ಬ್ಲೈಂಡ್ ವಿoಕ್ ಸಂಸ್ಥೆಯಿoದ ಇಂಜಿನಿಯರ್ ಜೀವನ್ ಕೆ ಶೆಟ್ಟಿ ಮುಲ್ಕಿಗೆ ಇಂಡಿಯಾ ಎಕ್ಸೆಲೆನ್ಸ್ ಅವಾರ್ಡ್ 2024

ಬ್ಲೈಂಡ್ ವಿoಕ್ ಸಂಸ್ಥೆ ಕೊಡಮಾಡುವ ಇಂಡಿಯಾ ಎಕ್ಸೆಲೆನ್ಸ್ ಅವಾರ್ಡ2024 ಅನ್ನು ಶಾರದಾ ಅಸೋಸಿಯೇಟ್ಸ್ ಮುಲ್ಕಿ ಮತ್ತು ಅದರ ಮ್ಯಾನೇಜಿಂಗ್ ಡೈರೆಕ್ಟರ್ ಇoಜಿನಿಯರ್ ಮುಲ್ಕಿ ಜೀವನ್ ಕೆ ಶೆಟ್ಟಿ ಇವರಿಗೆ Best Integrated Design & Build firm for Extravagant & Iconic Construction in Karnataka ಪ್ರಶಸ್ತಿ ಯನ್ನು ದಿನಾಂಕ 17.11.2024ರಂದು ತಾಜ್ ಬೆಂಗಳೂರು ಪಂಚತಾರ ಹೋಟೆಲಿನಲ್ಲಿ ಇಂಟರ್ನ್ಯಾಶನಲ್ ಇವೆoಟ್ ನಲ್ಲಿ ಖ್ಯಾತ ಬಾಲಿವುಡ್ ಚಲನಚಿತ್ರ ತಾರೆ ಅಮೃತ ರಾವ್ ಅವರು ಪ್ರದಾನಿಸಿದರು.
ಜೀವನ್ ಕೆ ಶೆಟ್ಟಿ ಅವರು ನಿಟ್ಟೆ ಮಹಾಲಿಂಗ ಅಡ್ಯಂತಾಯ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಯಲ್ಲಿ ಎಂಜಿನಿಯರಿಂಗ್ ಮತ್ತು ಮಾಸ್ಟರ್ ಡಿಗ್ರಿ ಪಡೆದು, 1996 ರಲ್ಲಿ ಸ್ಥಾಪನೆ ಗೊಂಡ ಶಾರದಾ ಅಸೋಸಿಯೇಟ್ಸ್ ಸಂಸ್ಥೆಯ ಮುಖ್ಯಸ್ಥರಾಗಿ ಅನೇಕ ಆಡಿಟೋರಿಯಂ, ಬಹುಮಹಡಿ ಕಟ್ಟಡ, ವಿಲ್ಲಾ, ದೇವಸ್ಥಾನ, ಕಚೇರಿಗಳ ವಿನ್ಯಾಸ ಹಾಗೂ ಕಟ್ಟಡ ನಿರ್ಮಾಣ ಮಾಡಿದ ಅನುಭವ ಮತ್ತು ಸಾಧನೆಗೆಈ ಪ್ರಶಸ್ತಿ ದೊರಕಿದೆ…

Related Posts

Leave a Reply

Your email address will not be published.