ಕಾಪು : ಬಲಿಗಾಗಿ ಕಾಯುತ್ತಿದೆ ಮರದ ಕಾಲು ಸೇತುವೆ

ಬೈಂದೂರಲ್ಲಿ ನಡೆದ ಕಹಿ ಘಟನೆ ಜನರ ಮನದಿಂದ ಇನ್ನೂ ಮಾಸಿಲ್ಲ…ಇದೀಗ ಅಂಥಹುದೇ ಮರದ ಕಾಲು ಸೇತುವೆಯೊಂದು ಎಲ್ಲೂರು ಪಡುಬೈಲಿನಲ್ಲಿ ಬಲಿಗಾಗಿ ಕಾದು ಕುಳಿತಂತ್ತಿದೆ. ಮರದ ಕಾಲು ಸೇತುವೆಯಲ್ಲಿ ಭಯದಲ್ಲೇ ಹೋಗಬೇಕಾದ ಪರಿಸ್ಥಿತಿ ಇದೆ. ಅಧಿಕಾರಿಗಳು ಎಚ್ಚೆತ್ತು ಕೂಡಲೇ ಸೂಕ್ತ ಪರಿಹಾರ ಕಲ್ಪಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಎಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಡುಬೈಲಿನ ಜನರ ಬದುಕು ಒಂದು ರೀತಿಯಲ್ಲಿ ಗೃಹ ಬಂಧನವೇ ಸರಿ. ರಸ್ತೆ ಸಂಪರ್ಕವಿಲ್ಲ ಮಳೆಗಾಲದಲ್ಲಿ ಪಕ್ಕದಲ್ಲೇ ಹರಿಯುತ್ತಿರುವ ತೊರೆಯಿಂದಾಗಿ ಈ ಭಾಗದ ನಿವಾಸಿಗಳು ಶಾಲೆ ಸಹಿತ ಬೇರೆಡೆಗೆ ತೆರಳ ಬೇಕಾದರೆ ನೀರಿನ ತೊರೆಯೊಂದಕ್ಕೆ ಅಲ್ಲಿನ ಜನರೇ ನಿರ್ಮಿಸಿದ ಮರದ ಕಾಲು ಸೇತುವೆಯಲ್ಲಿ ಭಯದಲ್ಲೇ ದಾಟಬೇಕಾದ ಅನಿವಾರ್ಯ ಸ್ಥಿತಿ. ಮನೆಯ ಹಿರಿಯರಂತೂ ಮಳೆಗಾಲದಲ್ಲಿ ಮನೆಬಿಡುವಂತ್ತಿಲ್ಲ, ಆಸ್ಪತ್ರೆಗೆ ಹೋಗ ಬೇಕಾದರೂ ಎತ್ತಿಕೊಂಡೇ ಹೋಗ ಬೇಕಾಗಿದೆ. ಕಳೆದ ಅದೆಷ್ಟೋ ವರ್ಷಗಳಿಂದಲೂ ನಮ್ಮ ಸಮಸ್ಯೆಗೆ ಮುಕ್ತಿ ನೀಡಲು ಯಾವ ಜನ ಪ್ರತಿನಿಧಿಗಳಾಗಲೀ…ಅಧಿಕಾರಿಗಳಾಗಲೀ ಮುಂದಾಗಿಲ್ಲ ಎಂದು ಹೇಳುತ್ತಾರೆ ಸ್ಥಳೀಯರು.
ಈ ಸಂಧರ್ಭ ಸ್ಥಳೀಯರಾದ ಪಾಂಡು ಶೆಟ್ಟಿ, ನಾಗೇಶ್ ಸಾಲ್ಯಾನ್, ವಿಮಲ ಎ. ದೇವಾಡಿಗ, ಅಶೋಕ ಪೂಜಾರಿ, ನಾರಾಯಣ ದೇವಾಡಿಗ, ರಾಮ ಪೂಜಾರಿ, ವಿಶ್ವನಾಥ ದೇವಾಡಿಗ, ಬೇಬಿ ಆರ್. ದೇವಾಡಿಗ, ಪುಷ್ಪ ದೇವಾಡಿಗ, ಶೈಲ ದೇವಾಡಿಗ, ಸಂದೀಪ್ ದೇವಾಡಿಗ, ಮೋಹನ್ ಎಂಬ ದೇವಾಡಿಗ ಮತ್ತಿತರರು ಹಾಜರಿದ್ದರು.
