ವಸತಿ ರಹಿತರಿಗೆ ಪ್ಲಾಟ್ ಹಸ್ತಾಂತರ : ಕೇರಳ ಸರ್ಕಾರದ ಮಹತ್ವದ ಯೋಜನೆ

ನಾಳೆ ರಾಜ್ಯದ ಮುಖ್ಯಮಂತ್ರಿ ಶ್ರೀ. ಪಿಣರಾಯಿ ವಿಜಯನ್ ಅವರು ಉದ್ಘಾಟನೆ ನೆರವೇರಿಸಲಿದ್ದಾರೆ. ನಾಳೆಯಿಂದ ಮನೆ, ಜಮೀನು ಇಲ್ಲದ 174 ಕುಟುಂಬಗಳು ಸ್ವಂತ ಮನೆ ಹೊಂದಲಿದ್ದು, ಇವರಿಗೆ ಸ್ವಂತ ಮನೆ ಕನಸಾಗಿತ್ತು.

ಈ ವಸತಿ ಸಮುಚ್ಚಯಗಳು ಕಣ್ಣೂರು ಜಿಲ್ಲೆಯ ಕದಂಪುರ್, ಕೊಲ್ಲಂ ಜಿಲ್ಲೆಯ ಪುನಲೂರ್, ಕೊಟ್ಟಾಯಂ ಜಿಲ್ಲೆಯ ವಿಜಯಪುರಂ ಮತ್ತು ಇಡುಕ್ಕಿ ಜಿಲ್ಲೆಯ ಕರಿಮಣ್ಣೂರಿನಲ್ಲಿವೆ. ಪ್ರತಿ ವಸತಿ ಸಮುಚ್ಚಯ ನಿರ್ಮಿಸಲು 6.7 ಕೋಟಿಯಿಂದ 7.85 ಕೋಟಿ ವೆಚ್ಚ ಮಾಡಲಾಗಿದೆ. ಎಲ್ಲಾ ಮನೆಗಳು ಎರಡು ಮಲಗುವ ಕೋಣೆ, ಒಂದು ಹಾಲ್ ಮತ್ತು ಕಿಚನ್ , ಶೌಚಾಲಯ, ಸ್ನಾನ ಗೃಹಗಳನ್ನೊಳಗೊಂಡಿವೆ. ಅಪಾರ್ಟ್‌ಮೆಂಟ್‌ಗಳಿಗೆ ಸಾಮಾನ್ಯ ಕಾರಿಡಾರ್, ಕೊಳವೆ ಬಾವಿ, ಕುಡಿಯುವ ನೀರು ಸಂಗ್ರಹಣೆ, ತ್ಯಾಜ್ಯ ವಿಲೇವಾರಿ ವ್ಯವಸ್ಥೆ, ಜನರೇಟರ್ ಮತ್ತು ಸೋಲಾರ್ ಲೈಟ್ ವ್ಯವಸ್ಥೆಯನ್ನು ಒದಗಿಸಲಾಗಿದೆ.

ಲೈಫ್ ಮಿಷನ್ ಮೂಲಕ ಈಗಾಗಲೇ 3,39,822 ಕುಟುಂಬಗಳಿಗೆ ಮನೆಗಳನ್ನು ಒದಗಿಸಿರುವುದು ಎಡ ಪ್ರಜಾಸತ್ತಾತ್ಮಕ ರಂಗದ ಸರ್ಕಾರದ ತನ್ನ ದೊಡ್ಡ ಸಾಧನೆಗಳಲ್ಲಿ ಒಂದಾಗಿದೆ. ಈ ವರ್ಷ ಒಂದು ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ಮನೆಗಳನ್ನು ಹಸ್ತಾಂತರಿಸಲಾಗುವುದು. ಇನ್ನೂ 25 ವಸತಿ ಸಮುಚ್ಚಯಗಳನ್ನು ನಿರ್ಮಿಸುವ ಗುರಿಯನ್ನು ಸರ್ಕಾರ ಹೊಂದಿದೆ.

Related Posts

Leave a Reply

Your email address will not be published.