ನರಿಂಗಾನ ಗ್ರಾಮದ ನೆತ್ತಿಲಕೋಡಿ ರಸ್ತೆ ಶಿಲನ್ಯಾಸ

ಉಳ್ಳಾಲ: ವೈದ್ಯಕೀಯ ಕಾಲೇಜು ಜೊತೆಗೆ ಶಿಕ್ಷಣ ಸಂಸ್ಥೆಗಳ ಸ್ಥಾಪನೆಯೊಂದಿಗೆ ಕೇರಳ ಗಡಿಭಾಗದ ನರಿಂಗಾನ ಗ್ರಾಮ ಸಾಕಷ್ಟು ಅಭಿವೃದ್ಧಿಯನ್ನು ಶಾಸಕರ ಮುತುವರ್ಜಿಯೊಂದಿಗೆ ನಡೆಯುತ್ತಿದ್ದು, ಶೀಘ್ರವೇ ತುಳು ಗ್ರಾಮ ಸ್ಥಾಪನೆಯೊಂದಿಗೆ ಇತಿಹಾಸದ ಪುಟಗಳಲ್ಲಿ ಗ್ರಾಮ ಅಚ್ಚಳಿಯದೆ ನೆಲೆ ನಿಲ್ಲಲಿದೆ ಎಂದು ಜಿ.ಪಂ ಮಾಜಿ ಸದಸ್ಯೆ ಮಮತಾ ಡಿ.ಯಸ್ ಗಟ್ಟಿ ಹೇಳಿದ್ದಾರೆ.

ಅವರು ನರಿಂಗಾನ ಗ್ರಾಮದ ನೆತ್ತಿಲಕೋಡಿ ರಸ್ತೆ ಕಾಂಕ್ರೀಟಿಕರಣದ ಶಿಲನ್ಯಾಸ ನೆರವೇರಿಸಿ ಮಾತನಾಡಿದರು.ಶಾಸಕರ ಅನುದಾನದಿಂದ ಗ್ರಾಮದಲ್ಲಿ ಬಹಳಷ್ಟು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದೆ. ಹಲವು ವರ್ಷಗಳ ಬೇಡಿಕೆಯಾಗಿರುವ ನೆತ್ತಿಲಕೋಡಿ ರಸ್ತೆಯ ಕಾಮಗಾರಿಯೂ ಶೀಘ್ರದಲ್ಲೇ ಆರಂಭವಾಗಲಿದೆ ಎಂದರು.ಈ ಸಂದರ್ಭ ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ, ತಾ.ಪಂ ಮಾಜಿ ಅಧ್ಯಕ್ಷ ಚಂದ್ರಹಾಸ್ ಕರ್ಕೇರ, ನರಿಂಗಾನ ಗ್ರಾಮದ ಅಧ್ಯಕ್ಷೆ ಶೈಲಜಾ ಶೆಟ್ಟಿ ಮೋರ್ಲ, ಉಪಾಧ್ಯಕ್ಷ ನವಾಝ್ ಕಲ್ಲರಕೋಡಿ ಮೊದಲಾದವರು ಉಪಸ್ಥಿತರಿದ್ದರು.
