ಫೆ.3ರಿಂದ ಕದಳೀ ಶ್ರೀ ಯೋಗೇಶ್ವರ ಮಠ (ಜೋಗಿ ಮಠ)ದ ಬ್ರಹ್ಮಕಲಶೋತ್ಸವ : ಆಮಂತ್ರಣ ಪತ್ರಿಕೆ ಬಿಡುಗಡೆ

ಮಂಗಳೂರು: ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಸುವರ್ಣ ಕದಳೀ ಶ್ರೀ ಯೋಗೇಶ್ವರ ಮಠ (ಜೋಗಿ ಮಠ)ದ ಶ್ರೀ ಕಾಲಭೈರವ ದೇವಸ್ಥಾನದ ಪುನರ್ ಪ್ರತಿಷ್ಠೆ ಬ್ರಹ್ಮಕಲಶೋತ್ಸವ ಫೆ. 3ರಿಂದ 6ರ ತನಕ ನಡೆಯಲಿದ್ದು, ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷರೂ ಆಗಿರುವ ಮಠದ ಪೀಠಾಧಿಪತಿ 1008 ಶ್ರೀ ಯೋಗಿ ನಿರ್ಮಲ್‌ನಾಥ್‌ಜೀ ಮಹಾರಾಜ್ ಮಠದಲ್ಲಿ ಇಂದು ಬಿಡುಗಡೆಗೊಳಿಸಿದರು.

ಳಿಕ ಆಶೀರ್ವಚನ ನೀಡಿದ ಸ್ವಾಮೀಜಿ, ಕಾಲಭೈರವ ದೇವಸ್ಥಾನದ ಬ್ರಹ್ಮಕಲಶೋತ್ಸವ ಸುವರ್ಣ ಅಕ್ಷರದಲ್ಲಿ ಬರೆದಿಡುವಂತಹ ಕಾರ್ಯಕ್ರಮ. ಈ ಧಾರ್ಮಿಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಸರ್ವರ ಸಹಕಾರ ಕೋರಿದರು.ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಬ್ರಹ್ಮಕಲಶೋತ್ಸವದ ವಿವರ ನೀಡಿದ ಸಮಿತಿ ಅಧ್ಯಕ್ಷ ಎಚ್. ಕೆ. ಪುರುಷೋತ್ತಮ ಜೋಗಿ, ದೇಶದ ನಾಥ ಪಂಥದ ಪ್ರಮುಖ ಕೇಂದ್ರಗಳಲ್ಲಿ ಒಂದಾದ ಮಂಗಳೂರಿನ ಕದಳಿ ಶ್ರೀ ಯೋಗೇಶ್ವರ ಮಠದ ಶ್ರೀ ಕಾಲಭೈರವ ದೇವಸ್ಥಾನ 10 ಕೋಟಿ ರೂ. ವೆಚ್ಚದಲ್ಲಿ ಜೀರ್ಣೋದ್ಧಾರಗೊಳ್ಳುತ್ತಿದೆ ಎಂದರು.

ಕದಳಿ ಶ್ರೀ ಯೋಗೇಶ್ವರ ಮಠದಲ್ಲಿ ಕಾಶೀ ಕಾಲಭೈರವೇಶ್ವರ ದೇವಸ್ಥಾನ, ಪರಶುರಾಮ ಅಗ್ನಿಕುಂಡ, ಪ್ರಧಾನ ದೈವವಾದ ಮರುಳು ಧೂಮಾವತಿ,ಪಾಂಡವರ ಗುಹೆ, ಪಾತಾಳ ಭೈರವ, ನಾಗ ಸನ್ನಿಧಿ, ಬಾರಾಹ್ ಪಂಥ್ ಕಟ್ಟೆ, ಹಾಗು ಹಲವು ಸಾಧು ಸಂತರ ಕಟ್ಟೆಗಳಿವೆ. ಪ್ರಸ್ತುತ ಪೀಠಾಧಿಪತಿಗಳಾದ ಶ್ರೀ ಯೋಗಿ ನಿರ್ಮಲ್ ನಾಥ್ ಜೀ ಅವರ ನೇತ್ರತ್ವದಲ್ಲಿ ಅಭಿವೃದ್ಧಿ ಕಾರ್ಯಗಳು ಸಾಗುತ್ತಿವೆ ಎಂದವರು ವಿವರಿಸಿದರು.
ಮಠಕ್ಕೂ ಕದ್ರಿ ಶ್ರೀ ಮಂಜುನಾಥ ದೇವಸ್ಥಾನಕ್ಕೂ ಅವಿನಾಭಾವ ಸಂಬAಧವಿದ್ದು, ಕದ್ರಿ ದೇವಸ್ಥಾನದ ಎಲ್ಲ ಕಾರ್ಯಕ್ರಮಗಳಲ್ಲೂ ಮಠದ ಪೀಠಾಧಿಪತಿಗಳು ನೇತೃತ್ವ ವಹಿಸುವುದು ಹಿಂದಿನಿAದಲೂ ಪಡೆದುಕೊಂಡು ಬಂದಿದೆ. ನಾಥ ಸಂಪ್ರದಾಯವು ಉತ್ತರ ಹಾಗೂ ದಕ್ಷಿಣ ಭಾರತದ ಅವರನ್ನು ಒಂದು ಗೂಡಿಸುವ ಶಕ್ತಿಯಾಗಿದೆ. ಇದು ನಾಥ ಪರಂಪರೆಯು ಕಲಾವಳಿ ಭಾಗದಲ್ಲಿ ಭದ್ರವಾಗಿ ನೆಲೆಯೂರುವಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದರು.

ಸಮಿತಿ ಪ್ರಧಾನ ಸಲಹೆಗಾರರಾದ ಮಾಜಿ ಮೇಯರ್ ಹರಿನಾಥ್, ಡಾ. ಪಿ. ಕೇಶವನಾಥ್, ಕಿರಣ್ ಕುಮಾರ್ ಜೋಗಿ, ಪ್ರಧಾನ ಕಾರ್ಯದರ್ಶಿ ಸತೀಶ್ ಜೋಗಿ ಮಾಲೆಮಾರ್, ಮೋಹನ ಕೊಪ್ಪಳ, ವಿನಯಾನಂದ ಕಾನಡ್ಕ, ಸುಧಾಕರ ರಾವ್ ಪೇಜಾವರ, ಗಂಗಾಧರ್, ಡಾ.ಚಂದ್ರಶೇಖರ್, ಡಾ. ರಾಜೇಶ್ ಕದ್ರಿ ಮೊದಲಾದವರಿದ್ದರು.

Related Posts

Leave a Reply

Your email address will not be published.