ಕಾಪುವಿನಲ್ಲಿ ಕೆರೆಯಂತಾದ ಹೆದ್ದಾರಿ

ಕಾಪು ವಿದ್ಯಾನಿಕೇತನ ವಿದ್ಯಾಸಂಸ್ಥೆಯ ಬಳಿಯ ಹೆದ್ದಾರಿ ಕೆರೆಯಾಗಿ ರೂಪುಗೊಂಡಿದ್ದು, ಸಾರ್ವಜನಿಕರು ಸಮಸ್ಯೆ ಅನುಭವಿಸುವಂತಾಗಿದೆ.

ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯ ಫಲವಾಗಿ ಇಲ್ಲಿ ನಿರಂತರ ಸಮಸ್ಯೆ ಅನುಭವಿಸುವಂತ್ತಾಗಿದ್ದು, ಸಣ್ಣ ಮಳೆಗೂ ರಸ್ತೆಯ ಈ ಭಾಗ ಜಲಾವೃತವಾಗುತ್ತಿದ್ದು, ಪಕ್ಕದ ಬಸ್ ತಂಗುದಾಣದಲ್ಲಿ ಬಸ್ ಕಾಯಲು ನಿಂತ ಸಾರ್ವಜನಿಕರ ಹಾಗೂ ವಿದ್ಯಾರ್ಥಿಗಳ ಮೇಲೆ ಮಳೆಯ ಕೆಸರು ಮಿಶ್ರಿತ ನೀರು ಎರಚಿ ನಿರಂತರ ಸಮಸ್ಯೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬರುತ್ತಿದ್ದರೂ ಯಾವವೊಬ್ಬ ಜನಪ್ರತಿನಿಧಿಯೂ ಸಹಿತ ಅಧಿಕಾರಿಗಳು ಕಣ್ಣಿದ್ದು ಕುಡುತನ ಅನುಭವಿಸುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

Related Posts

Leave a Reply

Your email address will not be published.