ಉಚ್ಚಿಲ ಬಡಾ ಪಂಚಾಯತ್‍ನ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಬೆಂಕಿ

ಉಚ್ಚಿಲ ಬಡಾ ಗ್ರಾಮ ಪಂಚಾಯತಿಯ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಬೆಂಕಿ ಅವಘಡ ಸಂಭವಿಸಿ 8 ಲಕ್ಷಕ್ಕೂ ಅಧಿಕ ಮೌಲ್ಯದ ಸೊತ್ತುಗಳು ಬೆಂಕಿಗೆ ಆಹುತಿಯಾಗಿದೆ.

ಪ್ಯಾಡ್ ಬರ್ನರ್ ಮತ್ತು ಪ್ಲಾಸ್ಟಿಕ್ ಮೋಲ್ಡಿಂಡಿಗ್ ಯಂತ್ರಗಳ ಮೌಲ್ಯ ಸುಮಾರು 4 ಲಕ್ಷದ 60 ಸಾವಿರ ಆಗಿದ್ದು, ಅಂತೆಯೇ ಕಟ್ಟಡ ಇನ್ನಿತರ ಪರಿಕರಗಳು ಸೇರಿ 8 ಲಕ್ಷಕ್ಕೂ ಅಧಿಕ ಮೌಲ್ಯದ ಸೊತ್ತು ಬೆಂಕಿಗೆ ಆಹುತಿಯಾಗಿದೆ ಎಂದು ಪಿಡಿಓ ಸತೀಶ್ ತಿಳಿಸಿದ್ದಾರೆ.ಘಟನಾ ಸ್ಥಳಕ್ಕೆ ಉಡುಪಿ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ, ಬೆಂಕಿಯನ್ನು ನಂದಿಸಿದ್ದಾರೆ.

Related Posts

Leave a Reply

Your email address will not be published.