HomeFresh Newsಕಡಬ: ಕಾಡು ಪ್ರಾಣಿಗಳ ಬೇಟೆ- ಮೂವರ ಬಂಧನ

ಕಡಬ: ಕಾಡು ಪ್ರಾಣಿಗಳ ಬೇಟೆ- ಮೂವರ ಬಂಧನ

ಬಲ್ಯ ರಕ್ಷಿತಾರಣ್ಯದಲ್ಲಿ ಕಾಡು ಪ್ರಾಣಿಗಳನ್ನು ಬೇಟೆಯಾಡಿದ ಮೂವರು ಆರೋಪಿಗಳನ್ನು ಕಡಬ ಪೋಲೀಸರು ಕುಂತೂರು ಬಳಿ ಬಂಧಿಸಿದ್ದಾರೆ.

ಬಂಧಿತರನ್ನು ನೆಲ್ಯಾಡಿ ಮೂಲದ ಬಿನು, ದಿನೇಶ್ ಹಾಗೂ ನವೀನ್ ಎಂದು ಗುರುತಿಸಲಾಗಿದೆ. ಕಡಬ ಎಸ್‍ಐ ಆಂಜನೇಯ ರೆಡ್ಡಿ ಹಾಗೂ ಸಿಬ್ಬಂದಿಗಳು ಕುಂತೂರು ಬಳಿ ಬಂದಾಗ ಇನ್ನೋವ ಕಾರು ಅನುಮಾನಾಸ್ಪದವಾಗಿ ಚಲಾಯಿಸುತ್ತಿರುವುದು ಕಂಡು ವಾಹನ ನಿಲ್ಲಿಸಿ ತಪಾಸನೆ ಮಾಡಿದಾಗ ಕಾರಿನಲ್ಲಿ ಬೇಟೆಯಾಡಿದ ಪ್ರಾಣಿಗಳು ಕಂಡು ಬಂದಿದೆ.

ಒಂದು ಮುಳ್ಳು ಹಂದಿ, ಎರಡು ಬರಿಂಕ, ಒಂದು ಬೆರು ಎನ್ನುವ ಪ್ರಾಣಿಗಳು ಪತ್ತೆಯಾಗಿದ್ದು ಜತೆಯಲ್ಲಿ ಒಂದು ಕೋವಿ ಸಿಕ್ಕಿದೆ.
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಸಂಬಂಧಪಟ್ಟ ಇಲಾಖೆಗೆ ಪ್ರಕರಣ ದಾಖಲಿಸಲು ಆದೇಶಿಸಿದೆ ಎಂದು ತಿಳಿದು ಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments