HomeFresh Newsಕಡಬ: ಕುಂತೂರಿನಲ್ಲಿ ಅಡಿಕೆ ಮರ ಬಿದ್ದು ಮೃತಪಟ್ಟ ವ್ಯಕ್ತಿ ಮನೆಗೆ ಸುಳ್ಯ ಶಾಸಕಿ ಭೇಟಿ

ಕಡಬ: ಕುಂತೂರಿನಲ್ಲಿ ಅಡಿಕೆ ಮರ ಬಿದ್ದು ಮೃತಪಟ್ಟ ವ್ಯಕ್ತಿ ಮನೆಗೆ ಸುಳ್ಯ ಶಾಸಕಿ ಭೇಟಿ

ಕಡಬ / ಕುಂತೂರು : ಕಡಬ ತಾಲೂಕಿನ ಕುಂತೂರು ಗ್ರಾಮದ ಕೇವಳ ನಿವಾಸಿ ಕೃಷಿಕ ಯಾದವ ಗೌಡ ಅವರು ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಅಡಿಕೆ ಮರ ಬಿದ್ದು ದಾರುಣವಾಗಿ ಮೃತಪಟ್ಟಿದ್ದರು. ದುರಂತದ ಸುದ್ದಿ ತಿಳಿದ ಸುಳ್ಯ ಕ್ಷೇತ್ರದ ಶಾಸಕರು ಶಾಸಕರ ತಂಡದೊಂದಿಗೆ ಮೃತರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಧೈರ್ಯ ತುಂಬಿ ಸಾಂತ್ವನ ಹೇಳಿದರು.

ಅಲ್ಲದೆ, ಪ್ರಾಕೃತಿಕ ವಿಕೋಪದಡಿ ಸರ್ಕಾರದಿಂದ ಮಂಜೂರಾದ ₹5,00,000 (ಐದು ಲಕ್ಷ ರೂಪಾಯಿ) ಜೀವಹಾನಿ ಪರಿಹಾರದ ಮಂಜೂರಾತಿ ಆದೇಶ ಪತ್ರವನ್ನು ಮೃತರ ಪತ್ನಿ ಪ್ರೇಮಾ ಅವರಿಗೆ ಹಸ್ತಾಂತರಿಸಿದರು.
ಘಟನೆ ನಡೆದ ಬಳಿಕ ಕಡಬ ತಾಲೂಕು ತಹಶೀಲ್ದಾರ್ ಹಾಗೂ ಕಂದಾಯ ಇಲಾಖಾ ಅಧಿಕಾರಿಗಳು ತಕ್ಷಣವೇ ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಿದ್ದರು. ಕಡಬ ವಿಶೇಷ ತಹಶೀಲ್ದಾರ್ ಅವರ ಆದೇಶದಂತೆ, ರಾಜ್ಯ ಸರ್ಕಾರದ ಖಜಾನೆ-2 (Khajane II) ಇ-ಪಾವತಿ ವ್ಯವಸ್ಥೆಯ ಮೂಲಕ ಜುಲೈ/ಆಗಸ್ಟ್ ಅವಧಿಯಲ್ಲಿ ಪರಿಹಾರ ಮೊತ್ತವನ್ನು (₹5 ಲಕ್ಷ) ಮೃತರ ಪತ್ನಿ ಪ್ರೇಮಾ ಅವರ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕಿಯವರು ಪರಿಹಾರ ಧನವು ಕುಟುಂಬಕ್ಕೆ ಸಣ್ಣ ನೆರವಾಗಲಿದ್ದು, ಅವರ ಕುಟುಂಬದೊಂದಿಗೆ ನಾವಿದ್ದೇವೆ” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸುಳ್ಯ ಮಂಡಲ ಪ್ರಧಾನಕಾರ್ಯದರ್ಶಿ ಪ್ರದೀಪ್ ರೈ,ಜಿಲ್ಲಾ ಉಪಾಧ್ಯಕ್ಷ ರಾಕೇಶ ರೈ,SC ಮೊರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಣ್ಣಿ ಎಲ್ತಿಮಾರ್,ಮಹಾ ಶಕ್ತಿ ಕೇಂದ್ರ ಪ್ರಮುಖ್ ಸುರೇಶ ದೇಂತಾರು, ಕೊಯಿಲಾ ಮಹಾ ಶಕ್ತಿ ಕೇಂದ್ರ ಅಧ್ಯಕ್ಷ ರವಿಪ್ರಸಾದ್ ಶೆಟ್ಟಿ,ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಆಶಾ ತಿಮ್ಮಪ್ಪ, ಕುಂತೂರು ಶಕ್ತಿ ಕೇಂದ್ರ ಪ್ರಮುಖ್ ಸುಭಿಕ್ಷ,ತಾ.ಪಂ ಮಾಜಿ ಉಪಾಧ್ಯಕ್ಷೆ ಲಲಿತಾ ಈಶ್ವರ್ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

Sudha Interior new 1
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments