ಮುಲ್ಕಿ: ಸ್ಕೂಟರ್ ಗೆ ಟ್ಯಾಂಕರ್ ಢಿಕ್ಕಿ: ಇಬ್ಬರು ಮೃತ್ಯು

ಸ್ಕೂಟರ್ ಗೆ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ದಂಪತಿಗಳು ಸ್ಧಳದಲ್ಲಿಯೇ ಸಾವನ್ನಪ್ಪಿದ ಘಟನೆ ರಾಷ್ಟ್ರೀಯ ಹೆದ್ದಾರಿ 66 ರ ಮೂಲ್ಕಿ ಸಮೀಪದ ಬಪ್ಪನಾಡು ಸೇತುವೆ ಬಳಿ ನಡೆದಿದೆ.

ಮೃತ ದಂಪತಿಗಳನ್ನು ತೀರ್ಥಹಳ್ಳಿ ಕೋಳಿ ಕಾಲು ಗುಡ್ಡೆ ನಿವಾಸಿಗಳಾದ ಅಕ್ಬರ್ ಭಾಷಾ (61) ವರ್ಷ ಹಾಗೂ ಖತಿಜಾ ಬಿ (46 ವರ್ಷ ) ಎಂದು ಗುರುತಿಸಲಾಗಿದೆ.

ಮಂಗಳೂರಿನ ಪಾಸ್‌ಪೋರ್ಟ್  ಕಛೇರಿಗೆ ಪಾಸ್‌ಪೋರ್ಟ್ ಮಾಡಿಸಲೆಂದು ಮೃತ ದಂಪತಿಗಳು ಮುಂಜಾನೆ ತಮ್ಮ ಸ್ಕೂಟರಿನಲ್ಲಿ ತೀರ್ಥಹಳ್ಳಿಯಿಂದ ಹೊರಟಿದ್ದು ಈ ಸಂಧರ್ಭ ಮೂಲ್ಕಿ ಬಳಿಯ ಬಪ್ಪನಾಡು ಸೇತುವೆ ಬಳಿ ಟ್ಯಾಂಕರ್ ಡಿಕ್ಕಿ ಹೊಡೆದಿದೆ.ಡಿಕ್ಕಿ ಹೊಡೆದ ರಭಸಕ್ಕೆ ಸ್ಕೂಟರಿನಲ್ಲಿದ್ದ ದಂಪತಿ ಹೊರಗೆ ಹಾರಿದ್ದ ಪರಿಣಾಮ ಅವರ ಮೇಲೆ ಲಾರಿಯ ಚಕ್ರ ಚಲಿಸಿ ಸ್ಧಳದಲ್ಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಅಪಘಾತಕ್ಕೆ ಅಲ್ಲಿನ ಅವ್ಯವಸ್ದೇಯೆ ಕಾರಣ ಎಂದು ಸ್ಧಳೀಯರು ಅಕ್ರೋಶ ವ್ಯಕ್ತಪಡಿಸಿದ್ದಾರೆ‌.ಸ್ಧಳಕ್ಕೆ ಮಂಗಳೂರು ಉತ್ತರ ಟ್ರಾಫಿಕ್ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

Related Posts

Leave a Reply

Your email address will not be published.