ಕಡಬ : ಕೊಯಿಲ ಫಾರ್ಮ್ಗೆ ಬೆಂಕಿ: ಅಪಾರ ನಷ್ಟ

ಕಡಬ ತಾಲೂಕಿನ ಕೊಹಿಲದಲ್ಲಿರುವ ಪಶುಸಂಗೋಪನಾ ಕ್ಷೇತ್ರ, ಕೊಹಿಲ ಫಾರ್ಮ್ನ ಹುಲ್ಲುಗಾವಲಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಒಣ ಮುಳಿಹುಲ್ಲು ಬೆಂಕಿಗೆ ಆಹುತಿಯಾದ ಘಟನೆ ಬುಧವಾರ ನಡೆದಿದೆ.ಹುಲ್ಲುಗಾವಲಿನ ಸುಮಾರು ಹದಿನೈದು ಎಕರೆ ಪ್ರದೇಶಕ್ಕೆ ಬೆಂಕಿ ಆವರಿಸಿ ಸುಟ್ಟು ಕರಕಲಾಗಿದೆ. ಇದರಿಂದಾಗಿ ಅಪಾರ ನಷ್ಟ ಉಂಟಾಗಿದೆ. ಫಾರ್ಮ್ನ ಆನೆಗುಂಡಿ ಭಾಗದಲ್ಲಿ ಕಾಣಿಸಿಕೊಂಡ ಬೆಂಕಿ ತಹಬಂದಿಗೆ ಬಾರದೆ ಫಾರ್ಮ್ನ ದ್ವಾರದ ತನಕ ಧಾವಿಸಿ ಅಪಾರ ಪ್ರಮಾಣದ ಒಣ ಹುಲ್ಲನ್ನು ಆಹುತಿ ಪಡೆದುಕೊಂಡಿದೆ.ಕೊಯಿಲ ಪಶು ಸಂಗೋಪನಾ ಕ್ಷೇತ್ರದ ಉಪ ನಿರ್ದೆಶಕ ಡಾ|ವೆಂಕಟೇಶ್, ಸಹಾಯಕ ನಿರ್ದೆಶಕ ಡಾ|ಧರ್ಮಪಾಲ ಗೌಡ ಅವರ ನೇತೃತ್ವದಲ್ಲಿ ಸುಮಾರು 25 ಕ್ಕೂ ಸಿಬ್ಬಂದಿಗಳು ಸೇರಿಕೊಂಡು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗದ್ದಾರೆ. ಯಾರೋ ಕಿಡಿಗೇಡಿಗಳು ಬೆಂಕಿಯ ಕಿಡಿ ಹೊತ್ತಿಸಿದ್ದರೆ ಎಂದು ಫಾರ್ಮನ ಅಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದಾರೆ.