ಕಿನ್ನಿಗೋಳಿ : ಚಿನ್ನದ ಒಡವೆಗಳನ್ನು ತೊಳೆಯುವ ನೆಪದಲ್ಲಿ ಹಗಲು ದರೋಡೆ

ಕಿನ್ನಿಗೋಳಿ: ಕಿನ್ನಿಗೋಳಿ ಸುತ್ತಮುತ್ತ ಚಿನ್ನದ ಒಡವೆಗಳನ್ನು ತೊಳೆಯುವ ನೆಪದಲ್ಲಿ ಹಗಲು ದರೋಡೆಗಿಳಿಯುವ ತಂಡ ಕಾರ್ಯಾಚರಿಸುತ್ತಿದೆ. ಮನೆ ಮನೆಗೆ ಭೇಟಿ ನೀಡುತ್ತಿರುವ ಯುವಕನೋರ್ವ ಚಿನ್ನದ ಒಡವೆಗಳನ್ನು ತೊಳೆಯುವ ನೆಪದಲ್ಲಿ ಒಡವೆಗಳನ್ನು ಪಡೆದು, ತನ್ನ ಬಳಿ ಇರುವ ಪುಡಿಯೊಂದರಲ್ಲಿ ತನ್ನ ಪಾತ್ರೆಯಲ್ಲಿರುವ ನೀರಿನಲ್ಲಿ ತೊಳೆಯುತ್ತಾನೆ ಚಿನ್ನದ ಒಡವೆಗಳಿಗೆ ಹೊಳಪು ಬರುತ್ತದೆ ಅದರೆ ಒಡವೆಯ ಸುಮಾರು 25% ಕರಗಿ ಅವರಲ್ಲಿರುವ ನೀರಿನಲ್ಲಿರುತ್ತದೆ. ಅದನ್ನು ಆ ಯುವಕ ತೆಗೆದುಕೊಂಡು ಹೋಗುತ್ತಿದ್ದು, ಕಿನ್ನಿಗೋಳಿ ಸುತ್ತಮುತ್ತ ಎರಡು ಮೂರು ಕಡೆಗಳಲ್ಲಿ ಇಂತಹ ಪ್ರಕರಣ ಬೆಳಕಿಗೆ ಬಂದಿದ್ದು, ಚಿನ್ನದ ಒಡವೆಗಳನ್ನು ತೊಳೆದ ಮೂರು ನಾಲ್ಕು ಗಂಟೆಗಳಲ್ಲಿ ತುಂಡು ತುಂಡಾಗುತ್ತದೆ ಎಂದು ಮೋಸ ಹೋದವರು ಪತ್ರಿಕೆಗೆ ತಿಳಿಸಿದ್ದಾರೆ, ಕಿನ್ನಿಗೋಳಿ ಸಮೀಪದಲ್ಲಿ ಮನೆಯೊಂದರಲ್ಲಿ ಬಂಗಾರ ತೊಳೆಯುವಾಗ ಯುವಕನೋರ್ವ ಮೊಬೈನಲ್ಲಿ ಸೆರೆ ಹಿಡಿದಿದ್ದು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ. ಇವರ ಒಂದು ತಮ್ಡವಿದ್ದು ಒಬ್ಬಂಟಿಯಾಗಿ ಮನೆ ಮನೆಗೆ ತೆರಳುವ ಕಾರ್ಯಾಚರಿಸುತ್ತಿರುವ ಸಾಧ್ಯತೆ ಇದೆ.

Related Posts

Leave a Reply

Your email address will not be published.