HomeFresh Newsಆರೋಗ್ಯ ಸಚಿವ ಯು.ಟಿ. ಖಾದರ್ ಅವರಿಗೆ ’ಫಾರ್ ದಿ ಕಾಂಗ್ರೆಸ್ಸಿನಲ್ ರೆಕಾರ್ಡ್’ ಪ್ರಶಸ್ತಿ ಪ್ರದಾನ

ಆರೋಗ್ಯ ಸಚಿವ ಯು.ಟಿ. ಖಾದರ್ ಅವರಿಗೆ ’ಫಾರ್ ದಿ ಕಾಂಗ್ರೆಸ್ಸಿನಲ್ ರೆಕಾರ್ಡ್’ ಪ್ರಶಸ್ತಿ ಪ್ರದಾನ

ಅಮೆರಿಕದ ಹೌಸ್ ಫಾರಿಸ್ ಅಫೇರ್ಸ್ ಸಮಿತಿಯ ರ್‍ಯಾಂಕಿಂಗ್ ಸದಸ್ಯ, ನಾಯಕ ಜೊನಾಥನ್ ಜಾಕ್ಸನ್ ಅವರು, ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ| ಯು.ಟಿ.ಖಾದರ್ ಫರೀದ್ ಅವರ ಸಾರ್ವಜನಿಕ ಸೇವೆ ಮತ್ತು ನಾಯಕತ್ವದ ಸಾಧನೆ ಗುರುತಿಸಿ ಪ್ರತಿಷ್ಠಿತ ’ಫಾರ್ ದಿ ಕಾಂಗ್ರೆಸ್ಸಿನಲ್ ರೆಕಾರ್ಡ್’ ದಾಖಲೆಯನ್ನು ಪ್ರದಾನ ಮಾಡಿದರು.

ಈದಾಖಲೆ ಅಮೆರಿಕದ ಸಂಸತ್ತಿನ ಆರ್ಚಿವರ್ಸ್‌ನಲ್ಲಿ ಅಧಿಕೃತವಾಗಿ ದಾಖಲಾಗಿದ್ದು, ಅಮೆರಿಕದ ಸಂಸತ್ತಿನ ಗ್ರಂಥಾಲಯದಲ್ಲಿ ಶಾಶ್ವತವಾಗಿ ಸಂರಕ್ಷಿಸಲ್ಪಡಲಿದೆ.

ಜೊತೆಗೆ ಅಮೆರಿಕದ ಕ್ಯಾಪಿಟಲ್ ಹಿಲ್‌ನ ಸೆಂಟ್ರಲ್ ರೋಟುಂಡಾದಲ್ಲಿ ಪ್ರದಾನಗೊಳ್ಳುವ ಪ್ರತಿಷ್ಠಿತ ಕಾಂಗ್ರೆಸ್ಸಿನಲ್ ಚಾಲೆಂಜ್ ಮೆಡಲಿಯನ್ನು ವಾಷಿಂಗ್ಟನ್ ಡಿ.ಸಿ.ಯಲ್ಲಿ ಯು.ಟಿ.ಖಾದರ್ ಫರೀದ್ ಅವರಿಗೆ ಗೌರವಪೂರ್ವಕವಾಗಿ ಪ್ರದಾನಿಸಲಾಯಿತು.

ವರದಿ: ಮಂಗಳೂರು

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments