸಹಾಯ ನಿಧಿಯನ್ನು ಸ್ಥಾಪನೆ ಮಾಡಿದ್ದು, ಈ ನಿಧಿಯ ಅನ್ವಯ ಸೊಸೈಟಿಯಲ್ಲಿ ಸದಸ್ಯರಾಗಿದ್ದ ವ್ಯಕ್ತಿಗಳು ಮರಣ ಹೊಂದಿದ್ದಲ್ಲಿ ಅವರ ವಾರಿಸುದಾರರಿಗೆ ಮೃತರ ಶವ ಸಂಸ್ಕಾರ ಬಾಪ್ತು ರೂಪಾಯಿ 10,000/- ಮೊತ್ತವನ್ನು ಸಹಾಯರೂಪವಾಗಿ ನೀಡಲಾಗುವುದು. ಎಂದು ಸೊಸೈಟಿಯ ಅಧ್ಯಕ್ಷರಾದ ಶ್ರೀ ಎಚ್ ವಸಂತ ಬರ್ನಾಡ್ ಪತ್ರಿಕಾ ಪ್ರಕಟಣೆ ನೀಡುತ್ತಾರೆ.
ಹಳೆಯಂಗಡಿಯ ಎಚ್ ನಾರಾಯಣ ಸನಿಲ್ ರವರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೀಡಿದ ಸಹಕಾರಿ ಸೇವೆಯನ್ನು ಅಜರಾಮರವಾಗಿ ಇರಿಸುವ ಉದ್ದೇಶದಿಂದ ಈ ಉತ್ಕೃಷ್ಟ ಯೋಜನೆಗೆ ಇವರ ಹೆಸರನ್ನು ನೀಡಲಾಗಿದ್ದು, ನಾರಾಯಣ ಸನಿಲ್ ರವರ ಆದರ್ಶಗಳು ಮುಂದಿನ ಪೀಳಿಗೆಗೂ ಅನುಕರಣವಾಗಲಿ ಎಂದು ಈ ಹೆಸರನ್ನು ಪ್ರಸ್ತಾಪಿಸಲಾಗಿದೆ ಎಂದು ತಿಳಿಸಿದ್ದಾರೆ.

