ನವೆಂಬರ್ 22 ಮಂಗಳೂರಿನಲ್ಲಿ “ಹೋಮ್ ಆರ್ಟ್ ಲೈಟ್ಸ್” ಶುಭಾರಂಭ

ಮಂಗಳೂರು: ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಯ ಜನತೆಗೊಂದು ಸಿಹಿ ಸುದ್ದಿ ಮಂಗಳೂರಿನಲ್ಲಿ ಮೊತ್ತ ಮೊದಲ ಬಾರಿಗೆ ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಬ್ರಾಂಡೆಡ್ ಲೈಟಿಂಗ್ ಔಟ್ ಲೆಟ್ ಶೋ ರೂಂ ಮಳಿಗೆ ಹೋಮ್ ಆರ್ಟ್ ಲೈಟ್ಸ್ ಇದೇ ಬರುವ 2022 ನವೆಂಬರ್ 27 ರಂದು ಭಾನುವಾರ ಬೆಳಿಗ್ಗೆ 11 ಗಂಟೆಗೆ ಶುಭಾರಂಭಗೊಳ್ಳಲಿರುವುದಾಗಿ ಸಂಬಂಧಪಟ್ಟವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನೂತನವಾಗಿ ಶುಭಾರಂಭಗೊಳ್ಳಲಿರುವ 2300 ಚದರ ಮೀಟರ್ ವಿಸ್ತೀರ್ಣ ನ ಹೋಮ್ ಆರ್ಟ್ ಲೈಟ್ಟ್ ಮಳಿಗೆಯಲ್ಲಿ ಹೆವೆಲ್ಸ್ ಪ್ರೀಮಿಯಂ ಬ್ರಾಂಡ್ ಡೆಕೊ ಲೈಟ್ಸ್ , ವಾಲ್ ಲೈಟ್ಸ್, ಚಂಡೇಲಿಯರ್, ಪಾನಲ್ ಲೈಟ್ಸ್, ಸ್ಟ್ರಿಪ್ ಲೈಟ್, ಸ್ಮಾರ್ಟ್ ಲೈಟ್, ವಿವಿಧ ವಿನ್ಯಾಸದ ಫ್ಯಾನ್ ಗಳು, ವಾಟರ್ ಪ್ಯೂರಿ ಫೈಯರ್ ಹಾಗೂ ವಾಟರ್ ಹೀಟರ್ ಸೇರಿದಂತೆ ಮನೆಗಳಿಗೆ ಹಾಗೂ ವ್ಯಾಪಾರ ಕೇಂದ್ರಗಳಿಗೆ ಬೇಕಾಗಿರುವ ಸಾಮಾಗ್ರಿಗಳು ಇಲ್ಲಿ ಮಿತವಾದ ದರದಲ್ಲಿ ದೊರೆಯಲಿ ರುವುದಾಗಿ ಅಧಿಕೃತರು ಮಾಹಿತಿ ನೀಡಿದ್ದಾರೆ.
