ಕಲ್ಲಬೆಟ್ಟು : ಸ್ವಚ್ಛತಾ ಅರಿವು ಕಾರ್ಯಕ್ರಮ

ಮೂಡುಬಿದಿರೆ: ಶ್ರೀ ಮಹಾವೀರ ಕಾಲೇಜು, ಮೂಡುಬಿದಿರೆಯ ಯುವರೆಡ್ ಕ್ರಾಸ್ ಘಟಕದ 25ಸ್ವಯಂ ಸೇವಕರು ದ.ಕ.ಜಿ.ಪ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ, ಕಲ್ಲಬೆಟ್ಟುಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಸ್ವಚ್ಛತಾ ಅರಿವು ಮೂಡಿಸಿದರು.

ಸ್ವಯಂ ಸೇವಕಿ ತನುಜಾ ಸ್ವಚ್ಛತೆಯ ಮಹತ್ವದ ಬಗ್ಗೆ ಮಾತನಾಡಿದರು. ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತ ಸ್ವಯಂ ಸೇವಕರು ಮಕ್ಕಳಿಗೆ ಮನೋರಂಜನೆಯ ಆಟವನ್ನು ಆಡಿಸಿದರು.

ಶಾಲೆಯ ಮುಖ್ಯೋಪಾಧ್ಯಾಯಿನಿ ಮಾರ್ಗರೇಟ್ ಮಾತನಾಡಿ, ‘ಸ್ವಚ್ಛತೆಯ ಅರಿವು ಈಗಿನ ಕಾಲದಲ್ಲಿ ಅತೀ ಅಗತ್ಯ. ಇಂದಿನ ಮಕ್ಕಳು ಸ್ವಚ್ಛತೆ ಕಾಪಾಡುವ ಧ್ಯೇಯ ತೊಟ್ಟರೆ ಸುಂದರದೇಶ ನಿರ್ಮಾಣ ಸಾಧ್ಯ. ಹೀಗಾಗಿ ಈ ಕಾರ್ಯಕ್ರಮ ಉಪಯುಕ್ತವಾದುದಾಗಿದೆ. ಕಾಲೇಜು ವಿದ್ಯಾರ್ಥಿಗಳು ಶಾಲೆಯ ಮಕ್ಕಳೊಂದಿಗೆ ಕಳೆದ ಸಮಯ ಸಂತಸ ನೀಡಿತು’ಎಂದರು.

ಯುವ ರೆಡ್‌ಕ್ರಾಸ್ ಕಾರ್ಯಕ್ರಮ ಅಧಿಕಾರಿ ಶ್ರೀಗೌರಿ.ಕೆ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಸಿಹಿತಿಂಡಿ ವಿತರಿಸಿದರು.

ಶಾಲೆಯ ಎಲ್ಲಾ ಶಿಕ್ಷಕ ವೃಂದ ಹಾಜರಿದ್ದರು. ಯುವರೆಡ್ ಕ್ರಾಸ್ ವಿದ್ಯಾರ್ಥಿ ನಾಯಕಿ ಮಂದಾರ ಕಾರ್ಯಕ್ರಮ ನಿರೂಪಿಸಿದರು.

Related Posts

Leave a Reply

Your email address will not be published.