ಅಧ್ಯಾಪಕ ಭೂಷಣ ಪ್ರಶಸ್ತಿ ಪ್ರದಾನ ಸಮಾರಂಭ

ಉಜಿರೆ, ದಿ.19 : ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ಮಂಗಳೂರು ವಿಶ್ವವಿದ್ಯಾನಿಲಯ ವಿಭಾಗ ಹಾಗೂ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆ ಇದರ ಸಹಯೋಗದೊಂದಿಗೆ ಉತ್ತಮ ಶಿಕ್ಷಕರನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ‘ಪ್ರೇರಣಾ ದಿನ’ ಎಂಬ ಅಧ್ಯಾಪಕ ಭೂಷಣ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಶ್ರೀ ಸಿದ್ಧವನ ಗುರುಕುಲದಲ್ಲಿ ಆಯೋಜಿಸಲಾಗಿತ್ತು.

ಸಮಾರಂಭದಲ್ಲಿ, ಶಿಕ್ಷಣ ಕ್ಷೇತ್ರದಲ್ಲಿ ಜೀವಮಾನ ಸಾಧನೆಗಾಗಿ ಉಜಿರೆ ಶ್ರೀಧಮ ಕಾಲೇಜಿನ ವಿಶ್ರಾಂತ ಕಾರ್ಯದರ್ಶಿಗಳು ಹಾಗೂ ಸ್ಥಾಪಕ ಪ್ರಾಂಶುಪಾಲರಾದ ಪ್ರೊ.ಎಸ್ ಪ್ರಭಾಕರ್, ಅತ್ಯುತ್ತಮ ಆಡಳಿತಗಾರ ವಿಭಾಗದಲ್ಲಿ ಮಾಜಿ ಪ್ರಾಂಶುಪಾಲರು ಹಾಗೂ ಕಾಲೇಜು ಶಿಕ್ಷಣ ಇಲಾಖೆಯ ವಿಶ್ರಾಂತ ಹೆಚ್ಚುವರಿ ನಿರ್ದೇಶಕರಾದ ಪ್ರೊ.ಎಸ್ ರಾಜಶೇಖರ್ ಹೆಬ್ಬಾರ್, ಅತ್ಯುತ್ತಮ ಸಂಶೋಧಕ ವಿಭಾಗದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ವಸ್ತು ವಿಜ್ಞಾನ ವಿಭಾಗದ ಅಧ್ಯಕ್ಷರು ಹಾಗೂ ಪ್ರಾಧ್ಯಾಪಕರಾದ ಪ್ರೊ.ಮಂಜುನಾಥ ಪಟ್ಟಾಭಿ, ಅತ್ಯುತ್ತಮ ಶಿಕ್ಷಕ ವಿಭಾಗದಲ್ಲಿ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ ಎಮ್ ಕಾರ್ಯಪ್ಪ ಕಾಲೇಜಿನ ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾದ ಪ್ರೊ.ನಾಗರಾಜ ಕೆ ಪಿ, ಅತ್ಯುತ್ತಮ ಗ್ರಂಥ ಪಾಲಕ ವಿಭಾಗದಲ್ಲಿ ಮಂಗಳೂರಿನ ಸಂತ ಆಗ್ನೇಸ್ ಸ್ವಾಯತ್ತ ಕಾಲೇಜಿನ ಗ್ರಂಥಪಾಲಕಿ ಡಾ. ವಿಶಾಲ ಬಿಕೆ, ಅತ್ಯುತ್ತಮ ದೈಹಿಕ ನಿರ್ದೇಶಕ ವಿಭಾಗದಲ್ಲಿ ಉಡುಪಿಯ ಡಾ ಜಿ ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಪಿಜಿ ಅಧ್ಯಯನ ಕೇಂದ್ರ ಅಜ್ಜರಕಾಡಿನ ದೈಹಿಕ ಶಿಕ್ಷಕರಾದ ಡಾ.ರಾಮಚಂದ್ರ ಪಾಟ್ಕರ್ ಇವರೆಲ್ಲರೂ ಅಧ್ಯಾಪಕ ಭೂಷಣ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡರು. ಇದರೊಂದಿಗೆ ಡಾಕ್ಟರೇಟ್ ಅನ್ನು ಪೂರ್ಣಗೊಳಿಸಿದ ಮಂಗಳೂರು ವಿಶ್ವವಿದ್ಯಾನಿಲಯದ ಸಂಜೆ ಕಾಲೇಜಿನ ಉಪನ್ಯಾಸಕರಾದ ಡಾ. ಸ್ಟೀವನ್ ಡಿಸೋಜಾ ಇವರನ್ನು ಅಭಿನಂದಿಸಲಾಯಿತು.

ಕೆ ಆರ್ ಎಂ ಎಸ್ ಎಸ್ ಬೆಂಗಳೂರು ಇದರ ರಾಜ್ಯಾಧ್ಯಕ್ಷರಾದ ಡಾ. ಗುರುನಾಥ್ ಬಡಿಗೇರ ಕಾರ್ಯಕ್ರಮದ ಆಶಯವನ್ನು ಪ್ರಸ್ತಾಪಿಸಿ ಸಂಘದ ಉಗಮ ಮತ್ತು ಚಟುವಟಿಕೆಗಳ ಕುರಿತು ಮಾತನಾಡಿದರು. ರಾಜ್ಯ ಜಂಟಿ ಪ್ರಧಾನ ಕಾರ್ಯದರ್ಶಿಗಳಾದ ಡಾ. ಮಾಧವ ಎಂ ಕೆ ಪ್ರಶಸ್ತಿ ಭಾಜನರನ್ನು ಪರಿಚಯಿಸಿ ಅಭಿನಂದಿಸಿದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಉಜಿರೆಯ ಶ್ರೀಧಮ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ. ಎಸ್ ಸತೀಶ್ಚಂದ್ರ ನಡೆಸಿಕೊಟ್ಟರು. ಶ್ರೀಧಮ ಸ್ವಾಯತ್ತ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಬಿ.ಎ.ಕುಮಾರ್ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾದ ಡಾ. ಕೆ ಸಿ ಮಹದೇಶ್, ಮಾಜಿ ಸಿಂಡಿಕೇಟ್ ಸದಸ್ಯರಾದ ರಮೇಶ್, ಕೆ ಆರ್ ಎಂ ಎಸ್ ಎಸ್ ಅಧ್ಯಕ್ಷರಾದ ಡಾ.ಸುಧಾ ಎನ್ ವೈದ್ಯ, ಕಾರ್ಯಕ್ರಮ ಸಂಯೋಜಕರಾದ ಡಾ.ರತಿ ಹಾಗೂ ಸದಸ್ಯರು ಮತ್ತೀತರರು ಉಪಸ್ಥಿತರಿದ್ದರು.
ಉಪನ್ಯಾಸಕಿ ಮಮತಾ ಎಮ್ ಶೆಟ್ಟಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಡಾ.ಸುಧಾ ಎನ್ ವೈದ್ಯ ಸರ್ವರನ್ನು ಸ್ವಾಗತಿಸಿ, ಕಾರ್ಯದರ್ಶಿ ವೆಂಕಟೇಶ್ ನಾಯಕ್ ವಂದಿಸಿದರು.

Related Posts

Leave a Reply

Your email address will not be published.