ಬಡತನದಲ್ಲೂ ದೀನರ ಕಷ್ಟಕ್ಕೆ ಮಿಡಿಯುವ ಹೃದಯ ರವಿ ಕಟಪಾಡಿ

ತಾನು ಆರ್ಥಿಕವಾಗಿ ಬಲಹೀನನಾಗಿದ್ದರೂ ಬೇರೊಬ್ಬರ ಕಷ್ಟಕ್ಕೆ ವಿಡಿಯುವ ತುಡಿತ ಇರುವ ಮನುಷ್ಯ ಅಪರೂಪ.. ಆದರೆ ಅದಕ್ಕೆ ಅಪವಾದವೋ ಎಂಬಂತೆ ಕೂಲಿ ಕೆಲಸ ನಡೆಸಿ ಜೀವನ ಸಾಗಿಸುವ ಅಪ್ರತಿಮ ಅಪ್ಪಟ ಸಮಾಜ ಸೇವಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರವಿ ಕಟಪಾಡಿ ಎಂಬುದಾಗಿ ಗಮನಾರ್ಹ.

ಉಡುಪಿ ಜಿಲ್ಲೆಯ ಕಟಪಾಡಿ ನಿವಾಸಿ ರವಿ ಕಟಪಾಡಿ ಅದೆಷ್ಟೋ ಬಡ ಕುಟುಂಬಗಳ ಕಷ್ಟಕ್ಕೆ ಸಂಧಿಸುವ ಮೂಲಕ ನಿಜವಾದ ಸಮಾಜ ಸೇವಕ ಎಣಿಸಿದ್ದಾರೆ. ಇದೀಗ ಬಡ ಕುಟುಂಬಗಳ ಮಕ್ಕಳ ಚಿಕಿತ್ಸೆಯ ವೆಚ್ಚಕ್ಕಾಗಿ ವೇಷಧರಿಸಿದ್ದು, ತಮ್ಮ ಸಂಚಾರ ಆರಂಭಿಸಿದ್ದಾರೆ.
ಈ ಬಾರಿ ರಾಕ್ಷಸ ವೇಷಧರಿಸಿದ್ದು ಈ ವೇಷವೇ ಬಾರೀ ದುಬಾರಿಯಾಗಿದ್ದು ಬರೊಬ್ಬರಿ ಎರಡು ಲಕ್ಷಕ್ಕೂ ಅಧಿಕ ರೂಪಾಯಿ ಖರ್ಚು ಮಾಡಲಾಗಿದೆ ಎಂಬುದಾಗಿ ಉಡುಪಿಯ ಸ್ಮರ್ಟ್ ಆರ್ಟ್ಸ್ ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ. ಈ ವೇಷಕ್ಕೆ ಸ್ಮರ್ಟ್ ಆರ್ಟ್ಸ್ ತಂಡದ 15ಕ್ಕೂ ಅಧಿಕ ಕಲಾವಿಧರು ಎರಡು ತಿಂಗಳಿಂದ ಈ ವೇಷದ ತಯಾರಿಯಲ್ಲಿ ತೊಡಗಿದ್ದರು. ಇದರ ಕೆಲವು ಸಲಕರಣೆಗಳು ಅಮೇರಿಕದಿಂದ ತರಿಸಲಾಗಿದ್ದು, ರಬ್ಬರ್ ಸಲಕರಣೆಗಳ ಕೆಲಸಕ್ಕಾಗಿ ಹೈದರಾಬಾದ್ ನಿಂದ ಇಬ್ಬರು ಕಲಾವಿದರನ್ನು ಕರೆಸಲಾಗಿದೆ ಎಂದರು. ಈ ಬಾರಿ ಚರ್ಮಕ್ಕೆ ಯಾವುದೇ ಹಾನಿಯಾಗದ ಸಲಕರಣೆಗಳನ್ನು ಬಳಕೆ ಮಾಡಲಾಗಿದೆ ಎಂದರು.

ನನಗೆ ಬಡತನವಿದೆ, ಆದರೆ ದೇವರು ಶಕ್ತಿ ಕೊಟ್ಟ ದಿನದವರಗೆ ದುಡಿದು ಜೀವನ ಸಾಗಿಸುವ ಧೈರ್ಯವೂ ನನ್ನಲ್ಲಿದೆ. ಈ ಹೊತ್ತಲ್ಲಿ ವೇಷಧರಿಸಿ ಅದರಲ್ಲಿ ಒಟ್ಟು ಸೇರುವ ಹಣ ಯಾವುದೇ ರೀತಿಯಲ್ಲಿ ದುರುಪಯೋಗ ಆಗದಂತೆ ಸಮಾಜದ ಒಳಿತಿಗೆ ವಿನಿಯೋಗ ಆಗಲಿದ್ದು ಇದರ ಹಿಂದೆ ನನ್ನ ಒರ್ವನ ಪರಿಶ್ರಮ ಮಾತ್ರವಲ್ಲ ನನ್ನ ಇಡೀ ತಂಡದ ಪರಿಶ್ರಮ ಇದ್ದು ಅವರ ಬೆವರಹನಿ ಇಲ್ಲವಾಗಿದ್ದರೆ ಇದೆಲ್ಲಾ ನನ್ನಿಂದ ಸಾಧ್ಯವಾಗುತ್ತಿರಲಿಲ್ಲ ಎಂಬುದುದಾಗಿ ಹೆಮ್ಮೆಯಿಂದ ನುಡಿಯುತ್ತಾರೆ ರವಿ ಕಟಪಾಡಿ

Related Posts

Leave a Reply

Your email address will not be published.