ಕಾರ್ಕಳದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ

ಕಾರ್ಕಳ: ಕಾಂಗ್ರೆಸ್ ಪಕ್ಷ ರಾಷ್ಟ್ರ ಧ್ವಜ, ಸಂವಿಧಾನದ ಪರವಿರುವ ಪಕ್ಷ ಎಂದು ರಾಜ್ಯ ಸಭಾ ಸದಸ್ಯ ಬಿ.ಕೆ ಹರಿಪ್ರಸಾದ್ ಹೇಳಿದರು. ಅವರು ಮಂಜುನಾಥ್ ಪೈ ಸಭಾಭವನದಲ್ಲಿ ನಡೆದ ಕಾರ್ಕಳ ವಿಧಾನಸಭಾ ಕ್ಷೇತ್ರದ ಕಾಂಗ್ರೇಸ್ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.
ರಾಜ್ಯದ ವಿಜಯಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್ ಕಳೆದುಕೊಂಡಾಗ ನಮ್ಮ ಚುನಾಯಿತ ಪ್ರತಿನಿಧಿಗಳು ಯಾಕೆ ಪ್ರಶ್ನಿಸಿಲ್ಲ. ಕೊಡಗು ಭೂ ಕುಸಿತ, ಪ್ರವಾಹ, ಕೋವಿಡ್ ಸಮಯದಲ್ಲಿ ಮೃತಪಟ್ಟವರನ್ನು ಒಮ್ಮೆಯು ಪ್ರಧಾನಿ ನೆನಪಿಸಲಿಲ್ಲ, ಪರಿಹಾರನೀಡಲಿಲ್ಲ, ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಯಾಕೆ ಎಂದು ಪ್ರಧಾನಿ ನರೇಂದ್ರ ಮೋದಿಯನ್ನು ಪ್ರಶ್ನಿಸಿದರು.

ಜಿಲ್ಲಾ ಉಸ್ತುವಾರಿ ರೋಜಿ ಜಾನ್ ಮಾತನಾಡಿ ಮುಖ್ಯಮಂತ್ರಿ ಬೊಮ್ಮಾಯಿಗೆ ಪ್ರತಿಯೊಂದು ಟೆಂಡರ್ ನಲ್ಲಿ 40% ಕಮಿಷನ್ ನೀಡಬೇಕು. ಅದ್ದರಿಂದ ಪೆಸಿಎಂ ಮಾಡಲಾಗಿದೆ ಅವರನ್ನು ಕೆಳಗಿಸಿ, ಪಿಎಸ್‍ಐಸ್ಕ್ಯಾಂ , ಕೆಪಿಟಿಸಿ ಎಲ್ ಸ್ಕ್ಯಾಂ , ಮೈಸೂರಿನ ಸ್ಯಾಂಡಲ್ ಸ್ಕ್ಯಾಂ ಮಾಡಿ ಜನರನ್ನು ಲೂಟಿ ಮಾಡಿದೆ .ಹಿಂದುತ್ವ ಹೇಳಿಕೊಂಡು ಬರುವ ಬಿಜೆಪಿ ಬೆಲೆ ಏರಿಕೆಯನ್ನು ಮಾಡಿ ಜನರನ್ನು ಮೂರ್ಖರನ್ನಾಗಿಸಿದೆ ಎಂದರು.
ಸಭೆಯಲ್ಲಿ ಮಮತಾ ಗಟ್ಟಿ, ವಾಗ್ಮಿ ಸುದೀರ್ ಕುಮಾರ್ ಮರೋಳಿ, ಎಂಎಲ್‍ಸಿ ಮಂಜುನಾಥ್ ಭಂಡಾರಿ, ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಶುಭದರಾವ್, ಪ್ರಭಾಕರ್ ಬಂಗೇರ , ನೀರೆ ಕೃಷ್ಣ ಶೆಟ್ಟಿ , ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ , ಪ್ರಭಾಕರ್ ಬಂಗೇರ , ಕೆಪಿಸಿಸಿ ಸದಸ್ಯ ನೀರೆ ಕೃಷ್ಣ ಶೆಟ್ಟಿ, ಸುರೇಂದ್ರ ಶೆಟ್ಟಿ, ,ಜಿಲ್ಲಾಧ್ಯಕ್ಷ ಅಶೋಕ್ ಕೊಡವೂರ್ , ಮಮತಾಗಟ್ಟಿ , ಜಿಲ್ಲಾ ಪ್ರಚಾರ ಸಮಿತಿ ಹರಿಶ್ ಕಿಣಿ ,ಚಂದ್ರಶೇಖರ ಬಾಯಿರಿ , ಮೊಯಿದಿನಬ್ಬ, ದಿವಾಕರ್, ಸುಪ್ರಿತ್ ಶೆಟ್ಟಿ,ನವಿನ್ ಅಡ್ಯಂತಾಯ , ಹೆಬ್ರಿ ಪ್ರವೀಣ್ ಬಲ್ಲಾಳ್ ಮೊದಲಾದವರು ಪಾಲ್ಗೊಂಡಿದ್ದರು.