ಜೆಸಿಐನಿಂದ ಮಹಿಳೆಯರಿಗೆ ಮಿನಿ ಮ್ಯಾರಥ್ಯಾನ್

ಮಂಗಳೂರು: ಜೆಸಿಐ ಮಂಗಳಗಂಗೋತ್ರಿ ಕೊಣಾಜೆ, ವಲಯ 15 ವತಿಯಿಂದ ಇತ್ತೀಚೆಗೆ ಬೆಲ್ಮಸೋತ್ಸವ, ಬೆಲ್ಮ ಇವರ ಸಹಯೋಗದಲ್ಲಿ ಮಹಿಳೆಯರಿಗೆ ಮಿನಿ ಮ್ಯಾರಥ್ಯಾನ್ ಏರ್ಪಡಿಸಲಾಗಿತ್ತು. ಮ್ಯಾರಥ್ಯಾನ್ ಓಟವನ್ನು ಕೊಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಚಂಚಲಾಕ್ಷ್ಮಿ ಉದ್ಘಾಟನೆ ಮಾಡಿ ಶುಭಾಶಯ ಕೋರಿದರು.

ಕರ್ನಾಟಕ ರಾಜ್ಯ ಅಲೆಮಾರಿ ನಿಗಮದ ಮಾಜಿ ಅಧ್ಯಕ್ಷ ಕೆ. ರವೀಂದ್ರ ಶೆಟ್ಟಿ ಉಳಿದೋಟ್ಟು ಕ್ರಿeಡಾಕೂಟ ಭಾಗವಸಿ ಜೆಸಿಐ ಕಾರ್ಯಾಚಟುವಟಿಕೆಗಳನ್ನು ಶ್ಲಾಘಿಸಿದರು. ಬೆಲ್ಮ ಉತ್ಸವದ ಆಯೋಜಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಜೆಸಿಐ ಮಂಗಳಗಂಗೋತ್ರಿ ಕೊಣಾಜೆ ಅಧ್ಯಕ್ಷ ಜೆಸಿ ಡಾ. ನರಸಿಂಹಯ್ಯ ಎನ್, ಕಾರ್ಯದರ್ಶಿ ಜೆಸಿ ಆರೀಫ್ ಕಲ್ಕಟ, ಜೆಸಿಐ ಸ್ಥಾಪಕ ಅಧ್ಯಕ್ಷ ತ್ಯಾಗಮ ಹರೇಕಳ, ಜೆಸಿ ಮೋಹನ್ ಶೀರ್ಲಾಲ್ ಭಾಗವಹಿಸಿ ಕಾರ್ಯಕ್ರಮ ನಿರ್ವಹಿಸಿದರು. ಜೆಸಿಐ ಎಲ್ಲಾ ಸದಸ್ಯರು ಭಾಗವಸಿದ್ದರು. ವಿಜೇತರಿಗೆ ನಗದು ಬಹುಮಾನ ವಿತರಿಸಲಾಯಿತು.

Related Posts

Leave a Reply

Your email address will not be published.