HomeFresh Newsಹೆಜಮಾಡಿ ಟೋಲ್ ಬಳಿ ಕುಡುಕ ಲಾರಿ ಚಾಲಕನ ಅವಾಂತರ

ಹೆಜಮಾಡಿ ಟೋಲ್ ಬಳಿ ಕುಡುಕ ಲಾರಿ ಚಾಲಕನ ಅವಾಂತರ

ವಿಪರೀತ ಮದ್ಯಪಾನ ಮಾಡಿ ಕಂಟೇನರ್ ಚಲಾಯಿಸಿಕೊಂಡು ಬಂದು ಹೆಜಮಾಡಿ ಟೋಲ್ ಬಳಿಯ ಬೃಹತ್ ವಿದ್ಯುತ್ ಕಂಬಕ್ಕೆ ಡಿಕ್ಕಿಯೊಡೆದ ಘಟನೆ ನಡೆದಿದೆ.ಯು.ಪಿ. ಮೂಲದ ವ್ಯಕ್ತಿ ಮಹಾರಾಷ್ಟ್ರ ನೋಂದಾಯಿತ ಕಂಟೇನರ್ ಚಲಾಯಿಸಿಕೊಂಡು ಬಂದಿದ್ದು, ಅದೃಷ್ಟವಶಾತ್ ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಬಳಿಕ ಸ್ಥಗಿತಗೊಂಡ ಕಂಟೇನರ್ ನಲ್ಲಿದ್ದ ಚಾಲಕನನ್ನು ಸ್ಥಳೀಯರು ವಿಚಾರಿಸಲು ಮುಂದಾದಾಗ ಮದ್ಯ ಸೇವಿಸಿದ್ದು ಗಮನಕ್ಕೆ ಬಂದಿದೆ. ಸ್ಥಳಕ್ಕೆ ಬಂದ ಪಡುಬಿದ್ರಿ ಪೊಲೀಸ್ರು ಚಾಲಕನನ್ನು ವಾಹನದಿಂದ ಕೆಳಗಿಳಿಸಲು ಸಾರ್ವಜನಿಕರೊಂದಿಗೆ ಸೇರಿ ಹರ ಸಹಾಸ ಪಟ್ಟರು, ಬಳಿಕ ನಡೆಯುವ ಸ್ಥಿತಿಯಲ್ಲೂ ಇರದ ಚಾಲಕನನ್ನು ಠಾಣೆಗೆ ಕರೆದ್ದೋಯ್ಯಲಾಯಿತು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments