ಬಿಜೆಪಿಯವರು ಗೆಲುವಿನ ಭ್ರಮೆ ಇಟ್ಟುಕೊಂಡಿದ್ರೆ ಸತ್ಯಕ್ಕೆ ದೂರವಾದ ವಿಚಾರ : ಮಾಜಿ ಎಮ್‍ಎಲ್‍ಸಿ ಐವನ್ ಡಿಸೋಜಾ

ದ.ಕ ಮತ್ತು ಉಡುಪಿಯಲ್ಲಿ 2013 ರ ಚರಿತ್ರೆ ಮರುಕಳಿಸಲಿದೆ. ಬಿ.ಜೆ.ಗೆ 2018ರಲ್ಲಿ ಮತ ಹಾಕಿದವರು ಇದೀಗ ಪಶ್ಚತ್ತಾಪಪಡುತ್ತಿದ್ದಾರೆ. ಜನಸಾಮಾನ್ಯರು ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದಾರೆ, ಬಿ.ಜೆ.ಪಿಯವರು ಭ್ರಮೆ ಇಟ್ಟು ಕೊಂಡಿದ್ದರೆ ಅದು ಸತ್ಯಕ್ಕೆ ದೂರವಾದ ವಿಚಾರ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದರು.
ಅವರು ನಗರದ ಕಾಂಗ್ರೆಸ್‍ನ ಚುನಾವಣಾ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. 2023 ರ ಚುನಾವಣೆಯಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಜೆ.ಆರ್ ಲೋಬೋ 20,000ಕ್ಕಿಂತಲೂ ಅಧಿಕ ಮತಗಳಿಂದ ಜಯಗಳಿಸಲಿದ್ದಾರೆ ಎಂದರು. ಇನ್ನು ಜೆ.ಆರ್. ಲೋಬೋ ನಾಮಪತ್ರ ಸಲ್ಲಿಕೆ ವೇಳೆಯಲ್ಲಿ ಕಾಂಗ್ರೆಸ್ ಮುಖಂಡರಾದ ಯು.ಟಿ.ಖಾದರ್, ಮೊಯಿದಿನ್ ಬಾವ, ಶಕುಂತಲಾ ಶೆಟ್ಟಿ, ರಕ್ಷಿತ್ ಶಿವರಾಮ್, ಜಿ.ಕೃಷ್ಣಪ್ಪ, ಹರೀಶ್ ಕುಮಾರ್, ಮಂಜುನಾಥ್ ಭಂಡಾರಿ, ಸುದೀರ್ ಕುಮಾರ್ ಮರೋಳಿ ಸೇರಿದಂತೆ ಮೊದಲಾದವರು ಪಾಲ್ಗೊಳ್ಳಲಿದ್ದಾರೆ ಎಂದರು
ಸುದ್ದಿಗೋಷ್ಟಿಯಲ್ಲಿ ವಿಶ್ವಾಸ್ ಕುಮಾರ್ ದಾಸ್, ಕಳ್ಳಿಗೆ ತಾರನಾಥ್ ಶೆಟ್ಟಿ, ಅಬ್ದುಲ್ ಸಲೀಮ್, ಶಶಿಧರ್ ಹೆಗ್ಡೆ, ಪ್ರಕಾಶ್ ಸಾಲಿಯಾನ್, ಅಲಿಸ್ಟನ್ ಡಿಕುನ್ನಾ, ಸಬಿತಾ ಮಿಸ್ಕಿತ್ ಮೊದಲಾದವರು ಉಪಸ್ಥಿತರಿದ್ದರು.