ಕಿನ್ನಿಮೂಲ್ಕಿ ಮೀನು ಮಾರಾಟ ಶೆಡ್ ನೆಲಸಮ

ಉಡುಪಿ: ನಗರದ ಕಿನ್ನಿಮೂಲ್ಕಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ಮೀನು ಮಾರಾಟ ಶೆಡ್ ನ್ನು ನೆಲಸಮಗೊಳಿಸಿದ ಪ್ರಕರಣ ಇವತ್ತು ನಗರಸಭೆಯಲ್ಲಿ ಪ್ರತಿಧ್ವನಿಸಿತು.ಕೆಲಹೊತ್ತು ಆಡಳಿತ ಪಕ್ಷ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ಜಟಾಪಟಿಗೂ ಕಾರಣವಾಯಿತು.ಕೊನೆಗೆ ಮೀನು ಮಾರಾಟ ಶೆಡ್ ನ್ನು ಅನಧಿಕೃತವಾಗಿ ಮೀನುಗಾರ ಮಹಿಳೆಯರಿಗೆ ಕಟ್ಟಿಸಿ ಕೊಟ್ಟ ಕಾಂಗ್ರೆಸ್ ನಗರಸಭಾ ಸದಸ್ಯೆ ಅಮೃತಾ ಕೃಷ್ಣಮೂರ್ತಿ ಮತ್ತು ರಮೇಶ್ ಕಾಂಚನ್ ಸಭೆಯಲ್ಲೇ ವಿಷಾದ ವ್ಯಕ್ತಪಡಿಸಿದರು.

ಐದು ದಿನಗಳ ಹಿಂದೆ ಕಿನ್ನಿಮೂಲ್ಕಿಯಲ್ಲಿ ಆರು ಮಂದಿ ಮೀನುಗಾರ ಮಹಿಳೆಯರಿಗೆ ಕಾಂಗ್ರೆಸ್ ಸದಸ್ಯೆ ಅಮೃತಾ ಕೃಷ್ಣಮೂರ್ತಿ ಪತಿ ಕಟ್ಟಿಸಿಕೊಟ್ಟದ್ದ ಶೆಡ್ ನ್ನು ನಗರಸಭೆ ಏಕಾಏಕಿ ಕೆಡವಿತ್ತು.ಇದರ ಬಗ್ಗೆ ಇಂದಿನ ನಗರಸಭೆ ಮೀಟಿಂಗಲ್ಲಿ ತೀವ್ರ ಚರ್ಚೆ ನಡೆಯಿತು.ಕೆಡವಿದ ಬಗ್ಗೆ ಕಾಂಗ್ರೆಸ್ ಸದಸ್ಯರು ಅಕ್ಷೇಪ ಎತ್ತಿದಾಗ ಬಿಜೆಪಿ ಸದಸ್ಯರು ಮುಗಿಬಿದ್ದರು.ನಗರಸಭೆ ಸದಸ್ಯರೇ ಅನಧಿಕೃತ ಶೆಡ್ ನಿರ್ಮಾಣ ಮಾಡಿದ್ದು ತಪ್ಪು.ಅನಧಿಕೃತ ಎಂದ ಮೇಲೆ ನೋಟೀಸ್ ನೀಡಲಾಗುವುದಿಲ್ಲ.ಕಾನೂನು ಪ್ರಕಾರ ಕೆಡವಲಾಗಿದೆ ಎಂದು ಬಿಜೆಪಿ ಸದಸ್ಯರು ಉತ್ತರ ನೀಡಿದರು.ಅದರೆ ನಗರದಲ್ಲಿ ಸಾಕಷ್ಟು ಅನಧಿಕೃತ ಕಟ್ಟಡಗಳಿವೆ,ಅದನ್ನು ಯಾವಾಗ ಕೆಡವುತ್ತೀರಿ ಎಂದು ವಿರೋಧ ಪಕ್ಷ ಕಾಂಗ್ರೆಸ್ ಸದಸ್ಯರು ಕೇಳಿದರು.ಇದಕ್ಕೆ ಉತ್ತರಿಸಿದ ಶಾಸಕ ರಘುಪತಿ ಭಟ್ ,ಎಲ್ಲ ಅನಧಿಕೃತ ಕಟ್ಟಡಗಳನ್ನು ಕೆಡವುತ್ತೇವೆ ಎಂದು ಉತ್ತರಿಸಿದರು. ಕೊನೆಗೆ ಅನಧಿಕೃತ ಶೆಡ್ ನಿರ್ಮಾಣ ಮಾಡಿದ್ದಕ್ಕಾಗಿ ಕೈ ಸದಸ್ಯರು ವಿಷಾದ ವ್ಯಕ್ತಪಡಿಸುದರು.ಸಭೆಯ ಅಧ್ಯಕ್ಷತೆಯನ್ಬು ನಗರ ಸಭಾಧ್ಯಕ್ಷೆ ಸುಮಿತ್ರಾ ನಾಯಕ್ ವಹಿಸಿದ್ದರು.

Related Posts

Leave a Reply

Your email address will not be published.