ದಾಮಸ್ ಕಟ್ಟೆಯ ಪೊಂಪೈ ಹಿರಿಯ ಪ್ರಾರ್ಥಮಿಕ ಶಾಲೆಯ ಹಿಂಭಾಗ ಇಳಿಜಾರು ಪ್ರದೇಶಕ್ಕೆ ಆಕಸ್ಮಿಕ ಬೆಂಕಿ

ಕಿನ್ನಿಗೋಳಿ: ಕಿನ್ನಿಗೋಳಿಸಮೀಪದ ದಮಸ್ ಕಟ್ಟೆ ಪೊಂಪೈ ಹಿರಿಯ ಪ್ರಾರ್ಥಮಿಕ ಶಾಲೆಯ ಹಿಂಭಾಗ ಇಳಿಜಾರು ಪ್ರದೇಶಕ್ಕೆ ಇಂದು ಮಧ್ಯಾಹ್ನದ ಹೊತ್ತಿಗೆ ಆಕಸ್ಮಿಕ ಬೆಂಕಿ ತಗುಲಿ ನಂದಿಸಲು ಸ್ಥಳೀಯರು ಹರಸಾಹಸ ಪಡೆಯಬೇಕಾಯಿತು.ಬೆಂಕಿಯ ಕೆನ್ನಾಲಿಗೆಯಿಂದ ಮರ ಗಿಡಗಳು ಬೆಂಕಿಗಾಹುತಿಯಾಗಿದ್ದು , ಕೂಡಲೇ ಕಾರ್ಯಪ್ರವೃತ್ತರದ ದಾಮಸ್ ಕಟ್ಟೆಯ ರೆಮೆದಿ ಅಮ್ಮ ನವರ ಇಗರ್ಜಿಯ ಧರ್ಮಗುರುಗಳು ಮತ್ತು ಸ್ಥಳಿಯರು ಸಹಕಾರದಿಂದ ಹಾಗೂ ಮೂಡಬಿದ್ರೆಯ ಅಗ್ನಿಶಾಮಕದಳ ತಂಡದಿಂದ ಬೆಂಕಿಯನ್ನು ನಂದಿಸಿ ಹೆಚ್ಚಿನ ಅಪತ್ತನ್ನು ತಪ್ಪಿಸಿದ್ದಾರೆ.

Related Posts

Leave a Reply

Your email address will not be published.