ಆಗಸ್ಟ್ 11ರಂದು ಕರಾವಳಿಯಾದ್ಯಂತ ಕೊರಮ್ಮ ತುಳು ಚಲನಚಿತ್ರ ಬಿಡುಗಡೆ
ತುಳುನಾಡ ಸಂಸ್ಕøತಿ, ಆಚಾರ-ವಿಚಾರ, ನಡೆ ನುಡಿ, ಜೀವನ ಪದ್ಧತಿ ಇವೆಲ್ಲವುಗಳೊಂದಿಗೆ ಮನೋರಂಜನೆಯನ್ನು ಬೆರೆಸಿಕೊಂಡು ಕುತೂಹಲ ಹುಟ್ಟಿಸುವ ಕಥೆ ಹೆಣೆದು ಸುಂದರವಾಗಿ ಮಾಡಿರುವ ತುಳು ಸಿನಿಮಾ ಕೊರಮ್ಮ. ಈ ಚಲನಚಿತ್ರ ಆಗಸ್ಟ್ 11ರಂದು ಕರಾವಳಿಯ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲಿದೆ.
ಸಫೈರ್ ಪ್ರೋಡಕ್ಷನ್ ಹೌಸ್ ನಿರ್ಮಾಣ ಸಂಸ್ಥೆಯ ಮೂಲಕ ಅಡ್ಯಾರು ಮಾಧವ ನಾಯ್ಕ್ ಅರ್ಪಿಸಿರುವ ಈ ಚಿತ್ರದ ಹಾಡಿನ ದೃಶ್ಯದಲ್ಲಿ ತುಳುನಾಡಿನ ಪೂರ್ವಜರ ಬದುಕು ಮಾರ್ಮಿಕವಾಗಿ ಪ್ರತಿಬಿಂಬಿತವಾಗಿದೆ. ರಾಷ್ಟ್ರ ಪ್ರಶಸ್ತಿ ಚಿತ್ರ ನಿರ್ದೇಶಕ ಶಿವಧ್ವಜ್ ಶೆಟ್ಟಿ ಅವರು ಈ ಸಿನಿಮಾದ ಕಥೆ, ಚಿತ್ರಕಥೆ, ನಿರ್ದೇಶನ ಮಾಡಿದ್ದಾರೆ. ಈಶ್ವರಿದಾಸ್ ಶೆಟ್ಟಿ, ಮತ್ತು ರಾಜೇಶ್ವರಿ ರೈ ಅವರು ಸಿನಿಮಾ ನಿರ್ಮಿಸಿದ್ದು, ಸಂಗೀತ ಶಿನೋಯ್ ವಿ. ಜೋಸೆಫ್, ಛಾಯಾಗ್ರಹಣ ಸುರೇಶ್ ಬೈರಸಂದ್ರ, ಸಂಕಲನ ಗಣೇಶ್ ನೀರ್ಚಾಲ್ ನಿರ್ವಹಿಸಿದ್ದಾರೆ. ಗುರುಪ್ರಸಾದ್ ಹೆಗ್ಡೆ, ರೂಪಶ್ರೀ ವರ್ಕಾಡಿ, ಮೋಹನ್ ಶೇಣಿ, ಬಿಂದು ರಕ್ಷದಿ ಜಿನ ಪ್ರಸಾದ್ ಲಕ್ಷ್ಮಣ್ ಕುಮಾರ್ ಮಲ್ಲೂರು ಸೇರಿದಂತೆ ಅನೇಕ ತಾರಾಂಗಣವಿದೆ. ಈ ಬಗ್ಗೆ ಚಿತ್ರತಂಡ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದರು.
ಸುದ್ದಿಗೋಷ್ಟಿಯಲ್ಲಿ ಚಿತ್ರದ ನಿರ್ದೇಶಕರಾದ ಶಿವಧ್ವಜ್ ಶೆಟ್ಟಿ, ಈಶ್ವರಿದಾಸ್ ಶೆಟ್ಟಿ, ಅಡ್ಯಾರು ಮಾಧವ ನಾಯ್ಕ್, ದೀಪಕ್, ಗುರುಪ್ರಸಾದ್ ಹೆಗ್ಡೆ, ಮೋಹನ್ ಶೇಣಿ, ಲಕ್ಷ್ಮಣ್ ಕುಮಾರ್ ಮಲ್ಲೂರು ಮತ್ತಿತರರು ಉಪಸ್ಥಿತರಿದ್ದರು.